ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನವಾಗಿರುವ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳನ್ನು ಇಂದು ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದರು. ಕೋರ್ಟ್ಗೆ ಹೋಗುವಾಗ ಮುರುಘಾ ಶ್ರೀಗಳು ವ್ಹೀಲ್ ಚೇರ್ನಲ್ಲಿ ತೆರಳಿದ್ದರು, ವಿಚಾರಣೆ ಬಳಿಕ ಹೊರ ಬರುವಾಗ ಶ್ರೀಗಳು ಸರಾಗವಾಗಿ ನಡೆದುಕೊಂಡೆ ಬಂದರು.
ನಿನ್ನೆ ತಾನೆ ನಡೆದುಕೊಂಡೆ ಆರೋಗ್ಯ ತಪಾಸಣೆಗೆ ಹೋಗಿದ್ದೀರಿ, ಇದ್ದಕ್ಕಿದ್ದ ಹಾಗೇ ಅದೇಗೆ ಆರೋಗ್ಯ ತಪ್ಪಿತು ಎಂದು ಕೋರ್ಟ್ ಶ್ರೀಗಳನ್ನ ಪ್ರಶ್ನೆ ಮಾಡಿ, ಮೂರು ದಿನ ಶ್ರೀಗಳನ್ನ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿತು. ವಿಚಾರಣೆ ಬಳಿಕ ಶ್ರೀಗಳು ಭಾರೀ ನಿರಾಸೆಯಿಂದ ಕೋರ್ಟ್ನಿಂದ ನಡೆದುಕೊಂಡು ಬಂದರು. ನನಗೆ ಚಿಕಿತ್ಸೆ ಬೇಕು ಎದೆ ನೋವು ಎಂದು ಕೋರ್ಟ್ ಮುಂದೆ ಶ್ರೀಗಳು ಹೇಳಿದ್ದರು.
ಇದಲ್ಲದೇ ಕೋರ್ಟ್ ಮುಂದೆ ನಮ್ಮ ಸಂಪ್ರದಾಯಕ್ಕೆ ತಕ್ಕಂತೆ ಊಟ ನೀಡಿ ಎಂದು ಜಿಲ್ಲಾ ನ್ಯಾಯಾಧೀಶರ ಮುಂದೆ ಮುರುಘಾ ಮಠದ ಶ್ರೀಗಳು ಕೇಳಿಕೊಂಡಿದ್ದಾರೆ. ಇದಕ್ಕೆ ಆಕ್ಷೇಪಿಸಿದ ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶ ಕೋಮಲ, ಈ ರೀತಿಯಲ್ಲಿ ಊಟ ಕೊಡಲು ಬರುವುದಿಲ್ಲ. ಎಲ್ಲ ಆರೋಪಿಗಳಂತೆ ನಿಮಗೂ ಊಟೋಪಚಾರ, ನೀಡಲಾಗುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನ್ಯಾಯಧೀಶರು ಹೇಳಿದ್ದಾರೆ. ಇನ್ನು ಶ್ರೀಗಳು ಜೈಲಿನಲ್ಲಿ ಪ್ರಾರ್ಥನೆ ಮಾಡಬಹದು ಎಂದು ಜಿಲ್ಲಾ ನ್ಯಾಯಾಲಯ ತಿಳಿಸಿದೆ.
ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನವಾಗಿರುವ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳನ್ನು 3 ದಿನ ಹೆಚ್ಚುವರಿ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರು ಒಪ್ಪಿಸಿದ್ದಾರೆ.