ಕೊಪ್ಪಳ: ರಾಜ್ಯದಲ್ಲಿ ಧರ್ಮ ದಂಗಲ್ ಕಿಚ್ಚು ಜೋರಾಗಿದ್ದು, ಸಾಮಜದ ಸ್ವಾಸ್ಥ್ಯ ಕಳೆಯುತ್ತಿದೆ. ಆದರೆ, ಕೊಪ್ಪಳದಲ್ಲಿ ಧರ್ಮ ದಂಗಲ್ ಬದಿಗಿಟ್ಟು, ಹಿಂದೂ ಮತ್ತು ಮುಸ್ಲಿಂ ಬಾಂದವರಲ್ಲಿ ಸಹಬಾಳ್ವೆ ಮನೆಮಾಡಿದೆ. ಜಾತಿ, ಧರ್ಮ ಬೇಧ-ಭಾವಕ್ಕಿಂತ ದೋಸ್ತಿ ಹಾಗೂ ಪ್ರೀತಿಗೆ ಇಲ್ಲಿನ ಜನರು ಬೆಲೆ ನೀಡುತ್ತಾರೆ.
ಮುಸ್ಲಿಂ ಬಾಂಧವರಿಂದ ಅದ್ದೂರಿ ಗಣೇಶ ಚುತುರ್ಥಿ ಆಚರಣೆ ಮಾಡಿದ್ದಾರೆ. ಗಣೇಶನಿಗೆ ಮುಸ್ಲಿಂ ಬಾಂಧವರು ಹಿಂದೂ ಸಂಪ್ರದಾಯದಂತೆ ಪೂಜೆ ಪುನಸ್ಕಾರ, ಶ್ರದ್ಧ ಭಕ್ತಿಯಿಂದ ಪೂಜೆ ಸಲ್ಲಿಕೆ ಮಾಡುವ ಮೂಲಕ ನಾವೆಲ್ಲರೂ ಒಂದೇ ಎನ್ನುವ ಸಂದೇಶ ನೀಡುವ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಕಳೆದ 13 ವರ್ಷಗಳಿಂದ ಗಣೇಶನನ್ನು ಪ್ರತಿಷ್ಟಾಪನೆ ಮಾಡುತ್ತ ಬಂದಿದ್ದಾರೆ. ಶ್ರೀರಾಮನಗರದ ಎಲ್ಲ ಮುಸ್ಲಿಂ ಭಾಂದವರು ಸೇರಿ ಗಣೇಶನನ್ನು ಕುರಿಸಲಾಗುತ್ತದೆ. ಅದರಲ್ಲಿ ವಿಶೇಷವಾಗಿ ಗ್ಯಾರೇಜ್ ಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು,ಪಂಚರ್ ಅಂಗಡಿಯವರು, ಹಾರ್ಡ್ ವೇರ್ ಶಾಪ್ ನವರು,ಎಲೆಕ್ಟ್ರಿಕ್ ಅಂಗಡಿಯವರು, ಸುಮಾರು 30 ರಿಂದ ನಲವತ್ತು ಜನ ಮುಸ್ಲಿಂ ಯುವಕರು, ಹಿರಿಯರು, ಸೇರಿ ಗಣೇಶ ಹಬ್ಬವನ್ನ ಭರ್ಜರಿಯಾಗಿ ಆಚರಿಸುತ್ತಾ ಬಂದಿದ್ದಾರೆ.
ಇನ್ನು, ಎಲ್ಲ ಧರ್ಮದವರಿಗೆ ಇರುವ ದೇವರು ಒಬ್ಬನೇ. ಆದರೆ, ಆತನನ್ನು ಕರೆಯುವ ಹೆಸರುಗಳು ಮಾತ್ರ ಬೇರೆ, ಬೇರೆಯಾಗಿವೆ. ಮನುಷ್ಯರು ಮೊದಲು ಮಾನವೀಯತೆ ಮರೆತು ಬಾಳುವುದಕ್ಕಿಂತ, ಅರಿತು ಬಾಳಿದರೆ ಬಾಳಿಗೊಂದು ಅರ್ಥ ಬರುತ್ತದೆ.
ಶುಕ್ರಾಜ ಕುಮಾರ್, ಪವರ್ ಟಿವಿ,ಕೊಪ್ಪಳ