Wednesday, January 22, 2025

ಬೀರ್​ಬಲ್​ ಫೈಯರ್​​​​.. ಗೋಸ್ಟ್ ಹೈ ವೋಲ್ಟೇಜ್​​​​​​ ಫೀವರ್​​

ಸ್ಯಾಂಡಲ್​ವುಡ್​​​ ಬೀರ್​​ಬಲ್​​ ಎಂದೇ ಹೆಸರಾದ ಮೋಸ್ಟ್​ ಕ್ರಿಯೇಟಿವ್​ ಡೈರೆಕ್ಟರ್​ ಎಮ್​. ಜಿ ಶ್ರೀನಿವಾಸ್​​​. ಅಭಿನಯ ಚತುರತೆಯ ಜತೆಗೆ ಸಿನಿಮಾ ಮಾಂತ್ರಿಕನಾಗಿ ಕನ್ನಡದಲ್ಲಿ ಕಮಾಲ್​ ಮಾಡ್ತಿದ್ದಾರೆ ಶ್ರೀನಿ. ಇದೀಗ ಹೊಸ ಟೆಕ್ನಾಲಜಿಯೊಂದಿಗೆ ಸಿನಿಪ್ರಿಯರ ಕಣ್ಮನ ತಣಿಸೋಕೆ ಸಜ್ಜಾಗಿದ್ದಾರೆ. ಯೆಸ್​​. ಶಿವಣ್ಣನ ಗೋಸ್ಟ್​ ಸಿನಿಮಾ ತಯಾರಿ ಬಗ್ಗೆ ಎಕ್ಸ್​​ಕ್ಲ್ಯೂಸಿವ್​ ಅಪ್ಡೇಟ್​ ಕೊಡ್ತೀವಿ. ನೀವೇ ಓದಿ.

  • AI ಟೆಕ್ನಾಲಜಿ ಬಳಸಿ ಗೋಸ್ಟ್​​ ಸಿನಿಮಾ ಪಾತ್ರಗಳ ಡಿಸೈನ್..!​​​

ಕನ್ನಡ ಸಿನಿದುನಿಯಾದಲ್ಲಿ ಕಲರ್​ ಫುಲ್​ ಸಿನಿಮಾಗಳ ಮೂಲಕ ಎಲ್ಲರ ಮನಸ್ಸು ಕದ್ದ ನಟ ಶ್ರೀನಿ. ಹೀರೋ ಕಮ್​ ಡೈರೆಕ್ಟರ್​ ಆಗಿ ಹೆಸ್ರು ಮಾಡಿರೋ ಸಿನಿಮಾಂತ್ರಿಕ. ಓಲ್ಡ್​ಮಾಂಕ್​ ಚಿತ್ರದ ಯಶಸ್ಸಿನ ಬೆನ್ನಲ್ಲೇ ಸೆಂಚುರಿ ಸ್ಟಾರ್​​ ಶಿವಣ್ಣನಿಗೆ ಕಥೆ ಹೆಣೆದಿರುವ ಶ್ರೀನಿ ಸಿನಿಮಾದ ಪ್ರೀ ಪ್ರೊಡಕ್ಷನ್​ನಲ್ಲಿ ಬ್ಯುಸಿ ಇದ್ದಾರೆ. ಇದೀಗ, ಗಣೇಶನ ಹಬ್ಬಕ್ಕೆ ರಿಲೀಸ್​ ಆಗಿರೋ ಗೋಸ್ಟ್​ ಹಾಗೂ ಬೀರ್​​​ಬಲ್​ ಚಿತ್ರದ ಸ್ಪೆಷಲ್​ ಪೋಸ್ಟರ್​ಗಳು ಸೆನ್ಸೇಷನ್​ ಕ್ರಿಯೇಟ್​ ಮಾಡಿವೆ.

ಟೋಪಿವಾಲ, ಶ್ರೀನಿವಾಸ ಕಲ್ಯಾಣ, ಬೀರ್​​ಬಲ್​ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಶ್ರೀನಿ, ನಿರ್ದೇಶನದ ಗತ್ತು, ತಾಕತ್ತು, ಕರಾಮತ್ತನ್ನು ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಚಂದನವದಲ್ಲಿ ಧೂಳೆಬ್ಬಿಸಿದ ಓಲ್ಡ್​ಮಾಂಕ್ ಸಿನಿಮಾದ ಕಾಮಿಡಿ​ ಕಿಕ್ಕಿಗೆ ಪ್ರೇಕ್ಷಕರು ಕ್ಲೀನ್​ ಬೋಲ್ಡ್​ ಆಗಿದ್ದಾರೆ.

ಇದ್ರ ಬೆನ್ನಲ್ಲೆ ಶ್ರೀನಿ, ಹ್ಯಾಟ್ರಿಕ್​ ಹೀರೋ ಶಿವಣ್ಣನಿಗೆ ಆ್ಯಕ್ಷನ್​ ಕಟ್​ ಹೇಳೋಕೆ ಸಜ್ಜಾಗಿದ್ದಾರೆ. ಈ ಚಿತ್ರದ ಪೋಸ್ಟರ್​​ ಸಿಕ್ಕಾಪಟ್ಟೆ ವೈರಲ್​ ಅಗಿದ್ದು, ಸಖತ್ ಕ್ಯೂರಿಯಾಸಿಟಿ ಮೂಡಿಸಿದೆ. ವಿಶೇಷವಾಗಿ  ಎ.ಐ ಟೆಕ್ನಾಲಜಿ ಬಳಸಿ ಗೋಸ್ಟ್​​ ಚಿತ್ರದ ರೋಲ್​​​ಗಳನ್ನು ವಿನ್ಯಾಸಗೊಳಿಸಲಾಗ್ತಿದೆಯಂತೆ.

  • ಜೈಲಲ್ಲಿ ಗೋಸ್ಟ್​​ ಚಕ್ರವ್ಯೂಹ.. ಬೀರ್​​ಬಲ್​​ ಬೆಂಕಿ ಪ್ರವಾಹ
  • ಶ್ರೀನಿ ಟೆಕ್ನಾಲಜಿಯಲ್ಲಿ ಅರಳಿದ ಭೂತ, ಪ್ರೇತಗಳ ಹವಾ..!

ತಮ್ಮ ನಟನಾ ಕೌಶಲ್ಯ, ನಿರ್ದೇಶನದ ಚಾಣಾಕ್ಷತೆಯಲ್ಲಿ ಸ್ಟಾರ್​ ನಟರ ಜತೆ ಕೆಲಸ ಮಾಡುವ ಅದೃಷ್ಠ ಶ್ರೀನಿ ಪಾಲಾಗಿದೆ. ಹ್ಯಾಟ್ರಿಕ್​ ಹೀರೋ ಶಿವಣ್ಣ ಕೂಡ ಶ್ರೀನಿ ಕಥೆಗೆ ಮರು ಮಾತಾಡದೆ ಯೆಸ್​ ಎಂದಿದ್ದಾರೆ. ಇದೀಗ ಶ್ರೀನಿ ಗೋಸ್ಟ್​ ಕಥೆಗೆ ಸಖತ್​ ಡೆಡಿಕೇಷನ್​ ಹಾಕಿದ್ದು, ಸ್ವತಃ ತಾವೇ ಆರ್ಟಿಫಿಷಿಯಲ್​ ಇಂಟಿಲಿಜೆನ್ಸ್​ ತಂತ್ರಜ್ನಾನ ಬಳಸಿ ಪಾತ್ರಗಳ ಡಿಸೈನ್​ ಮಾಡ್ತಿದ್ದಾರೆ. ಈ ಮೂಲಕ ವಿಭಿನ್ನ ರೀತಿಯ ಮೇಕಿಂಗ್​ ಸ್ಟೈಲ್​ನಲ್ಲಿ ಗೋಸ್ಟ್​ ಸಿನಿಮಾ ಮೂಡಿ ಬರ್ತಿದೆ.

ಈಗಾಗ್ಲೇ ಶ್ರೀನಿ ವಿನ್ಯಾಸ ಮಾಡಿರೋ ಭೂತ, ಪ್ರೇತಗಳ ಡಿಸೈನ್​ಗಳು ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದು, ಸಖತ್ ಹೈಪ್​ ಕ್ರಿಯೇಟ್​ ಮಾಡಿವೆ. ಪೋಸ್ಟರ್​ಗಳು ಹಾಲಿವುಡ್​ ಹಾರರ್​ ಸಿನಿಮಾ ಫೀಲ್​ ಕೊಡ್ತಿವೆ. ಪ್ರತಿಷ್ಟಿತ ಸಂದೇಶ್​ ಪ್ರೊಡಕ್ಷನ್​ ಬ್ಯಾನರ್​ನಲ್ಲಿ ಗೋಸ್ಟ್​ ತೆರೆಗೆ ಬರಲಿದೆ. ಸಂದೇಶ್​ ನಾಗರಾಜ್​ ಅವ್ರ ಅದ್ಧೂರಿ ವೆಚ್ಚದಲ್ಲಿ ಸಿನಿಮಾ ಮ್ಯಾಜಿಕ್​ ಮಾಡಲಿದೆ.

ಇನ್ನೂ ಶ್ರೀನಿ ಬತ್ತಳಿಕೆಯಲ್ಲಿ ಕಮಾಲ್​ ಮಾಡಿದ್ದ ಬೀರ್​​ಬಲ್​ ಸೀಕ್ವೆನ್ಸ್​ ಸಿನಿಮಾ ಕೂಡ ತಯಾರಾಗ್ತಿದೆ. ಈ ಸಿನಿಮಾದ ಪೋಸ್ಟರ್​ನಲ್ಲಿ ಲಾಯರ್​ ಕೋಣೆಗೆ ಬೆಂಕಿ ಬಿದ್ದಿದ್ದು, ಕೇಸ್​ ಸ್ಟಡಿ ಫೈಲ್​​​ಗಳೆಲ್ಲಾ ಹೊತ್ತಿ ಉರಿಯುತ್ತಿವೆ. ಬೀರ್​​ಬಲ್​​ 2 ಸಿನಿಮಾದಲ್ಲಿ ನೆಕ್ಸ್ಟ್​ ಲೆವೆಲ್​ ಸಸ್ಪೆನ್ಸ್​ ಥ್ರಿಲ್ಲರ್ ಅಂಶಗಳು ಇರಲಿವೆ.  ಅವ್ರನ್​ ಬಿಟ್ಟು, ಇವ್ರನ್​ ಬಿಟ್ಟು, ಅವ್ರ್​ ಯಾರು ಅನ್ನೋ ಗೊಂದಲ ಶುರುವಾಗಲಿದೆ. 2023 ಕ್ಕೆ ತರೆಗೆ ಬರಲಿರುವ ಬೀರ್​​ಬಲ್​ 2 ಪೋಸ್ಟರ್ ಮತ್ತೊಮ್ಮೆ ಕಿಚ್ಚು ಹಚ್ಚಿದೆ. ಎನಿವೇ, ನಿರೀಕ್ಷೆ ಮೂಡಿಸಿರೋ ಗೋಸ್ಟ್​​​, ಬೀರ್​ಬಲ್ 2 ಚಿತ್ರಗಳು ಆದಷ್ಟು ಬೇಗ ತೆರೆಗೆ ಬರಲಿ ಎಂದು ಆಶಿಸೋಣ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ 

RELATED ARTICLES

Related Articles

TRENDING ARTICLES