Monday, December 23, 2024

ಮುರುಘಾ ಮಠದ ಶ್ರೀಗಳು ಬಂಧನ

ಚಿತ್ರದುರ್ಗ: ಮುರುಘಾ ಮಠದ ಶ್ರೀ ಮೇಲೆ ಲೈಂಕಿಕ ದೌರ್ಜನ್ಯ ಆರೋಪ ಹಿನ್ನಲೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಮುರುಘಾ ಶ್ರೀ ಯನ್ನ ಪೊಲೀಸರು ಬಂಧನ ಮಾಡಿದ್ದಾರೆ.

ಪ್ರೊಕ್ಸೋ ಕೇಸ್ ಅಡಿ ದೂರು​ ದಾಖಲಾಗಿ 7 ದಿನಗಳ ಬಳಿಕ ಮುರುಘಾ ಶ್ರೀಗಳನ್ನ ಮಠದಲ್ಲಿ ಇರುವಾಗಲೇ ಶ್ರೀಗಳನ್ನ ಪೊಲೀಸರು ಬಂಧಿಸಿದ್ದಾರೆ.

ಮಠದಲ್ಲಿಯೇ ಶ್ರೀಗಳನ್ನ ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದ್ದು, ಇಂದು ರಾತ್ರಿ 11 ಗಂಟೆಗೆ ಶ್ರೀಗಳನ್ನ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ.

ಕಳೆದ ಎರಡುವರೆ ಘಂಟೆಗಳಿಂದ ಶ್ರೀಗಳನ್ನ ವಿಚಾರಣೆ ನಡೆಸಿದ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಕರೆದೊಯ್ಯುತ್ತಿದ್ದಾರೆ.

ಪೋಕ್ಸೋ ಕೇಸ್ ಅಡಿ ದೂರು​ ದಾಖಲಾಗಿ 7 ದಿನಗಳ ಆದರೂ ಬಂಧಿಸರಲಿಲ್ಲ. ಪೊಲೀಸರ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿತ್ತಿದ್ದರು.

 

RELATED ARTICLES

Related Articles

TRENDING ARTICLES