Monday, November 18, 2024

ಯೋಗಿ ಆದಿತ್ಯನಾಥ್’ರನ್ನ ಹೊಗಳಿ ಸ್ವಾಗತಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೊಗಳಿ ಸ್ವಾಗತಿಸಿದ್ದಾರೆ.

ದೇಶದ ದೊಡ್ಡ ರಾಜ್ಯದ ಮುಖ್ಯಮಂತ್ರಿಗಳು ಬಂದಿದ್ದಾರೆ. ಯೋಗಿ ಬಂದಿದ್ದು ಹೆಮ್ಮೆ ಮತ್ತು ಬಹಳಷ್ಟು ಸಂತೋಷವಾಗಿದೆ. ಕರ್ನಾಟಕಕ್ಕೂ ಅವರಿಗೂ ಸಂಬಂಧವಿದೆ. ಉತ್ತರ ಕರ್ನಾಟಕ ಮತ್ತು ಈ ಬಾಗದಲ್ಲಿ ಅವರ ಎಲ್ಲರ ಮನದಲ್ಲಿ ಇದ್ದಾರೆ‌‌. ಯಾಕೆಂದರೆ ಅವರು ಮೊದಲು ಗುರುಗಳಾಗಿದ್ರು, ನಮ್ಮ ಸಮಾಜದಲ್ಲಿ ಗುರುಗಳಿಗೆ ಉನ್ನತ ಸ್ಥಾನಮಾನವಿದೆ. ಇವರು ನಡೆದಂತೆ ನಡೆದಿದ್ದಾರೆ. ಒಬ್ಬರು ಸ್ವಾಮೀಜಿ ದಕ್ಷ ಆಡಳಿತಗಾರ ಎಂದು ತೋರಿಸಿದ್ದಾರೆ ಎಂದು ಬೊಮ್ಮಾಯಿ ಅವರು ಬಣ್ಣಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಧರ್ಮಸ್ಥಳ ಶಿಕ್ಷಣ ಸಂಸ್ಥೆ ನೂತನವಾಗಿ ನಿರ್ಮಿಸಿರುವ, ಪ್ರಕೃತಿ ಚಿಕಿತ್ಸೆ ಕಲ್ಪಿಸುವ ಕ್ಷೇಮವನವನ್ನು ಇಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಉದ್ಘಾಟಿಸಿದರು.

ನಂತರ ಮಾತನಾಡಿದ ಸಿಎಂ, ಕ್ಷೇಮವನ ಎಂಬ ಹೆಸರಿನಲ್ಲೇ ನೆಮ್ಮದಿ ಇದೆ. ಮೊದಲೆಲ್ಲ ಪೊಸ್ಟ್ ಕಾರ್ಡ್ ನಲ್ಲಿ ಕ್ಷೇಮಾ ಎಂದು ಬರೆಯುತ್ತಿದ್ದರು. ಮೊದಲಿಗೇ ಕ್ಷೇಮ ಎಂದು ಬರೆಯುತ್ತಿದ್ದೇವೆ. ಆರೋಗ್ಯ ಮತ್ತು ಕ್ಷೇಮ ಎಂದು ನಮ್ಮ ಹಿರಿಕರು ಹೇಳಿದ್ರು. ಆದ್ರೆ ನಾವು ಅದನ್ನ ಉಲ್ಟಾ ಪಲ್ಟಾ ಮಾಡಿದ್ದೇವೆ ಎಂದರು.

ಪ್ರಸ್ತತ ದಿನಗಳಲ್ಲಿ ಕ್ಷೇಮಾ ಬಿಟ್ಟು ಎಲ್ಲಾ ರೂಢಿಸಿಕೊಂಡಿದ್ದೇವೆ ನಾವು, ಆತ್ಮ ಮತ್ತು ದೇಹವನ್ನ ನೈಸರ್ಗಿಕ ಶುದ್ದೀಕರಣವಾಗಿದೇ ಕ್ಷೇಮವನ, ಈ ವನದಲ್ಲಿ ಧರ್ಮವೂ ಸೇರಿಕೊಂಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

RELATED ARTICLES

Related Articles

TRENDING ARTICLES