Wednesday, January 22, 2025

ಮುರುಘಾ ಶ್ರೀಗಳ ಶಿಷ್ಯನಿಂದ ಆತ್ಮಹತ್ಯೆಗೆ ಯತ್ನ

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನವಾಗಿರುವ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳನ್ನು ಇಂದು ಮದ್ಯಾಹ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಮುರುಘಾ ಶ್ರೀಗಳನ್ನ ಸೆಪ್ಟೆಂಬರ್​ 5 ರವರೆಗೆ ಪೊಲೀಸ್​ ಕಸ್ಟಡಿಗೆ ಒಪ್ಪಿಸಿ ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರು ಆದೇಶಿಸಿದ ಬೆನ್ನಲೆಯಲ್ಲಿ ಶ್ರೀಗಳ ಶಿಷ್ಯನಿಂದ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಮುರುಘಾ ಶ್ರೀಯನ್ನ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಹಿನ್ನಲೆಯಲ್ಲಿ ಶ್ರೀಗಳ ಶಿಷ್ಯನಿಂದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಲಾಯಿತು.

ಸ್ವಾಮಿಜಿ ಯಾವುದೇ ತಪ್ಪು ಮಾಡಿಲ್ಲ, ಆದರೂ ಅವರನ್ನ ಬಂಧನ ಮಾಡಲಾಗಿದೆ. ನಮ್ಮ ಬುದ್ದಿಗೆ(ಸ್ವಾಮೀಜಿ) ನ್ಯಾಯ ಕೊಡಿ ಎಂದು ಕಣ್ಣೀರು ಹಾಕಿ ಶಿಷ್ಯ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಪೊಲೀಸರು ಶ್ರೀಗಳ ಶಿಷ್ಯನನ್ನ ವಶಕ್ಕೆ ಪಡೆದರು.

RELATED ARTICLES

Related Articles

TRENDING ARTICLES