Sunday, December 22, 2024

ತಮಿಳುನಾಡಿನಲ್ಲಿ ತಲೆ ಎತ್ತಿದ KGF​ ನರಾಚಿ ಸೀಕ್ರೆಟ್ ಗುಹೆ

ಕೆಜಿಎಫ್ ಅನ್ನೋದು ಬರೀ ಸಿನಿಮಾ ಅಷ್ಟೇ ಅಲ್ಲ. ಅದೊಂದು ಸಂಭ್ರಮ, ಸಡಗರ. ಕ್ರೇಜ್ ಹುಟ್ಟಿಸಿದ ಟ್ರೆಂಡ್​ಸೆಟ್ಟರ್. ಸಿನಿಮಾ ತೆರೆಕಂಡು ತಿಂಗಳುಗಳು ಕಳೆದ್ರೂ ಅದ್ರ ಹವಾ ಮಾತ್ರ ಇನ್ನೂ ಹಾಗೇ ಇದೆ. ಸದ್ಯ ತಮಿಳುನಾಡಿನಲ್ಲಿ ತಲೆ ಎತ್ತಿದೆ ಕೆಜಿಎಫ್​ನ ನರಾಚಿ. ಅದ್ಹೇಗಿದೆ ಅನ್ನೋದ್ರ ಝಲಕ್ ಜೊತೆ ಇನ್​ಸೈಡ್ ಸ್ಟೋರಿ ನೀವೇ ಓದಿ.

  • ಡೆಂಕಣಿಕೋಟೆಯಲ್ಲಿ ಕಾಳಿ, ಅಧೀರ- ರಾಕಿಭಾಯ್ ಕೋಟೆ
  • ಪರಭಾಷೆಗಳಲ್ಲೂ ಮಾಸ್ಟರ್​ಪೀಸ್ KGF ಕ್ರೇಜ್ ಕಾ ಬಾಪ್
  • ಚಾಪ್ಟರ್- 3 ಮೇಲೆ ನಿರೀಕ್ಷೆ.. ಅದು ಹಾಲಿವುಡ್ ರೇಂಜ್..!

ಫ್ರಾಂಚೈಸ್ ಸಿನಿಮಾಗಳು ಬಂದಾಗ ಮೊದಲ ಭಾಗಕ್ಕಿಂತ ನಂತರದ ಭಾಗಗಳು ಕಥೆ, ಮೇಕಿಂಗ್, ಬಜೆಟ್, ಕ್ರೇಜ್, ಬಾಕ್ಸ್ ಆಫೀಸ್ ಹೀಗೆ ಎಲ್ಲಾ ವಿಚಾರಗಳಿಂದ ಸಖತ್ ಸದ್ದು ಮಾಡುತ್ತವೆ. ಕೆಜಿಎಫ್ ಸಿನಿಮಾಗಿಂತ ಅದ್ರ ಚಾಪ್ಟರ್-2ನೇ ದೊಡ್ಡ ಮಟ್ಟಕ್ಕೆ ಕಮಾಲ್ ಮಾಡಿತು.

ಪ್ರಶಾಂತ್ ನೀಲ್ ಅನ್ನೋ ಮಾಂತ್ರಿಕ ಸಿನಿಮಾಗಾಗಿ ಹೊಸ ಪ್ರಪಂಚವನ್ನೇ ಸೃಷ್ಠಿಸಿದ್ರು. ನರಾಚಿ ಅನ್ನೋ ಸಾಮ್ರಾಜ್ಯವನ್ನು ಹುಟ್ಟಿಹಾಕಿದ್ರು. ಚಿನ್ನ ಬಗೆಯಲು ಅಸಹಾಯಕರ ರಕ್ತ ಹೀರುತ್ತಿದ್ದ ಗರುಡನ ಅಂತ್ಯದೊಂದಿಗೆ ಚಾಪ್ಟರ್-1 ಮುಗಿದಿತ್ತು. ರಾಕಿಭಾಯ್ ಗರುಡ ಅನ್ನೋ ಆನೆಯನ್ನ ಹೊಡೆದ ಪರಿ ನಿಜಕ್ಕೂ ವ್ಹಾವ್ ಫೀಲ್ ತಂದುಕೊಟ್ಟಿತ್ತು.

ಕೆಜಿಎಫ್​ ಸಿನಿಮಾಗಾಗಿ ಆ ಕಾಳಿ ದೇವಿಯ ಸೆಟ್​ನ ನಿರ್ಮಿಸಿದ್ದು ಆರ್ಟ್​ ಡೈರೆಕ್ಟರ್ ಶಿವಕುಮಾರ್. ದೇವಿಗೆ ನರಬಲಿ ನೀಡೋ ಮೂಲಕ ಆರತಿ ಬೆಳಗಿದ ಗರುಡನ ರುಂಡ ಚೆಂಡಾಡಿದ್ರು ರಾಕಿಭಾಯ್ ಯಶ್. ಮೊದಲ ಭಾಗದ ಆ ಕ್ಲೈಮ್ಯಾಕ್ಸ್ ನಿಜಕ್ಕೂ ಮೈಂಡ್ ಬ್ಲೋಯಿಂಗ್. ಇದೀಗ ಅದೇ ಕಾಳಿ ಮಾತೆಯನ್ನ ನೆನಪಿಸೋ ಅಂತಹ ಗುಹೆಯೊಂದು ತಮಿಳುನಾಡಿನಲ್ಲಿ ತಲೆ ಎತ್ತಿದೆ.

ಯೆಸ್.. ಇದು ಡೆಂಕಣಿಕೋಟೆಯಲ್ಲಿ ಗಣೇಶ ಉತ್ಸವಕ್ಕಾಗಿ ತಯಾರಾದ ಬೃಹತ್ ಸೆಟ್. ಥೇಟ್ ಕೆಜಿಎಫ್​ನ ಕಾಳಿ ಗುಹೆ ನೆನಪಿಸುವಂತಿರೋ ಈ ಗುಹೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿದೆ. ಇಡೀ ದೇಶವೇ ಗಣೇಶೋತ್ಸವವನ್ನ ಬಹಳ ವಿಜೃಂಭಣೆಯಿಂದ ಸೆಲೆಬ್ರೇಟ್ ಮಾಡುತ್ತೆ. ಅದ್ರಲ್ಲೂ ಕೊರೋನಾದಿಂದಾಗಿ ಎರಡು ವರ್ಷದಿಂದ ಸೈಲೆಂಟ್ ಆಗಿದ್ದ ಜನ, ಈ ಬಾರಿ ದೊಡ್ಡ ಮಟ್ಟದಲ್ಲಿ ಸಂಭ್ರಮಿಸೋಕೆ ತಯಾರಿ ನಡೆಸ್ತಿದ್ದಾರೆ. ಅದು ನಮ್ಮ ಕೆಜಿಎಫ್ ಸಿನಿಮಾದ ಸೆಟ್​ನ ಹೋಲುವಂತಹ ಥೀಮ್ ಸೆಟ್ ಆಗಿರೋದು ಖುಷಿಯ ವಿಚಾರ.

ಸುಮಾರು ಅರ್ಧ ಕಿಲೋಮೀಟರ್​ನಷ್ಟು ದೂರದಿಂದ ಭಕ್ತಾದಿಗಳು ಗುಹೆಯನ್ನ ಹೊಕ್ಕಿ ಗಣಪತಿಯ ದರ್ಶನ ಮಾಡಲಿದ್ದು, ಇದನ್ನ ಎರಡು ತಿಂಗಳುಗಳಿಂದ ನೂರಾರು ಮಂದಿ ಸೇರಿ ನಿರ್ಮಿಸಿದ್ದಾರೆ. ಕನ್ನಡ ಸಿನಿಮಾದ ಕ್ರೇಜ್ ಹೀಗೆ ಪರಭಾಷೆಗಳಲ್ಲಿ ನೋಡೋದೇ ಚೆಂದ. ಇದು ಕೆಜಿಎಫ್ ಚಿತ್ರದ ಪ್ರತಿಯೊಬ್ಬ ಟೆಕ್ನಿಷಿಯನ್ ಹಾಗೂ ಕಲಾವಿದ ಹೆಮ್ಮೆ ಪಡೋ ವಿಷ್ಯ.

ಸದ್ಯ ಕೆಜಿಎಫ್ ಚಾಪ್ಟರ್- 3 ಮೇಲೆ ನಿರೀಕ್ಷೆಗಳು ಗರಿಗೆದರಿದ್ದು, ಹಾಲಿವುಡ್ ರೇಂಜ್​ಗೆ ಅದ್ರ ಮೇಕಿಂಗ್ ಇರಲಿದೆ. ಅದಕ್ಕಾಗಿ ಈಗಲೇ ನಿರ್ದೇಶಕ, ನಿರ್ಮಾಪಕ ಹಾಗೂ ಯಶ್ ಯೋಜನೆಗಳು ರೂಪಿಸುತ್ತಿದ್ದಾರೆ. 1500 ಕೋಟಿ ಬ್ಯುಸಿನೆಸ್ ಮಾಡೋ ತಾಕತ್ತು ಚಾಪ್ಟರ್-2ಗೆ ಇದೆ ಅನ್ನೋದು ಚಿತ್ರತಂಡಕ್ಕೇ ಗೊತ್ತಿರಲಿಲ್ಲ. ಇದೀಗ ಚಾಪ್ಟರ್-3, ಹಾಲಿವುಡ್ ಮಂದಿಯೂ ದಂಗಾಗೋ ಲೆವೆಲ್​ಗೆ ತಯಾರಾಗಲಿದೆ ಅನ್ನೋದು ಮಾತ್ರ ಓಪನ್ ಟಾಕ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES