ಮಂಗಳೂರು: ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 3700 ಕೋಟಿ ರೂ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.
ಬಳಿಕ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ, 3700 ಕೋಟಿ ಯೋಜನೆಗಳಿಂದ ರಾಜ್ಯದಲ್ಲಿ ವ್ಯಾಪಾರ, ಉದ್ಯೋಗ, ಉತ್ಪಾದನೆ ಹೆಚ್ಚಳವಾಗಲಿದೆ. ಮೀನುಗಾರ ಬಂಧುಗಳ ಆದಾಯ ಹೆಚ್ಚಳಕ್ಕೆ ಈ ಯೋಜನೆ ಸಹಾಯಕಾರಿಯಾಗಲಿದೆ.
ಅಭಿವೃದ್ಧಿಪರ ಭಾರತಕ್ಕೆ ಮೇಕ್ ಇನ್ ಇಂಡಿಯಾ ಅಗತ್ಯವಾಗಿದೆ. 8 ವರ್ಷದಲ್ಲಿ ಭಾರತದ ಬಂದರುಗಳ ಸಾಮರ್ಥ್ಯ ಹೆಚ್ಚಳವಾಗಿದೆ. ದೇಶದ ಕರಾವಳಿಗೆ ಭದ್ರತೆಗೆ ಇಂದು ಅವಿಸ್ಮರಣೀಯ ದಿನವಾಗಿದೆ ಎಂದರು.
ಅಭಿವೃದ್ಧಿ ಭಾರತಕ್ಕೆ ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ವಸ್ತುಗಳು ಮಾರಾಟವಾಗಬೇಕು. ಮಂಗಳೂರಿನ ಮೀನುಗಾರರ ಆರ್ಥಿಕ ಸ್ಥಿತಿಗತಿ ಹೆಚ್ಚಿಸಲು ಈ ಯೋಜನೆ ನಿರ್ಮಿಸಿದ್ದೇವೆ, ರೈತರು ಮೀನುಗಾರರು ಅಂತರಾಷ್ಟ್ರೀಯ ಮಟ್ಟಕ್ಕೇರಲು ಈ ಯೋಜನೆ ಸಹಾಯವಾಗಲಿದೆ. ಮಂಗಳೂರು ಬಂದರಿನಲ್ಲಿ ಹೊಸ ತಂತ್ರಜ್ಱನವನ್ನು ಅಳವಡಿಕೆ ಮಾಡಲಾಗಿದೆ. ಮಂಗಳೂರು ಬಂದರು ವಿಸ್ತರಣೆ ಆಗಿದೆ ಎಂದು ಮೋದಿ ತಿಳಿಸಿದರು.
ಹೊಸ ಹೊಸ ಉದ್ಯೋಗವಕಾಶ ನೀಡಲು ಈ ಯೋಜನೆ, ಕರ್ನಾಟಕದಲ್ಲಿ 8 ಲಕ್ಷ ಮನೆಗಳು ಹಸ್ತಾಂತರವಾಗಿದೆ. ಮೊದಲ ಸ್ವದೇಶಿ ನಿರ್ಮಿತ ಯುದ್ಧನೌಕೆ ದೇಶಕ್ಕೆ ಸಮರ್ಪಣೆಯಾಗಿದೆ. ವನ್ ಡಿಸ್ಟ್ರಿಕ್ಟ್, ವನ್ ಪ್ರೊಡಕ್ಟ್ ಅನ್ನುವುದು ನಮ್ಮ ಗುರಿಯಾಗಬೇಕು, ಈಗಾಗಲೇ ರೈಲ್ವೆ ವಿಭಾದಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ನಾವು ಪಣ ತೊಡಬೇಕು.ಉತ್ಪಾದಕತೆ ಹೆಚ್ಚಿಸುವುದು ದೇಶದ ಅಭಿವೃದ್ಧಿಗೆ ಅನಿವಾರ್ಯ, ಕರಾವಳಿ ಮೂಲ ಸೌಕರ್ಯ ಅಭಿವೃದ್ಧಿಗೆ ಸಾಗರಮಾಲಾ ಪ್ರೊಜೆಕ್ಟ್ ಶಕ್ತಿ ತುಂಬಿದೆ.
8 ವರ್ಷದಲ್ಲಿ ಉತ್ಪಾದನೆ ಸಾಮರ್ಥ್ಯ ದುಪ್ಪಟ್ಟು ಆಗಿದೆ. 2014 ರಲ್ಲಿ ಎಷ್ಟಿತ್ತೋ ಅದಕ್ಕಿಂತ ಹೆಚ್ಚು ಆಗಿದೆ. ಮಂಗಳೂರಿನಲ್ಲಿ ಗ್ಯಾಸ್, ಲಿಕ್ವಿಡ್ ಪೆಟ್ರೋಲ್ ಸ್ಟೋರೇಜ್ ಸಾಮರ್ಥ್ಯ ಹೆಚ್ಚಲಿದೆ. ಭಾರತದ ಪರಿಸರ ಕೇಂದ್ರಿತ ಅಭಿವೃದ್ಧಿಗೆ ನಾವು ಒತ್ತು ಕೊಡಬೇಕಾಗಿದೆ. 8 ವರ್ಷಗಳಲ್ಲಿ ದೇಶದ ಮೂಲ ಸೌಕರ್ಯ ಹೆಚ್ಚಳವಾಗಿದ್ದು ಅದರ ಲಾಭ ಕರ್ನಾಟಕಕ್ಕೆ ಸಿಕ್ಕಿದೆ. ಎಂಟು ವರ್ಷಗಳಲ್ಲಿ 70 ಸಾವಿರ ಕೋಟಿ ಯೋಜನೆಗಳು ರಾಜ್ಯಕ್ಕೆ ಬಂದಿವೆ. ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ವೇ, ರೇಲ್ವೇ ಡಬಲ್, ವಿದ್ಯುದೀಕರಣ, ರಿಂಗ್ ರೋಡ್ ಬರುತ್ತಿದೆ ಎಂದು ಮೋದಿ ಭಾಷಣದಲ್ಲಿ ಹೇಳಿದರು.
ಕರ್ನಾಟಕದ ಸಣ್ಣ ರೈತರಿಗೆ ಸುಮಾರು 10 ಸಾವಿರ ಕೋಟಿ ಸಿಕ್ಕಿದೆ. ಬೆಂಗಳೂರಿನ ಸ್ಯಾಟಲೈಟ್ ರಸ್ತೆ ಪೂರ್ಣವಾಗಿದೆ. ದೇಶದ ಮೂಲೆ ಮೂಲೆಗೂ ಹೈಸ್ಪೀಡ್ ಇಂಟರ್ನೆಟ್ ನೀಡಲು ತಯಾರು ಮಾಡಲಾಗಿದೆ. ಕರಾವಳಿ ಪ್ರದೇಶವು ದೇಶದ ಪ್ರವಾಸಿಗರನ್ನ ಸೆಳೆಯಲು ಪ್ರಯತ್ನ ಮಾಡಬೇಕು. ಕಳೆದು 8 ವರ್ಷಗಳಲ್ಲಿ ನಾಲ್ಕು ಪಟ್ಟು ಮೇಟ್ರೊ ರೈಲು ಹೆಚ್ಚಳವಾಗಿದೆ. ಜನರು ಆಸೆ ಆಕಾಂಕ್ಷೆ ಇಡೇರಿಸಲು ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇವೆ ಎಂದರು.