Monday, December 23, 2024

ಕ್ಯೂಟ್ ಕಿಡ್ಸ್​​​ನ ಕರುನಾಡಿಗೆ ಪರಿಚಯಿಸಿದ ಅಮ್ಮು..!

ಗೋಲ್ಡನ್ ಕ್ವೀನ್​ಗೆ ಶಿವರಾತ್ರಿ ಹಬ್ಬದ ದಿನ ಟ್ವಿನ್ಸ್ ಜನಿಸಿದಾಗ ಎಲ್ರೂ ಹರಿ-ಹರ ಅಂತಲೇ ಕರೆದಿದ್ರು. ಇದೀಗ ಆ ಅಮೂಲ್ಯವಾದ ಕ್ಯೂಟ್ ಕಿಡ್ಸ್​​ನ ಕರುನಾಡಿನ ಜನತೆಗೆ ಇಂಟ್ರಡ್ಯೂಸ್ ಮಾಡಿದ್ದಾರೆ ನಟಿ ಅಮೂಲ್ಯ. ಚಿನ್ನಿ ಗಣಪಗಳ ರೀತಿ ಮುದ್ದಾಗಿರೋ ಆ ಕಂದಮ್ಮಗಳ ಜೊತೆ ಅಮ್ಮು ಗೋಲ್ಡನ್ ಕಹಾನಿ ನಿಮಗಾಗಿ ಕಾಯ್ತಿದೆ.

  • ಚಿನ್ನಿ ಗಣಪಗಳ ಜತೆ ಗಣೇಶನ ಹಬ್ಬಕ್ಕೆ ಅಮೂಲ್ಯ ವಿಶ್​​

ಚಂದು, ಲಾಲಿಹಾಡು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಚೈಲ್ಡ್​ ಆರ್ಟಿಸ್ಟ್​ ಆಗಿ ಎಂಟ್ರಿ ಕೊಟ್ಟ ನಟಿ ಅಮೂಲ್ಯ, ಚೆಲುವಿನ ಚಿತ್ತಾರ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಮಿಂಚಿದ್ರು. ಐಶು ಪಾತ್ರದಲ್ಲಿ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದ ಅಮೂಲ್ಯ ಕನ್ನಡಿಗರ ಮನೆ ಮಗಳಾಗಿಬಿಟ್ರು. ಗಜ ಕೇಸರಿ, ಮಳೆ, ಮಾಸ್ತಿಗುಡಿ ಸಿನಿಮಾಗಳು ನಟಿ ಅಮೂಲ್ಯ ಮನೋಘ್ನ ಅಭಿನಯಕ್ಕೆ ಸಾಕ್ಷಿಯಾಗಿವೆ.

ಸಕ್ಸಸ್​ ಪೀಕ್​ನಲ್ಲಿದ್ದ ಅಮ್ಮು 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ರು. ಪೊಲಿಟಿಕಲ್​ ಬ್ಯಾಕ್​ಗ್ರೌಂಡ್​​ ಇರೋ ಜಗದೀಶ್​ ಜತೆ ಚಂದನವನದ ಐಶು ಸಪ್ತಪದಿ ತುಳಿದ್ರು. ಅದಾದ ನಂತ್ರ ಸಿನಿದುನಿಯಾದಿಂದ ದೂರ ಉಳಿದ ಅಮೂಲ್ಯ ಕೊನೆಯ ಬಾರಿ ಮುಗುಳು ನಗೆ ಚಿತ್ರದಲ್ಲಿ ಗೆಸ್ಟ್​ ರೋಲ್​​ನಲ್ಲಿ ಕಾಣಿಸಿಕೊಂಡಿದ್ರು.

ಯೆಸ್​​.. ಇದಾದ ನಂತ್ರ ಅಮೂಲ್ಯ ಪ್ರಗ್ನೆನ್ಸಿ ಫೋಟೋಗಳ ಜತೆಗೆ ಬೇಬಿ ಬಂಪ್​ ಫೋಟೋ ಶೂಟ್​ ಕೂಡ ವೈರಲ್​ ಆಗಿತ್ತು. ಇದೀಗ ಅಮೂಲ್ಯ ಮುದ್ದು ಅವಳಿ ಮಕ್ಕಳಿಂದ ಗಣೇಶನ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಇನ್​​ಸ್ಟಾಗ್ರಾಮ್​​​​ನಲ್ಲಿ ಕ್ಯೂಟ್​ ಕಿಡ್ಸ್​ ಫೋಟೋ ರೀವೀಲ್ ಮಾಡಿದ್ದು ಕಲರ್​​ಫುಲ್​ ಕಮೆಂಟ್ಸ್​ ಹರಿದು ಬರ್ತಿವೆ.

  • ಮನೆ ಪಾಠಕ್ಕೆ ಭಾರೀ ಸಿದ್ಧತೆ ನಡೆಸಿದ ಗೋಲ್ಡನ್ ಟೀಚರ್​​​​
  • ಇಂಡಸ್ಟ್ರಿಗೆ ಕಂಬ್ಯಾಕ್ ಮಾಡ್ತಾರಾ ಚಿತ್ತಾರದ ಬೆಡಗಿ..?!

ನಟಿ ಅಮೂಲ್ಯ ಸಿನಿಮಾಗಳಿಂದ ದೂರ ಉಳಿದ ಮೇಲೂ ಫ್ಯಾನ್ಸ್​ ಜತೆಗಿನ ಒಡನಾಟ ಬಿಟ್ಟಿಲ್ಲ. ಸದಾ ಸೋಶೀಯಲ್​ ಮೀಡಿಯಾಗಳಲ್ಲಿ ಫ್ಯಾಮಿಲಿಯ ಸ್ಪೆಷಲ್​ ಅಪ್ಡೇಟ್ಸ್​​ ಶೇರ್ ಮಾಡ್ತಾರೆ. ಈ ಹಿಂದೆಯೂ ನೀರಿನ ಮೇಲೆ ವಿಭಿನ್ನವಾಗಿ ಬೇಬಿ ಬಂಪ್​ ಫೋಟೋ ಶೂಟ್​ ಮಾಡಿಸಿದ್ರು. ಈ ಪೋಟೋಗಳಿಗೂ ಸಿಕ್ಕಾಪಟ್ಟೆ ಕಮೆಂಟ್ಸ್​ಗಳು ಹರಿದು ಬಂದಿದ್ವು.

ಜತೆಗೆ ಬೇಬಿ ಶವರ್​​ ಸೆಲೆಬ್ರೇಷನ್ ಕೂಡ ಜೋರಾಗಿ ನಡೆದಿತ್ತು. ಬಣ್ಣ ಬಣ್ಣದ ಕಲರ್​ಫುಲ್​ ಹೂವುಗಳಿಂದ ಅಲಂಕೃತವಾಗಿದ್ದ ವೇದಿಕೆಯಲ್ಲಿ ನಟಿ ಅಮೂಲ್ಯ ಮಿಂಚ್ತಾ ಇದ್ರು. ಈ ಕಾರ್ಯಕ್ರಮಕ್ಕೆ ಗೋಲ್ಡನ್​ ಸ್ಟಾರ್​ ಗಣೇಶ್​​, ಉಪೇಂದ್ರ, ನೆನಪಿರಲಿ ಪ್ರೇಮ್​ , ರಾಧಿಕಾ ಪಂಡಿಂತ್​​ ಸೇರಿ ಅನೇಕ ಸಿನಿಮಾ ಕಲಾವಿದ್ರು ಪಾಲ್ಗೊಂಡಿದ್ರು. ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ಅಮೂಲ್ಯ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟಿದ್ರು​.ಇದೀಗ ಗಣೇಶನ ಹಬ್ಬಕ್ಕೆ ಅವಳಿ ಮಕ್ಕಳ ಮುದ್ದು ಫೋಟೋ ಶೇರ್​ ಮಾಡಿದ್ದಾರೆ.

ಈ ಫೋಟೋದಲ್ಲಿ ಸುತ್ತಲೂ ಬುಕ್ಸ್​ಗಳನ್ನೂ ಇಡಲಾಗಿದ್ದು, ಮುದ್ದು ಮಕ್ಕಳಿಗೆ ಮನೆ ಪಾಠ ಶುರುವಾಗಿದೆ. ಇನ್ನೂ, ಮನೆಯ ಮೊದಲ ಪಾಠ ಶಾಲೆಯಾಗಿದ್ದು, ನಟಿ ಅಮೂಲ್ಯ ಇನ್ಮುಂದೆ ಕ್ಯೂಟ್​ ಬೇಬೀಸ್​ಗೆ ಟೀಚರ್​ ಆಗಲಿದ್ದಾರೆ. ಈ ಬಾರಿಯ ಗಣೇಶನ ಹಬ್ಬ ಸೆಲೆಬ್ರಿಟಿಗಳಿಗೂ ವಿಶೇಷವಾಗಿದ್ದು, ಸ್ಯಾಂಡಲ್​ವುಡ್​ ಐಶು ಮುದ್ದು ಮಕ್ಕಳ ಪೋಟೋ ಶೇರ್​ ಮಾಡೊ ಮೂಲಕ ಸರ್​ಪ್ರೈಸ್​ ಕೊಟ್ಟಿದ್ದಾರೆ.ಈ ನಡುವೆ ನಟಿ ಅಮೂಲ್ಯ ಮತ್ತೆ ಸ್ಯಾಂಡಲ್​ವುಡ್​​ಗೆ ನಾಯಕಿಯಾಗಿ ಎಂಟ್ರಿ ಕೊಡ್ತಾರಾ ಕಾದು ನೋಡ್ಬೇಕಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES