Wednesday, January 22, 2025

ಕೇಕ್ ಕತ್ತರಿಸಿ ಸುದೀಪ್​ ಜನ್ಮದಿನ ಆಚರಿಸಿದ ಶಿವಣ್ಣ ದಂಪತಿ

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು 49ನೇ ವಸಂತಕ್ಕೆ ಕಾಲಿಟ್ಟ ಹಿನ್ನಲೆಯಲ್ಲಿ ನಟ ಶಿವರಾಜ್​ಕುಮಾರ್ ದಂಪತಿ ಸುದೀಪ್​ಗೆ ಹುಟ್ಟು ಹಬ್ಬದ ಶುಭಾಶಯಗಳು ಕೋರಿದ್ದಾರೆ.

ಇಂದು ಸುದೀಪ್​ ನಿವಾಸಕ್ಕೆ ಭೇಟಿ ನೀಡಿದ ನಟ ಶಿವರಾಜ್​ಕುಮಾರ್​ ಹಾಗೂ ಪತ್ನಿ ಗೀತಾ ಶಿವರಾಜ್​ ಕುಮಾರ್ ಅವರು ಕೇಕ್ ಕತ್ತರಿಸಿ​ ಸುದೀಪ್​ಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಈ ವೇಳೆ ಪ್ರೀಯಾ ಸುದೀಪ್, ನಿರ್ದೇಶಕ ಕೆ.ಪಿ ಶ್ರೀಕಾಂತ್​ ಸಹ ಸುದೀಪ್​ಕೆ ಕೇಕ್​ ತಿನ್ನಿಸಿ ಜನ್ಮದಿನ ಸಂಭ್ರಮಾಚರಣೆ ಮಾಡಿದರು.

ಸುದೀಪ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿನ್ನಲೆ ನಿನ್ನೆ ಮಧ್ಯರಾತ್ರಿಯಿಂದಲೇ ಜೆಪಿ ನಗರದಲ್ಲಿರುವ ಸುದೀಪ್ ನಿವಾಸದ ಮುಂದೆ ಜಮಾಯಿಸಿದ ಅಭಿಮಾನಿಗಲು ನೆಚ್ಚಿನ ನಟನಿಗೆ ಕೈ ಕುಲುಕಿ ಹುಟ್ಟು ಹಬ್ಬ ಹಾಚರಿಸಿದ್ದಾರೆ.

RELATED ARTICLES

Related Articles

TRENDING ARTICLES