Monday, December 23, 2024

ಮುರುಘಾ ಶ್ರೀಗಳು ಪೊಲೀಸ್​ ಕಸ್ಟಡಿಗೆ, ಜಿಲ್ಲಾ ನ್ಯಾಯಾಲಯ ಆದೇಶ

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನವಾಗಿರುವ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳನ್ನು ಇಂದು ಮದ್ಯಾಹ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಮುರುಘಾ ಶ್ರೀಗಳನ್ನ ಪೊಲೀಸ್​ ಕಸ್ಟಡಿಗೆ ಒಪ್ಪಿಸಿ ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರು ಆದೇಶಿಸಿದ್ದಾರೆ.

ಸೆಪ್ಟಂಬರ್​ 5 ರವರೆಗೆ ಶ್ರೀಗಳನ್ನ ಪೊಲೀಸ್​ ಕಸ್ಟಡಿಗೆ ಒಪ್ಪಿಸಿ ಮ್ಯಾಜಿಸ್ಟ್ರೇಟ್​ ಕೋರ್ಟ್​ನಿಂದ ಮಹತ್ವದ ಆದೇಶ ನೀಡಿದೆ. ಶ್ರೀಗಳು ಎಲ್ಲಾ ರೀತಿಯಲ್ಲಿ ನಿನ್ನೆ ಹುಷಾರು ಇದ್ದರು. ಇದಕ್ಕಿದ್ದ ಹಾಗೆ ಅದೇಗೆ ಅನಾರೋಗ್ಯ ತಪ್ಪಿದರು ಎಂದು ಶ್ರೀಗಳಿಗೆ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.

ನಿನ್ನೆ ಆರೋಪಿ ಮುರುಘಾ ಶ್ರೀಗಳನ್ನ ತನಿಖೆ ಆರಂಭಿಸಲು ಸುಮಾರು ಐದು ದಿನಗಳ ಕಾಲ ಪೊಲೀಸರು ಕಸ್ಟಡಿಗೆ ನೀಡಲು ಕೋರ್ಟ್​ಗೆ ಮನವಿ ಮಾಡಿದ್ದರು. ಈ ವೇಳೆ ಆರೋಪಿ ಎಲ್ಲಿ ಅಂತ ಪ್ರಶ್ನೆ ಜಿಲ್ಲಾ ಕೋರ್ಟ್​ ಮಾಡಿತ್ತು, ಆರೋಪಿ ಶ್ರೀಗಳು ಈಗ ಪೊಲೀಸರು ಶ್ರೀಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದಿತ್ತು. ಇದಕ್ಕೆ  ಕೋರ್ಟ್ ಮಾಹಿತಿ ನೀಡದೆ ಹೇಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಜಿಲ್ಲಾ ಕೋರ್ಟ್​ ಪ್ರಶ್ನೆ ಮಾಡಿ ತಕ್ಷಣವೇ ಆರೋಪಿ ಹಾಜರಾಗಬೇಕು ಎಂದು ಹೇಳಲಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಕೋರ್ಟ್​ಗೆ ಶ್ರೀಗಳು ಹಾಜರಾಗಿದ್ದರು.

 

RELATED ARTICLES

Related Articles

TRENDING ARTICLES