ಮಂಗಳೂರು: ನಾಳೆ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮನ ಹಿನ್ನಲೆಯಲ್ಲಿ ಸುಮಾರು 3700 ಕೋಟಿ ರೂ ವೆಚ್ಚದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಾಗಿದ್ದಾರೆ.
ಈ ಸಭೆಗೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಭಾವಹಿಸುವ ಸಾಧ್ಯತೆ ಇದೆ. ಈ ಸಭೆಯನ್ನ ಉದ್ದೇಶಿಸಿ ಮೋದಿ ಮಾತನಾಡ್ತಾರೆ. ಮೋದಿ ಆಗಮನಕ್ಕೆ ಜಿಲ್ಲಾಡಳಿತದಿಂದ ಎಲ್ಲಾ ವ್ಯವಸ್ಥೆಯನ್ನ ಮಾಡಿಕೊಂಡಿದೆ. ಎರಡೂ ಜಿಲ್ಲೆಯ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಇರ್ತಾರೆ. ಅವರನ್ನ ಕರೆತರಲು ಎರಡು ಸಾವಿರ ಬಸ್ ವ್ಯವಸ್ಥೆ ಮಾಡಲಾಗಿದೆ. ಕೃಷಿ ಸಮ್ಮಾನ್, ವಿದ್ಯಾನಿಧಿ ಸೇರಿ ಹಲವು ಫಲಾನುಭವಿಗಳು ಇಲ್ಲಿಗೆ ಬರುತ್ತಾರೆ.
ನರೇಂದ್ರ ಮೋದಿ ಅವರ ಸಮಾವೇಶದ ಮೈದಾನ ಪರಿಶೀಲಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಪ್ರಧಾನಿಯವರು ಬಂದು ವಾಪಸ್ ಹೋಗುವವರೆಗೆ ಎಲ್ಲಾ ಭದ್ರತೆ ಮಾಡಲಾಗಿದೆ. ಡಿಜಿಪಿ ಮತ್ತು ಎಡಿಜಿಪಿಯವರು ಸಂಪೂರ್ಣ ಭದ್ರತೆ ನೋಡಿಕೊಳ್ತಾರೆ. ಮಂಗಳೂರು ಕಮಿಷನರ್ ನೇತೃತ್ವದಲ್ಲಿ ಸಂಪೂರ್ಣ ಭದ್ರತೆ ಮಾಡಿಕೊಳ್ಳಲಾಗಿದೆ.
100 ಜನ ಉನ್ನತ ಪೊಲೀಸ್ ಅಧಿಕಾರಿಗಳು ಈ ಸಮಾವೇಶದಲ್ಲಿ ಇರುತ್ತಾರೆ. ಸುಮಾರು 2000 ಸಿವಿಲ್ ಪೊಲೀಸರನ್ನು ಭದ್ರತೆಗೆ ನೇಮಿಸಲಾಗಿದೆ. ಕೆಎಸ್ಆರ್ಪಿ, ಸಿಎಆರ್, ಎಎನ್ ಎಫ್, ಆರ್ಎಎಫ್, ಕೋಸ್ಟಲ್ ಸೆಕ್ಯೂರಿಟಿ, ಐಎಸ್ಡಿ ಹಾಗೂ ಗರುಡ ಪಡೆ ಇರುತ್ತದೆ. ಒಟ್ಟಾರೆ ಮೂರು ಸಾವಿರ ಪೊಲೀಸ್ ಮೋದಿ ಭದ್ರತೆಗೆ ಇರಲಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.