Monday, December 23, 2024

ರಸ್ತೆಗುಂಡಿಗಳಿಂದ BMTC – BBMP ನಡುವೆ ಶುರುವಾಯ್ತು ಪೀಕಲಾಟ

ಬೆಂಗಳೂರು : ರಸ್ತೆಗುಂಡಿಗಳಿಂದ ಬಿಎಂಟಿಸಿ – ಬಿಬಿಎಂಪಿ ನಡುವೆ ಮತ್ತೆ ಪೀಕಲಾಟ ಶುರುವಾದ್ದು, ರಸ್ತೆಗುಂಡಿಗಳನ್ನ ಮುಚ್ಚುವಂತೆ BMTC – BBMP ಪದೇ ಪದೇ ಒತ್ತಾಯ ಮಾಡುತ್ತಿದೆ.

ನಗರದ ರಸ್ತೆಗುಂಡಿಗಳಿಂದಲೇ ಎಲೆಕ್ಟ್ರಿಕ್ ಬಸ್​​ಗಳು ಕೆಟ್ಟು ನಿಲ್ಲುತ್ತಿವೆ. ಎಲೆಕ್ಟ್ರಿಕ್ ಬಸ್​​ಗಳ ತಾಂತ್ರಿಕ ದೋಷ ಕಾರಣ ಎನ್ನುತ್ತಿದೆ. ಆದರೆ ರಸ್ತೆಗುಂಡಿಗಳೇ ಕಾರಣ ಎನ್ನುತ್ತಿದ್ದಾರೆ ಬಿಎಂಟಿಸಿ ಅಧಿಕಾರಿಗಳು ಹೀಗಾಗಿ ಇ-ಬಸ್​​ಗಳಿಂದ BBMP ಹಾಗೂ BMTC ನಡುವೆ ಜಟಾಪಟಿ ಉಂಟಾಗಿದ್ದು, ರಸ್ತೆಗುಂಡಿಗಳನ್ನ ಮುಚ್ಚುವಂತೆ ಬಿಬಿಎಂಪಿಗೆ ಪದೇ ಪದೇ ಬಿಎಂಟಿಸಿ ಒತ್ತಾಯಿಸುತ್ತಿದೆ.

ಇನ್ನು, ರಸ್ತೆಗಿಳಿದ ಮೂರೇ ದಿನಕ್ಕೆ ಕೆಟ್ಟು ನಿಲ್ಲುತ್ತಿರೋ ಎಲೆಕ್ಟ್ರಿಕ್ ಬಸ್​​ಗಳು, ಎಲ್ಲೆಂದರಲ್ಲಿ ಕೆಟ್ಟು ನಿಲ್ಲೋ ಇ-ಬಸ್ ಗಳಿಂದ ಪ್ರಯಾಣಿಕರಿಗೂ ತಲೆನೋವು ಉಂಟಾಗಿದೆ. ಹೀಗಾಗಿ ಎಲೆಕ್ಟ್ರಿಕ್ ಬಸ್​​ಗಳಲ್ಲಿ ಪ್ರಯಾಣಿಸಲು ಬೆಂಗಳೂರಿಗರು ಹಿಂದೇಟು ಹಾಕುತ್ತಿದ್ದಾರೆ.

RELATED ARTICLES

Related Articles

TRENDING ARTICLES