Monday, December 23, 2024

ರಜಿನಿ ಜೈಲರ್ ಬಳಿಕ ಧನುಷ್ ಚಿತ್ರಕ್ಕೆ ಶಿವಣ್ಣ ಮೆಗಾ ಎಂಟ್ರಿ

ಸ್ವೀಟ್​ 60 ಶಿವಣ್ಣ ಸ್ಯಾಂಡಲ್​ವುಡ್​​ನಲ್ಲಿ ಮಿಂಚಿ ಟಾಲಿವುಡ್​​​​, ಕಾಲಿವುಡ್​ ಕಡೆ ಮುಖ ಮಾಡಿದ್ದಾರೆ. ಅವ್ರ ಎನರ್ಜಿ, ಆ್ಯಕ್ಟಿಂಗ್​​, ಸ್ನೇಹ ವಿಶ್ವಾಸಕ್ಕೆ ಪರಭಾಷೆಗಳಿಂದ ಬಿಗ್ ಆಫರ್ಸ್​​​​ ಬರ್ತಿವೆ. ಇಂಟರ್​​ನ್ಯಾಷನಲ್​​ ಸೂಪರ್​ ಸ್ಟಾರ್​ ರಜಿನಿಕಾಂತ್​​ ಜತೆ ಹ್ಯಾಟ್ರಿಕ್ ಹೀರೋ​ ಕೈ ಜೋಡಿಸಿದ್ದಾರೆ. ಇದೀಗ ಧನುಷ್​ ಸಿನಿಮಾದಲ್ಲೂ ಮಿಂಚೋಕೆ ಸೆಂಚುರಿ ಸ್ಟಾರ್​ ಸಜ್ಜಾಗಿದ್ದಾರೆ. ಯಾವ ಸಿನಿಮಾ..? ಯಾವಾಗ..? ಏನ್​ ಕಥೆ ಅಂತೀರಾ..? ನೀವೇ ಓದಿ.

  • ಹಳೆಯ ಋಣ ತೀರಿಸಿದ ಹ್ಯಾಟ್ರಿಕ್​ ಹೀರೋ ಡಾ. ಶಿವಣ್ಣ..!

ಕನ್ನಡದ ಸ್ಟಾರ್​ ನಟರು ಪ್ಯಾನ್​ ಇಂಡಿಯಾ ಲೆವೆಲ್​​ನಲ್ಲಿ ಮಿಂಚ್ತಿದ್ದಾರೆ. ಪರಭಾಷಾ ಸಿನಿಮಾಗಳಲ್ಲೂ ಸ್ಯಾಂಡಲ್​ವುಡ್​ ನಟರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​​ ಇದೆ. ಈ ಸಾಲಿನಲ್ಲಿ ಡಾಲಿ ಧನಂಜಯ, ಕಿಚ್ಚ ಸುದೀಪ್​ ತಮ್ಮದೇ ಛಾಪು ಮೂಡಿಸಿದ್ದಾರೆ. ಇದೀಗ ಸೆಂಚುರಿ ಸ್ಟಾರ್​ ಶಿವಣ್ಣನ ಸರದಿ. ಈಗಾಗ್ಲೇ ಬಾಲಯ್ಯನ  ಗೌತಮಿಪುತ್ರ ಶಾತಕರ್ಣಿ ಸಿನಿಮಾದಲ್ಲಿ ಗೆಸ್ಟ್​ ರೋಲ್​ ಮಾಡಿದ್ದ ಶಿವಣ್ಣ ಟಾಲಿವುಡ್​​ ಸಿನಿಪ್ರಿಯರ ದಿಲ್​ ದೋಚಿದ್ರು.

ಶಿವಣ್ಣನ ಮಗುವಿನಂತ ಮನಸ್ಸಿಗೆ ಇಡೀ ಬಾರತೀಯ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸ್ನೇಹಿತರಿದ್ದಾರೆ. ಅವರ ಮನೋಘ್ನ ಅಭಿನಯವನ್ನು ಮೆಚ್ಚಿ ಪರಬಾಷೆ ನಿರ್ದೆಶಕರು ಬಿಗ್​​ ಆಫರ್​​​ ನೀಡುತ್ತಿದ್ದಾರೆ. ಈಗಾಗ್ಲೇ ರಜಿನಿಕಾಂತ್​ ಜತೆ ಸ್ಕ್ರೀನ್ ಶೇರ್​ ಮಾಡ್ತಿರೋ ಶಿವಣ್ಣ ಮೆಚ್ಚಿನ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ಕೊಟ್ಟಿದ್ದಾರೆ. ಇದೀಗ ಧನುಷ್​ ಚಿತ್ರದಲ್ಲೂ ಶಿವಣ್ಣ ನಟಿಸ್ತಾರೆ ಅನ್ನೋ ಸುದ್ದಿ ಸಖತ್ ವೈರಲ್ ಆಗಿದೆ. ವಜ್ರಕಾಯ ಚಿತ್ರದ ನೋ ಪ್ರಾಬ್ಲಮ್​ ಹಾಡು ಹಾಡಿದ್ದ ಧನುಷ್​​ ಸ್ನೇಹದ ಋಣ ತೀರಿಸೋ ಸಕಾಲ ಈಗ ಕೂಡಿ ಬಂದಿದೆ.

  • ಹಾಲಿವುಡ್​ನಲ್ಲೂ  ಸೂಪರ್​ ಸ್ಟಾರ್​ ಧನುಷ್​ ಮಿಂಚು
  • ವೈ ದಿಸ್​ ಕೊಲವರಿ ಚೆಲುವನಿಗೆ ಭಜರಂಗಿಯ ಸಾಥ್​​​​..!

ಕನ್ನಡದ ಟಾಪ್​ ಮೋಸ್ಟ್​ ನಟರಲ್ಲಿ ಶಿವಣ್ಣ ಈಗ್ಲೂ ಮೊದಲ ಸಾಲಿನಲ್ಲಿ ನಿಲ್ತಾರೆ. ಭೈರಾಗಿ ನಂತ್ರ ವೇದ, ಅಶ್ವತ್ಥಾಮ, ಗೋಸ್ಟ್​​​ ಅಂತಾ ಪ್ಯಾನ್​ ಇಂಡಿಯಾ ಸಿನಿಮಾಗಳಲ್ಲಿ ಹ್ಯಾಟ್ರಿಕ್​ ಹೀರೋ ಬ್ಯುಸಿ ಆಗಿದ್ದಾರೆ.  ವರ್ಷದ ಹನ್ನೆರೆಡು ತಿಂಗಳು ಬಿಡುವಿಲ್ಲದ ಕೆಲಸದಲ್ಲಿ ಶಿವಣ್ಣ ಬ್ಯುಸಿ ಇದ್ದಾರೆ. ಜತೆಗೆ ರಜಿನಿಕಾಂತ್​ ಜೈಲರ್​ ಸಿನಿಮಾ ಕೂಡ ಸಖತ್ ಹೈಪ್​ ಕ್ರಿಯೇಟ್​ ಮಾಡಿದ್ದು ಸಂಚಲನ ಮೂಡಿಸಿದೆ.

ಸತ್ಯಮಂಗಲ ಕಾಡಿನ ರೋಚಕ ಕಹಾನಿಯ ಕಥೆಗೂ ಶಿವಣ್ಣ ಸೈನ್​ ಮಾಡಿದ್ದಾರೆ. ಈ ನಡುವೆ ಧನುಷ್​ ಜತೆ ಬಣ್ಣ ಹಚ್ಚೋ ಸುದ್ದಿ ಬಿರುಗಾಳಿಯಂತೆ ಹರಿದಾಡ್ತಿದೆ. ಇವರಿಬ್ರ ಕಾಂಬೋದಲ್ಲಿ ಮೂಡಿ ಬರ್ತಾ ಇರೋ ಮೊದಲ ಸಿನಿಮಾ ಇದಾಗಲಿದೆ. ಕಥೆ ಏನು..? ಶಿವಣ್ಣನ ರೋಲ್​ ಏನು..? ಯಾವಾಗ ಸೆಟ್ಟೇರಲಿದೆ ಅನ್ನೋದು ಸದ್ಯದಲ್ಲೆ ಗೊತ್ತಾಗಲಿದೆ. ಅಂತೂ ಶಿವಣ್ಣನ ಖದರ್​​​ ಟಾಲಿವುಡ್​, ಕಾಲಿವುಡ್​​ ಮಂದಿಗೂ ತಿಳಿಯಲಿದೆ.

ಹಾಲಿವುಡ್​ನ ಗ್ರೇ ಮ್ಯಾನ್​ ಸಿನಿಮಾದಲ್ಲಿ ನಟಿಸಿ ಅಬ್ಬರಿಸಿದ ಧನುಷ್​ ಸದ್ಯ, ನಾನೆ ವೆರುವೆನ್​, ವಾಥಿ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಇದ್ರ ನಡುವೆ ಹ್ಯಾಟ್ರಿಕ್​ ಹೀರೋ ಶಿವಣ್ಣನ ಜತೆ ಕೈ ಜೋಡಿಸಲಿರುವ ಧನುಷ್​​​ ಸದ್ಯದಲ್ಲೇ ಗುಡ್​ ನ್ಯೂಸ್​ ಕೊಡಲಿದ್ದಾರೆ. ಯೆಸ್​​​.. ಕನ್ನಡದ ವರ್ಸಟೈಲ್​ಆ್ಯಕ್ಟರ್​ ಶಿವರಾಜ್​​ ಕುಮಾರ್​ ತಮಿಳಿಗೂ ಎಂಟ್ರಿ ಕೊಟ್ಟಿರೋದು ಅಭಿಮಾನಿಗಳಿಗೆ ಹೆಮ್ಮೆಯ ವಿಷಯವಾಗಿದೆ. ಆಲ್​ ದಿ ಬೆಸ್ಟ್​ ಡಾ.ಶಿವಣ್ಣ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES