Monday, December 23, 2024

ಸಿಎಂ ಬೊಮ್ಮಾಯಿ ಸರ್ಕಾರ ಬೆಂಕಿ ಇಟ್ಟಿದ್ದೆ ಅವ್ರ ಸಾಧನೆ: ಕುಮಾರಸ್ವಾಮಿ

ಬೆಂಗಳೂರು: ಬೆಂಗಳೂರು ರಸ್ತೆಗಳಲ್ಲಿ ನೀರು ತುಂಬಿರುವ ಪರಿಸ್ಥಿತಿಗೆ ಸಿದ್ದರಾಮಯ್ಯ, ಕುಮಾರಸ್ವಾಮಿ ಕಾರಣ ಎಂದ ಸಿಎಂ ಹೇಳಿಕೆ ವಿಚಾರವಾಗಿ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ.

ಭೂಗಳ್ಳರಿಗೆ ನನ್ನಿಂದ ಒಳ್ಳೆಯದಾಗರೋ ಒಂದು ತೀರ್ಮಾನ ನಾನು ತೆಗೆದುಕೊಂಡಿರೋದು ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿಎಂ ಬೊಮ್ಮಾಯಿ ಅವರಿಗೆ ಕುಮಾರಸ್ವಾಮಿ ಸವಾಲ್ ಹಾಕಿದರು.

ಕಾಂಗ್ರೆಸ್ ಬಗ್ಗೆ ಸಿಎಂ ಏನ್ ಬೇಕಾದ್ರ ಮಾತಾಡಲಿ, ನನ್ನ ಬಗ್ಗೆ ಮಾತಾಡೋವಾಗ ನೋಡಿಕೊಂಡು ಮಾತಾಡಲಿ. ಫೆರಿಫೆರಲ್ ರಿಂಗ್ ರೋಡ್ ಗೆ 6 ಸಾವಿರ ಕೋಟಿ ಯೋಜನೆ ರೂಪಿಸಿದ್ದೆ, ರಾಜಕಾಲುವೆ ಅಭಿವೃದ್ಧಿಗೆ ಸಾವಿರಾರು ಕೋಟಿ ರಿಲೀಸ್ ಮಾಡಿದ್ದೀನಿ ಅಂತ ಸಿಎಂ ಹೇಳ್ತಾರೆ, ಹಾಗಾದರೆ ಅ ಹಣ ಯಾರ ಮನೆಗೆ ಹೋಯ್ತು. ಬಿಬಿಎಂಪಿ ಅವರ ಕೈಯಲ್ಲಿ ಇತ್ತು. ಏನ್ ಮಾಡಿದ್ರು ಬೆಂಕಿ ಇಟ್ಟಿದ್ದೆ ಅವರ ಸಾಧನೆ ಎಂದರು.

ನನ್ನ ಎರಡು ಅವಧಿಯಲ್ಲಿ ಅಕ್ರಮಕ್ಕೆ ಪೋಷಣೆ ಮಾಡಿರೋ ದಾಖಲಾತಿ ಬಿಡುಗಡೆ ಮಾಡಲಿ, ಸರ್ಕಾರಿ ಜಮೀನು ಲೂಟಿ ಹೊಡೆಯೋ‌ ಬಗ್ಗೆ ಸದನ ಸಮಿತಿ ಮಾಡಿದ್ದೆ, ಯಾರ್ ಕಾಲದಲ್ಲಿ ಏನ್ ಆಗಿದೆ ಅಂತ ಸಿಎಂ ಶ್ವೇತ ಪತ್ರ ಹೊರಡಿಸಲಿ, ಕೆಂಪೇಗೌಡ ಪ್ರತಿಮೆ ಉದ್ಘಾಟನಾ ಅಭಿಯಾನ ವಿಚಾರ, ಈಗೇನೋ ಕೆಂಪೇಗೌಡ ಏರ್ ಫೊರ್ಟ್ ನಲ್ಲಿ ಮಣ್ಣು ಸಂಗ್ರಹ ಮಾಡಿ ಥೀಮ್ ಪಾರ್ಕ್ ಮಾಡ್ತೀನಿ ಅಂತಿದ್ದಾರೆ.

ಅಮರಾವತಿ ಕಟ್ಟಲು ಮಣ್ಣು ತಂದರು ಮೋದಿ. ಏನ್ ಆಯ್ತು ನೋಡಿದ್ದೇವೆ. ಈಗ ರಾಜ್ಯದಲ್ಲಿ ಮಣ್ಣಿನ ಸಂಗ್ರಹ ಅಂತೆ, ಮೊದಲು ಮಳೆಯಿಂದ ಆಗಿರೋ ಸಮಸ್ಯೆಯ ಜನರಿಗೆ, ರೈತರಿಗೆ ಅನುಕೂಲ ಮಾಡಿಕೊಡಿ, ಇವರದ್ದೆಲ್ಲ ಕೇವಲ ಪ್ರಚಾರ ಅಷ್ಟೆ, ಕಳೆದ ಬಾರಿ ಸಿಎಂ ಪ್ರದಕ್ಷಿಣೆ ಹಾಕಿದ್ರು. ಸಮಸ್ಯೆ ಪರಿಹಾರ ಆಗಿಲ್ಲ. ಇದಕ್ಕಿಂತ ಉದಾಹರಣೆ ಬೇಕಾ ಎಂದು ಸಿಎಂ ವಿರುದ್ದ ಕುಮಾರಸ್ವಾಮಿ ಕಿಡಿ ಕಾರಿದರು.

RELATED ARTICLES

Related Articles

TRENDING ARTICLES