Monday, December 23, 2024

ಲಕ್ಷ್ಮಣ್ ಸವದಿ ಕಾರು ಅಪಘಾತ, ತಪ್ಪಿದ ಭಾರೀ ಅನಾಹುತ

ಬೆಳಗಾವಿ: ರಾಜ್ಯ ಹೆದ್ದಾರಿಯ ಹಾರೂಗೇರಿ ಪಟ್ಟಣ ಬಳಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಕಾರು ಅಪಘಾತವಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.

ಅಥಣಿಯಿಂದ ಬೆಳಗಾವಿಗೆ ಕಡೆಗೆ ಲಕ್ಷ್ಮಣ ಸವದಿ ಅವರು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಡ್ಡ ಬಂದ ಬೈಕ್​ಗೆ ಡಿಕ್ಕಿ ತಪ್ಪಿಸಲು ಹೋಗಿ ಅನಾಹುತ ಸಂಭವಿಸಿದೆ. ಕಾರು ಅಪಘಾತದಲ್ಲಿ ಸವದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೈಕ್​ಗೆ ಡಿಕ್ಕಿ ತಪ್ಪಿಲು ಹೋಗಿ ತಿರುವಿನ ಅಂಚಿನಲ್ಲಿ ರಸ್ತೆಯ ಪಕ್ಕಕ್ಕೆ ಸವದಿ ಅವರ ಕಾರು ಉರುಳಿ ಬಿದ್ದಿದೆ. ಅಪಘಾತ ಹಾಗುತ್ತಿದ್ದಂತೆ ಸ್ಥಳಿಯರಿಂದ ರಕ್ಷಣಾ ಕಾರ್ಯವಾಗಿದೆ. ಕಾರಿನ ಏರ್​ ಬ್ಯಾಗ್​ ಓಪನ್​ ಆಗಿದ್ದರಿಂದ ಸವದಿ ಅವರಿಗೆ ಯಾವುದೇ ರೀತಿಯಲ್ಲಿ ಗಾಯಗಳಾಗಿಲ್ಲ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಕಾರಿನಲ್ಲಿದ್ದ ಎಲ್ಲರೂ ಸುರಕ್ಷಿತರಾಗಿದ್ದು, ಸ್ಥಳಕ್ಕೆ ಹಾರೂಗೇರಿ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES