Monday, December 23, 2024

ಬಿಎಂಟಿಸಿ ಬಸ್​ ಹರಿದು ಪಾದಾಚಾರಿ ಮಹಿಳೆ ಸಾವು

ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಪಾದಚಾರಿ ಮಹಿಳೆವೊಬ್ಬಳು ಸಾವೀಗಿಡಾದ ಘಟನೆ ಬೆಂಗಳೂರಿನ ನಾಗರಬಾವಿ ನಮ್ಮೂರ ತಿಂಡಿ ಹೋಟೆಲ್ ಬಳಿ ನಡೆದಿದೆ.

ಸುಮಾರು 54 ವರ್ಷದ ಸಂತೋಷಿ ಮೃತ ಮಹಿಳೆ, ರಸ್ತೆ ದಾಟುತ್ತಿದ್ದ ವೇಳೆ ಮಹಿಳೆ ಮೇಲೆ ಬಿಎಂಟಿಸಿ ಬಸ್​ ಹರಿದಿದೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡಿಸಿದ್ದಾರೆ.

ಮೃತ ಮಹಿಳೆ ಸಂತೋಷಿ ಹೊಸಕೆರೆ ಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು. ಕರ್ತವ್ಯ ಮುಗಿಸಿ ವಾಪಾಸ್ ಮನೆಗೆ ಹೋಗುವ ವೇಳೆ ರಸ್ತೆ ದಾಟುವಾಗ ಬಿಎಂಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟಿದ್ದಾಳೆ. ಈ ಕುರಿತು ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES