ಮೈಸೂರು : ನಾಡಿನೆಲ್ಲೆಡೆ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆದರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾತ್ರ ಬಹಳ ವಿಶಿಷ್ಟವಾಗಿತ್ತು.
ಗಣೇಶನ ತದ್ರೂಪವಾದ ದಸರಾ ಗಜಪಡೆಯನ್ನು ಸಾಂಪ್ರದಾಯಿಕವಾಗಿ ಪೂಜಿಸಲಾಯಿತು. ಮೈಸೂರು ಅರಮನೆಯಂಗಳಕ್ಕೆ ಕಾಡಿನಿಂದ ನಾಡಿಗೆ ಬಂದಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಇನ್ನು, ಡಿಸಿಎಫ್ ಕರಿಕಾಳನ್ ಅಂಡ್ ಟೀಂ ದಸರಾ ಗಜಪಡೆಗೆ ಕಬ್ಬು ಬೆಲ್ಲ, ಹಣ್ಣು ಹಂಪಲು ನೀಡಿ ಪೂಜೆ ಸಲ್ಲಿಸಿದ್ರು.ಸೆ.7ಕ್ಕೆ ಎರಡನೇ ತಂಡದ ಆನೆಗಳು ಆಗಮಿಸಲಿವೆ. ಈಗಾಗಲೇ ಮೊದಲ ತಂಡದಲ್ಲಿ 9 ಆನೆಗಳು ಆಗಮಿಸಿದ್ದು, ಎರಡನೇ ತಂಡದಲ್ಲಿ ಬರುವ 5 ಆನೆಗಳ ಬಳಿಕ ಒಟ್ಟು 14 ಆನೆಗಳು ಮೈಸೂರಿನ ರಸ್ತೆಗಳಲ್ಲಿ ತಾಲೀಮು ನಡೆಸಲಿವೆ. ಸೆ.5 ರಿಂದ ಮರದ ಅಂಬಾರಿ ಹೊರಿಸಿ ತಾಲೀಮು ನಡೆಯಲಿದೆ.