Monday, June 3, 2024

ಹಾಂಕಾಂಗ್ ವಿರುದ್ಧ ಭಾರತ ಬ್ಯಾಟಿಂಗ್​, ಪಾಂಡ್ಯ ಬದಲಿಗೆ ರಿಷಬ್ ಪಂತ್ ಆಗಮನ

ದುಬೈ: ಏಷ್ಯಾಕಪ್​ ಟಿ-20 ಯಲ್ಲಿ ಭಾರತದ ವಿರುದ್ಧ ಹಾಂಕಾಂಗ್ ಇಂದು ಟಿ-20 ಪಂದ್ಯ ಭಾರತೀಯ ಕಾಲಮಾನ ಸಂಜೆ 7;30 ಕ್ಕೆ ಆರಂಭವಾಗಲಿದ್ದು, ಭಾರತದ ವಿರುದ್ಧ ಹಾಂಕಾಂಗ್​​ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದೆ. ಈ ಮೂಲಕ ಭಾರತ ಮೊದಲು ಬ್ಯಾಟಿಂಗ್​ ಕಾಯ್ದುಕೊಂಡಿದೆ.

ಇನ್ನು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ಹಾರ್ದಿಕ್​ ಪಾಂಡ್ಯ ಅವರನ್ನು ಹಾಂಕಾಂಗ್​ ವಿರುದ್ಧದ ಪಂದ್ಯದಲ್ಲಿ ಕೈಬಿಟ್ಟು ರಿಷಭ್ ಪಂತ್​ ಅವರನ್ನು ಆಡುವ 11 ರ ಬಳಗದಲ್ಲಿ ಆಯ್ಕೆ ಮಾಡಲಾಗಿದೆ.

ಭಾರತ ತಂಡ ಆಡುವ 11 ರ ಪಟ್ಟಿ

ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್(ಕೀಪರ್​​), ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್

ಹಾಂಕಾಂಗ್ ತಂಡ ಆಡುವ 11 ರ ಪಟ್ಟಿ

ನಿಜಾಕತ್ ಖಾನ್ (ನಾಯಕ), ಯಾಸಿಮ್ ಮುರ್ತಾಜಾ, ಬಾಬರ್ ಹಯಾತ್, ಕಿಂಚಿತ್ ಶಾ, ಐಜಾಜ್ ಖಾನ್, ಸ್ಕಾಟ್ ಮೆಕೆಚ್ನಿ (ಕೀಪರ್​), ಜೀಶನ್ ಅಲಿ, ಹರೂನ್ ಅರ್ಷದ್, ಎಹ್ಸಾನ್ ಖಾನ್, ಆಯುಷ್ ಶುಕ್ಲಾ, ಮೊಹಮ್ಮದ್ ಗಜನ್ಫರ್

RELATED ARTICLES

Related Articles

TRENDING ARTICLES