Sunday, January 5, 2025

ಲಕ್ಕಿಮ್ಯಾನ್ ಟ್ರೈಲರ್​​​​​ನಲ್ಲಿ ನಗುಮುಖದ ‘ರತ್ನ’ನ್ ಪರಪಂಚ

ಕೋಟಿ ಕೋಟಿ ಅಭಿಮಾನಿಗಳ ಪಾಲಿಗೆ ಭಗವಂತನ ಸ್ವರೂಪಿಯಾಗಿರೋ ಅಪ್ಪು ಸಿನಿಮಾದಲ್ಲಿಯೂ ಸಾಕ್ಷಾತ್​ ದೇವರಾಗಿದ್ದಾರೆ. ಯೆಸ್​​. ನಗುಮೊಗದ ಸರದಾರ ಅಪ್ಪು ಲಕ್ಕಿ ಮ್ಯಾನ್​ ಚಿತ್ರದಲ್ಲಿ ವಿಷ್ಣುವಿನ ಅವತಾರದಲ್ಲಿ ಮಿಂಚಿದ್ದಾರೆ. ಸೆನ್ಷೇಷನ್​ ಕ್ರಿಯೇಟ್ ಮಾಡಿರೋ ಲಕ್ಕಿಮ್ಯಾನ್​ ಟ್ರೈಲರ್​ ಯ್ಯೂ ಟ್ಯೂಬ್​ನಲ್ಲಿ ಧೂಳೆಬ್ಬಿಸ್ತಿದೆ. ಫನ್​ ವಿತ್​ ಎಮೋಷನ್​ ಫ್ರೇವರ್​​ನಲ್ಲಿ ಲಕ್ಕಿ ಮ್ಯಾನ್​ ಟ್ರೈಲರ್​ ಹೇಗಿದೆ ಗೊತ್ತಾ..?  ನೀವೇ ಓದಿ.

  • ಮುರುಳಿ ಮೋಹನ ಕೃಷ್ಣನ ಅವತಾರದಲ್ಲಿ ಅಪ್ಪು ಮಹಿಮೆ..!

ಡಾರ್ಲಿಂಗ್​ ಕೃಷ್ಣ ಹಾಗೂ ಸಂಗೀತ ಶೃಂಗೇರಿ ಕಾಂಬೀನೇಷನ್​​ನಲ್ಲಿ ಮೂಡಿ ಬರ್ತಿರೋ ಸಿನಿಮಾ ಲಕ್ಕಿ ಮ್ಯಾನ್​​​. ಅಪ್ಪು ಅಭಿಮಾನಿಗಳಿಗೆ 100 % ಲಕ್ಕಿ ಸಿನಿಮಾ ಇದು. ಅಪ್ಪು ಅಮೋಘ ನಟನೆಯನ್ನು, ಮನಮೋಹಕ ನಗುವನ್ನು ಕಣ್ತುಂಬಿಕೊಳ್ಳೋ ಸದವಕಾಶ ಈ ಸಿನಿಮಾ ಮೂಲಕ ಸಿಗಲಿದೆ. ಯೆಸ್​. ಬೆಟ್ಟದ ಹೂ ಪುನೀತ್​ ರಾಜ್​ಕುಮಾರ್ ಅಭಿನಯದ ಗಂಧದ ಗುಡಿ, ಲಕ್ಕಿ ಮ್ಯಾನ್ ಸಿನಿಮಾಗಳು ಅಪ್ಪು ನಟಿಸಿದ ಕೊನೆಯ ಸಿನಿಮಾಗಳಾಗಿವೆ.

ಲಕ್ಕಿ ಮ್ಯಾನ್​​ ಚಿತ್ರದ ಟ್ರೈಲರ್​ ರಿಲೀಸ್​ ಆಗಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿದೆ. ಟ್ರೈಲರ್​​ನಲ್ಲಿ ಅಪ್ಪುನಾ ಭಗವಂತನದ ರೂಪದಲ್ಲಿ ನೋಡಿ ಫ್ಯಾನ್ಸ್​ ಕೂಡ ಥ್ರಿಲ್​​ ಆಗಿದ್ದಾರೆ. ಕೈಯಲ್ಲಿ ಸುದರ್ಶನ ಚಕ್ರ ಹಿಡಿದು ಕೃಷ್ಣನ ರೂಪದಲ್ಲಿ ಅಪ್ಪು ಬರ್ತಿದ್ದಂತೆ, ಫ್ಯಾನ್ಸ್​ ಕಣ್ಣಾಲಿಗಳು ತುಂಬಿ ಬಂದಿವೆ. ಪ್ರತಿ ಮನೆ ಮನಗಳಲ್ಲೂ ದೇವರಾಗಿರೋ ಅಪ್ಪುನಾ ದೇವರ ರೂಪದಲ್ಲಿ ಕಂಡು ಕೋಟ್ಯಂತರ ಅಭಿಮಾನಿಗಳು ಭಾವುಕರಾಗಿದ್ದಾರೆ. ಯುವರತ್ನನ ಸ್ಪೆಷಲ್​ ಎಂಟ್ರಿಗೆ ಕ್ಲೀನ್​ ಬೋಲ್ಡ್​ ಆಗಿದ್ದಾರೆ.

  • ಅಪ್ಪು ಮೈನವಿರೇಳಿಸೋ ನೃತ್ಯ ಮಿಸ್​ ಮಾಡ್ಕೋಬೇಡಿ..!
  • ಮತ್ತೆ ಭುವಿಗಿಳಿದು ಬರಲಿದ್ದಾರೆ ಕನ್ನಡದ ಮಿನುಗು ತಾರೆ

ಎರಡು ನಿಮಿಷ 25 ಸೆಕೆಂಡುಗಳ ಕಾಲ ಲಕ್ಕಿ ಮ್ಯಾನ್​ ಟ್ರೈಲರ್​​​​ ನಗಿಸುತ್ತದೆ. ಕೆಲವು ಕಡೆ ಅಳಿಸುತ್ತದೆ. ಬಾಲ್ಯದ ಗೆಳತಿಯನ್ನೆ ಸಂಗಾತಿಯಾಗಿ ಪಡೆಯುವ ಡಾರ್ಲಿಂಗ್​ ಕೃಷ್ಣ ಮ್ಯಾಚ್​ ಆಗದ ಭಾವನೆಗಳಲ್ಲಿ ತೊಳಲಾಡ್ತಿದ್ದಾರೆ. ಜತೆಗೆ ಸ್ಕೂಲ್​ ಡೇಸ್​​​ನಲ್ಲಿ ಲವ್ ಆಗಿದ್ದ ಮೀರಾ ಎಂಟ್ರಿಯಿಂದ ಡಾರ್ಲಿಂಗ್​ ಕೃಷ್ಣನ ಜೀವನದಲ್ಲಿ ಹೊಸ ಕಳೆ ಬಂದಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋ ಹೆಂಡತಿ, ಲೈಫಲ್ಲಿ ಬಿರುಗಾಳಿಯಂತೆ ಎಂಟ್ರಿ ಕೊಡೋ ಮೀರಾ. ಕೊನೆಯಲ್ಲಿ ಏಕಾಂಗಿಯಾಗೋ ಡಾರ್ಲಿಂಗ್​​ ಕೃಷ್ಣನ ಪಾಡು ರೋಚಕವಾಗಿದೆ.

ಚಿತ್ರದಲ್ಲಿ ಮನರಂಜನೆಯಂತೂ ಡಬಲ್​ ಆಗಲಿದೆ. ಅಪ್ಪು, ಇಂಡಿಯನ್​ ಮೈಕಲ್​ ಜಾಕ್ಸನ್​ ಪ್ರಭುದೇವ ಅವ್ರ ಮೈನವಿರೆಳಿಸೋ ನೃತ್ಯವಿದೆ. ಇದನ್ನು ಖಂಡಿತ ಮಿಸ್​ ಮಾಡ್ಕೋಬೇಡಿ ಅಂತಿದೆ ಚಿತ್ರತಂಡ. ಟ್ರೈಲರ್​​ ಕೊನೆಯಲ್ಲಿ ಕೃಷ್ಣನಾಗಿ ಎಂಟ್ರಿ ಕೊಡೋ ಅಪ್ಪು ಕಂಡು ರೋಮಾಂಚನದ ಅನುಭವಾಗುತ್ತದೆ. ಸೆಪ್ಟೆಂಬರ್​ 09ಕ್ಕೆ ಸಿಲ್ವರ್​ ಸ್ಕ್ರೀನ್​ ಮೇಲೆ ಅಪ್ಪು ಲೀಲೆಯನ್ನು ನೋಡಬಹುದು.  ಡಾರ್ಲಿಂಗ್​ ಕೃಷ್ಣನ ಲೈಫ್​ನಲ್ಲಾಗಿರೋ ಮಿಸ್ಟೇಕ್ಸ್​ ಎಲ್ಲಾ ಸರಿ ಮಾಡೋಕೆ ಸೆಕೆಂಡ್​ ಚಾನ್ಸ್ ಕೊಡಲಿದ್ದಾರೆ ದೊಡ್ಮನೆಯ ಯುವರತ್ನ.

ಚಿತ್ರದಲ್ಲಿ ರೋಶಿನಿ ಪ್ರಕಾಶ್​, ರಂಗಾಯಣ ರಘು, ನಾಗ ಭೂಷಣ್​, ಸಾಧು ಕೋಕಿಲ ಯೋಗರಾಜ್​ ಭಟ್​ ಸೇರಿದಂತೆ ಮುಂತಾದ ಕಲಾವಿದರ ಸಮ್ಮಿಲನವಿದೆ. ಎಸ್​. ನಾಗೇಂದ್ರ ಪ್ರಸಾದ್​ ನಿರ್ದೇಶನದಲ್ಲಿ ಸಿನಿಮಾ ಕಮಾಲ್​ ಮಾಡೋಕೆ ತುದಿಗಾಲಲ್ಲಿ ನಿಂತಿದೆ. ಮೀನಾಕ್ಷಿ ಸುಂದರಂ, ಸುಂದರ ಕಾಮರಾಜ್​​ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದು, ವಿಜಯ್​ ವಿಕ್ಕಿ ಮ್ಯೂಸಿಕ್​ ಮೋಡಿ ಮಾಡಿದೆ. ಟ್ರೈಲರ್​ ಮೂಲಕ ಮ್ಯಾಜಿಕ್​ ಮಾಡಿರೋ ಲಕ್ಕಿ ಮ್ಯಾನ್​​ ಬಿಗ್​ ಸ್ಕ್ರೀನ್​ ಮೇಲೆ ಕಮಾಲ್​ ಮಾಡೋದು ಪಕ್ಕಾ ಆಗಿದೆ.

ರಾಕೇಶ್​ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES