ಗದಗ: ಜಿಲ್ಲೆಯಲ್ಲಿ ನಡೆದಿದ್ದ ಆರ್ಟಿಓ ಏಜೆಂಟನ ಕೊಲೆ ಪ್ರಕರಣವನ್ನ ಮುಂಡರಗಿ ಪೊಲೀಸರು ಪ್ರಕರಣವನ್ನ ಭೇದಿಸಿದ್ದಾರೆ.
ಈ ಕುರಿತು ಗದಗ ಜಿಲ್ಲಾ ಎಸ್ಪಿ ಶಿವಪ್ರಕಾಶ ದೇವರಾಜು ಪತ್ರಿಕಾ ಗೋಷ್ಠಿ ಏರ್ಪಡಿಸಿ ಮಾಹಿತಿ ನೀಡಿದ, ಕಳೆದ ಆಗಸ್ಟ್ 24 ರಂದು ಸಂಜೆ ಮುಂಡರಗಿ ತಾಲೂಕಿನ ಜಂಗ್ಲಿ ಶಿರೂರು-ಡ.ಸ ರಾಮೇನಹಳ್ಳಿ ಗ್ರಾಮದ ರಸ್ತೆಯಲ್ಲಿ ಗದಗನ ಗಂಗಿಮಡಿ ನಿವಾಸಿ ಆರ್ಟಿಓ ಏಜೆಂಟ್ ಮಾರುತಿ ರಾಮಣ್ಣ ಅಂಕಲಗಿ (35) ಎಂಬಾತನನ್ನು ಕೊಲೆಯಾಗಿತ್ತು. ಈ ಕುರಿತು ಮೃತನ ತಂದೆ ರಾಮಣ್ಣ ಅನ್ನೋರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಡ.ಸ ರಾಮೇನಹಳ್ಳಿ ಗ್ರಾಮದ ಮುತ್ತಪ್ಪ ಹನುಮಪ್ಪ ಬೆಟಗೇರಿ (30)ಎನ್ನುವ ಕೊಲೆ ಆರೋಪಿಯನ್ನ ಬಂಧಿಸಿದ್ದಾರೆ.
ಕೊಲೆ ಪ್ರಕರಣ ಭೇದಿಸಲು ಎಸ್ಪಿ ಶಿವಪ್ರಕಾಶ್ ದೇವರಾಜು, ನರಗುಂದ ವಿಭಾಗದ ಡಿವೈಎಸ್ಪಿ ವಾಯ್ ಎಸ್ ಏಗನಗೌಡರ ಅವರ ಮಾರ್ಗದರ್ಶನದಲ್ಲಿ ಮುಂಡರಗಿ ಸಿಪಿಐ ವೀರಣ್ಣ ಹಳ್ಳಿ ನೇತೃತ್ವದಲ್ಲಿ ತಂಡ ನೇಮಕ ಮಾಡಲಾಗಿತ್ತು.
ಇನ್ನು ಈ ಕೊಲೆಗೆ ಹಣಕಾಸಿನ ವ್ಯವಹಾರ ಕಾರಣವಾಗಿದ್ದು, ಮೃತ ಮಾರುತಿ, ಆರೋಪಿ ಮುತ್ತುಗೆ 1.60 ಲಕ್ಷ ರೂ.ಹಣ ಕೊಡಬೇಕಿತ್ತು. ಪದೇ ಪದೇ ಹಣ ಕೇಳಿದರೂ ಮೃತ ಮಾರುತಿ ಹಣ ಕೊಟ್ಟಿರಲಿಲ್ಲ. ಹೀಗಾಗಿ ಕೊಲೆ ನಡೆದಿದೆ ಎಂದು ಎಸ್ಪಿ ಹೇಳಿದ್ದಾರೆ. ‘
ಕೊಲೆ ನಡೆದ ದಿನ ಮೃತ ಮಾರುತಿ ಕಪ್ಪತಗುಡ್ಡ ನೋಡಲು ಹೋಗುವ ಪ್ಲ್ಯಾನ್ ಮಾಡಿಕೊಂಡಿದ್ದ. ಆದರೆ ಮುತ್ತು, ಮಾರುತಿಯನ್ನು ತನ್ನ ಜಮೀನಿಗೆ ಕರೆದುಕೊಂಡು ಹೋಗಿ ಅಲ್ಲಿ ಇಬ್ಬರೂ ಮದ್ಯ ಸೇವಿಸಿದ್ದಾರೆ. ಆ ನಂತರ ನಡೆದ ಹಣಕಾಸಿನ ವ್ಯವಹಾರದ ಬಾಯಿ ಮಾತಿನ ಜಗಳ, ಮಾರುತಿ ಕೊಲೆಯಲ್ಲಿ ಅಂತ್ಯವಾಗಿದೆ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.