Monday, December 23, 2024

ರಾಜಧಾನಿಯಲ್ಲಿ ಭರ್ಜರಿ ಕರಕುಶಲ ವಸ್ತುಗಳ ಪ್ರದರ್ಶನ

ಬೆಂಗಳೂರು : ಸಿಲಿಕಾನ್ ಸಿಟಿ​​ ಬೆಂಗಳೂರಿನಲ್ಲಿ ಫ್ಯಾಷನ್ ಪ್ರಿಯರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿದೆ. ಅದೇರೀತಿ ಕರ್ನಾಟಕ ಚಿತ್ರಕಲಾ ಪರಿಷತ್​ನಲ್ಲಿ ನಿನ್ನೆಯಿಂದ ಇಂಡಿಯನ್ ಆರ್ಟ್​ ಫೆಸ್ಟಿವಲ್ ಹೆಸರಿನಲ್ಲಿ ಮೇಳ ಆಯೋಜನೆ ಮಾಡಲಾಗಿದೆ.

ನಗರದಲ್ಲಿ ಹಬ್ಬ ಹರಿದಿನಗಳು ಹಾಗೂ ವೀಕೆಂಡ್ ಬಂದ್ರೆ ಮೇಳಗಳು ಕಾಮನ್ ಆಗಿರುತ್ತೆ. ಇನ್ನೇನು ದಸರಾ ಹಬ್ಬ ಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್​ನಲ್ಲಿ ನಿನ್ನೆಯಿಂದ ಇಂಡಿಯನ್ ಆರ್ಟ್​ ಫೆಸ್ಟಿವಲ್ ಹೆಸರಿನಲ್ಲಿ ಮೇಳ ಆಯೋಜನೆ ಮಾಡಲಾಗಿದೆ. ಮುಂದಿನ 10 ದಿನಗಳ ಕಾಲದ ಈ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಇರಲಿದೆ. ಮೇಳವನ್ನು ನಟಿ ಹಾಗೂ ರೂಪದರ್ಶಿಯರಾದ ಲಾಸ್ಯ ನಾಗರಾಜ್ ಹಾಗೂ ಸುಮನಾ ಗೌಡ ಉದ್ಘಾಟಿಸಿದರು.

RELATED ARTICLES

Related Articles

TRENDING ARTICLES