Monday, December 23, 2024

ಕಾರು-ಬಸ್ ನಡುವೆ ಅಪಘಾತ, ಕಾರಿನಲ್ಲಿದ್ದ ಇಬ್ಬರ ಸಾವು.!

ಗದಗ: ಕಾರು ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮವಾಗಿ ಕಾರಿನಲ್ಲಿದ್ದ ಇಬ್ಬರ ಸಾವೀಗಿಡಾದ ಘಟನೆ ಜಿಲ್ಲೆಯ ನಗರಗುಂದ ತಾಲೂಕಿನ ಕಲಕೇರಿ ಗ್ರಾಮದ ಬಳಿ ನಡೆದಿದೆ.

ಬಸವರಡ್ಡಿ(50), ಹನುಮಂತಗೌಡ (48) ಮೃತ ದುರ್ದೈವಿಗಳು, ಇನ್ನೂಳಿದ ಕಾರಿನಲ್ಲಿದ್ದ ನವೀನ್ ಹಾಗೂ ಮಂಜುನಾಥ ಗಂಭೀರ ಗಾಯಗಳಾಗಿದ್ದು, ನವಲಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗದಗದಿಂದ ನರಗುಂದ ಕಡೆಗೆ ಹೊರಟ್ಟಿದ ಬಸ್, ಬಾಗಲಕೋಟೆ ಕಡೆಯಿಂದ ನವಲಗುಂದಕ್ಕೆ ಹೊರಟ್ಟಿದ ಕಾರು ನಡುವೆ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಬಾಗಲಕೋಟೆಗೆ ಅಂತ್ಯಕ್ರಿಯೆಗೆ ಹೋಗಿ ಮರಳಿ ಬರುವ ವೇಳೆ ದುರ್ಘಟನೆ ನಡೆದಿದೆ.

ಅಪಘಾತ ಸ್ಥಳಕ್ಕೆ ನರಗುಂದ ಡಿವೈಎಸ್ಪಿ ವೈ ಎಸ್ ಏಗನಗೌಡ್ರ ಹಾಗೂ ಸಿಪಿಐ ಮಲ್ಲಯ್ಯ ಮಠಪತಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES