ಬೆಂಗಳೂರು : ಗಣೇಶ ಹಬ್ಬ ಮುಗಿಯುತ್ತಿದ್ದಂತೆ ಎಲ್ಲೆಡೆ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯ ಆರಂಭವಾಗಿದೆ. ಬಿಬಿಎಂಪಿ ಗುರುತಿಸಿರುವಂತಹ ಸ್ಯಾಂಕಿ ಕಲ್ಯಾಣಿ, ಯಡಿಯೂರು ಕಲ್ಯಾಣಿ ,ಹಲಸೂರು ಹೀಗೆ ನಾನಾ ಭಾಗಗಳಲ್ಲಿ ಮೂರ್ತಿಗಳ ವಿಸರ್ಜನೆ ಆಗುತ್ತಿದೆ. ನಗರದಾದ್ಯಂತ ಗಣೇಶ ಹಬ್ಬದಂದು ತಾತ್ಕಾಲಿಕ ಕಲ್ಯಾಣಿ ಹಾಗೂ ಟ್ಯಾಂಕರ್‌ಗಳಲ್ಲಿ 1.6 ಲಕ್ಷ ಮೂರ್ತಿಗಳು ವಿಸರ್ಜನೆ ಮಾಡಲಾಯಿತು.
ಇನ್ನು, ಗಣೇಶ ವಿಸರ್ಜನೆ ಮಾಡುತ್ತಿರುವ ಸ್ಯಾಂಕಿ ಕೆರೆಯನ್ನು ಪ್ರತಿನಿತ್ಯ ಸ್ವಚ್ಛ ಮಾಡಲಾಗುತ್ತಿದೆ. ಮತ್ತು ನೀರು ವಾಸನೆ ಬರದಂತೆ ಸ್ಪ್ರೇ ಮಾಡಲಾಗುತ್ತಿದೆ. 10 ದಿನಗಳ ಕಾಲ ಗಣೇಶ ವಿಸರ್ಜನೆಗೆ ಅವಕಾಶ ಇದ್ದು , ಗಣೇಶ ವಿಸರ್ಜನೆ ಬಳಿಕ ಕಲ್ಯಾಣಿಗಳನ್ನ ಸ್ವಚ್ಛ ಮಾಡಲಾ ಗುತ್ತೆ ಅಂತ ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ .
ಇನ್ನು, POP ಗಣೇಶ ಬ್ಯಾನ್ ನಡುವೆಯೂ ಕೂಡ ಕಳೆದ ಎರಡು ದಿನದಲ್ಲಿ 20 ಸಾವಿರ POP ಗಣೇಶ ಮೂರ್ತಿ ವಿಸರ್ಜನೆ ಆಗಿದೆ . ಹೀಗಾಗಿ ಮುಂದಿನ ವರ್ಷವಾದರೂ ಸಂಪೂರ್ಣ ಕಡಿವಾಣ ಹಾಕುವ ಅಗತ್ಯವಿದೆ. ಒಟ್ಟಿನಲ್ಲಿ ಕೊರೋನಾ ಕಮ್ಮಿಯಾದ ಹಿನ್ನೆಲೆ ಈ ಬಾರಿ ಗಲ್ಲಿ -ಗಲ್ಲಿಯಲ್ಲಿ ಗಣೇಶ ಕೂತಿದ್ದ .
ಸ್ವಾತಿ ಪುಲಗಂಟಿ ಮೆಟ್ರೋ ಬ್ಯುರೋ ಬೆಂಗಳೂರು