Wednesday, January 22, 2025

ಮುರುಘಾ ಮಠದ ಆಡಳಿತಾಧಿಕಾರಿ ಎಸ್​.ಕೆ ಬಸವರಾಜನ್​ ದಂಪತಿಗೆ ಜಾಮೀನು

ಚಿತ್ರದುರ್ಗ: ಮುರುಘ ಮಠದ ಮಾಜಿ ಅಡಳಿತ ಆಧಿಕಾರಿ ಎಸ್.ಕೆ ಬಸವರಾಜನ್ ಹಾಗೂ ಸೌಭಾಗ್ಯ ಅವರಿಗೆ ದಂಪತಿಗೆ ಚಿತ್ರದುರ್ಗ ಜಿಲ್ಲಾ ಕೋರ್ಟ್​ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಬಸವರಾಜನ್ ಹಾಗೂ ಸೌಭಾಗ್ಯ ಬಸವರಾಜನ್ ತಮ್ಮ ಮೇಲೆ ದಾಖಲಾಗಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಡಿಯೋ ಕಾನ್ಪೆರೆನ್ಸ್ ಮುಖಾಂತರ ಕೊರ್ಟ್ ನಲ್ಲಿ ಬಸವರಾಜ್ ಹಾಜಾರು ಅಗಲು ಅನುಮತಿ ಕೋರಿದ್ದ ಬಸವರಾಜನ್ ಪರ ಅಡ್ವೋಕೆಟ್ ರಾಮಚಂದ್ರ ವಕೀಲರು, ಇದನ್ನ ತಿರಸ್ಕರಿಸಿದ ನ್ಯಾಯಾಧೀಶರು ಸ್ವತಃ ಬಸವರಾಜನ್ ದಂಪತಿಗಳೇ ಕೋರ್ಟ್ ಮುಂದೆ ಹಾಜರಾಗಬೇಕು ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ ಬಸವರಾಜನ್ ನ್ಯಾಯಾಧೀಶರ ಮುಂದೆ ಇಂದು ಮಧ್ಯಾಹ್ನ ಕೋರ್ಟ್​ಗೆ ಹಾಜರಾಗಿದ್ದರು. ತದ ನಂತರ ಎಲ್ಲಾ ವಾದ ವಿವಾದ ಆಲಿಸಿ ಕೋರ್ಟ್​ ಮಾಜಿ ಶಾಸಕ ಬಸವರಾಜನ್​ ದಂಪತಿಗೆ ಜಾಮೀನು ಮಂಜೂರು ಮಾಡಿದೆ.

ಮುರುಘಾ ಮಠದ ಶರಣರ ಮೇಲೆ ಲೈಂಗಿಕ ದೌರ್ಜನ್ಯ ಪೊಕ್ಸೋ ಅಡಿ ದೂರು ದಾಖಲಾದ ಹಿನ್ನಲೆಯಲ್ಲಿ ಪ್ರೋಕ್ಸೊ ದಾಖಲಾದ ದೂರಿನಲ್ಲಿ ಮುರುಘಾ ಮಠದ ಮಾಜಿ ಅಡಳಿತ ಆಧಿಕಾರಿ ಎಸ್.ಕೆ ಬಸವರಾಜನ್ ಹಾಗೂ ಸೌಭಾಗ್ಯ ಕೈವಾಡ ಇದೆ ಎಂದು ಅವರ ವಿರುದ್ಧ ಪ್ರಕರಣ ಈ ಹಿಂದೆ ದಾಖಲಾಗಿತ್ತು.

RELATED ARTICLES

Related Articles

TRENDING ARTICLES