Monday, December 23, 2024

ಗಣೇಶ ಪ್ರತಿಷ್ಠಾಪನೆ ಮಾಡಿ ಭಾವೈಕ್ಯತೆ ಮೆರೆದ ಮುಸ್ಲಿಮರು

ಮಂಡ್ಯ: ರಾಜ್ಯದಲ್ಲಿ ಹಿಂದೂ ಮುಸ್ಲಿಂ ಧರ್ಮದ ಆಚರಣೆಯ ವಿಚಾರಗಳು ಮೂನೆಲೆಯಲ್ಲಿರುವ ಈ ದಿನಗಳಲ್ಲಿ ಹಿಂದೂ ಯುವಕರೊಂದಿಗೆ ಮುಸ್ಲಿಂ ಯುವಕರು ಸಹ ಗಣೇಶ ಹಬ್ಬವನ್ನು ಆಚರಣೆ ಮಾಡಿ ಗಮನ ಸೆಳೆದ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ನಡೆದಿದೆ.

ರಾಜ್ಯದೆಲ್ಲೆಡೆ ಇಂದು ಗಣೇಶ ಹಬ್ಬ ಆಚರಣೆ ಹಿನ್ನಲೆಯಲ್ಲಿ ಅದರಂತೆ ಗಣೇಶ ಪ್ರತಿಷ್ಠಾಪನೆ ಮಾಡಿ ಮುಸ್ಲಿ ಸಮುದಾಯದ ಯುವಕರು ಭಾವೈಕ್ಯತೆ ಮೆರೆದಿದ್ದಾರೆ. ಗೌರಿ ಗಣೇಶ ಹಬ್ಬದ ಅಂಗವಾಗಿ ಚಿನಕುರಳಿ ಅರಳಿಕಟ್ಟೆ ಸಿದ್ದಿ ವಿನಾಯಕ ಯುವ ಬಳಗದೊಂದಿಗೆ ಹಿಂದೂ ಯುವಕರೊಂದಿಗೆ ಜತೆಗೂಡಿ ಗಣಪತಿ ಪ್ರತಿಷ್ಠಾನೆ ಮಾಡಿ ಮುಸ್ಲಿಂ ಯುವಕರು ಮಾದರಿಯಾಗಿದ್ದಾರೆ.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು 25 ಸಾವಿರ ರೂ ಹಣ ಸಂಗ್ರಹಿಸಿ, ತಾವೇ ಗಣೇಶ ಮೂರ್ತಿ ತಂದು ಕೂರಿಸಿ ಗೌರಿ-ಗಣೇಶ ಹಬ್ಬಕ್ಕೆ ಶುಭಾಶಯಗಳನ್ನು ಕೋರಿ ಬ್ಯಾನರ್ ಹಾಕೋ ಮೂಲಕ ದೇಶಕ್ಕೆ ಸಂದೇಶ ನೀಡಿ, ಚಿನಕುರಳಿ ಗ್ರಾಮದ ಮುಸ್ಲಿಂ ಯುವಕರು ಗಣೇಶ್ ಹಬ್ಬ ಆಚರಣೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES