Monday, December 23, 2024

ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರನ ಚಿತ್ರಕ್ಕೆ ಬಾಯ್​ಕಾಟ್​ ಕಾಟ

ಬೆಂಗಳೂರು: ಚಾಮರಾಜಪೇಟೆ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್​ ನಟಿಸಿರುವ ಬನಾರಸ್ ಚಿತ್ರಕ್ಕೆ ಬಾಯ್ಕಟ್​​ ಬನರಾಸ್​ ಎಂದು ವಿರೋಧ ವ್ಯಕ್ತವಾಗುತ್ತಿದೆ.

ಬನಾರಸ್ ಚಿತ್ರದ ವಿರುದ್ಧ ಹಿಂದೂಪರ ಸಂಘಟನೆಗಳು ಇದೀಗ ಬಾಯ್​ಕಾಟ್​​ ಬನರಾಸ್ ಎಂದು ಟ್ರೆಂಡ್ ಆರಂಭಿಸಿದ್ದು, ಚಿತ್ರ ಹಿಂದೂ ವಿರೋಧಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಗಣೇಶ ಹಬ್ಬಕ್ಕೆ ಶುಭ ಕೋರುವ ಶಾಸಕರು, ಅತ್ತ ದೆಹಲಿಯಲ್ಲಿ ಖ್ಯಾತ ಕಪಿಲ್ ಸಿಬಲ್ ಅವರನ್ನು ಭೇಟಿ ಮಾಡಿ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸದಂತೆ ಸುಪ್ರೀಂ ಕೋರ್ಟ್​​​​​ನಲ್ಲಿ ಅರ್ಜಿ ಹಾಕಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲದೇ ಇತ್ತೀಚೆಗೆ ಬನಾರಸ್ ಚಿತ್ರತಂಡ ಬಿಡುಗಡೆ ಮಾಡಿದ್ದ ಪೋಸ್ಟರ್ ಮತ್ತು ಚಿತ್ರಗಳಲ್ಲೂ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಲಾಗಿದೆ.

RELATED ARTICLES

Related Articles

TRENDING ARTICLES