Monday, December 23, 2024

ಹಳೇ ಕಟ್ಟಡಗಳನ್ನ ಪಟ್ಟಿ ಮಾಡಿದ BBMP ಅಧಿಕಾರಿಗಳು

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ವಾಸವಿರೋ ಜನರು ನಿಮ್ಮ ಸುತ್ತಮುತ್ತ ಇರುವ ಹಳೇ ಬಿಲ್ಡಿಂಗ್​ಗಳ ಬಗ್ಗೆ ಎಚ್ಚರವಿರಲಿ. ಹಳೇಯ ಡೇಂಜರ್ ಕಟ್ಟಡಗಳು ಯಾವಾಗ ಬೇಕಾದರೂ ಬೀಳಬಹುದು. ಸದ್ಯ ನಗರದಲ್ಲಿ ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆಗೆ ನಗರದ ಬಹುತೇಕ ಹಳೇ ಕಟ್ಟಡಗಳು ಕಂಟಕವಾಗಿವೆ. ಇಂತಹ ಅಪಾಯದ ಅಂಚಿನಲ್ಲಿರುವ ಕಟ್ಟಡಗಳ ಪಟ್ಟಿ ಸಿದ್ದಪಡಿಸಿದ ಪಾಲಿಕೆ, ಕಟ್ಟಡದ ಮಾಲೀಕರಿಗೆ ನೋಟೀಸ್ ಜಾರಿ ಮಾಡಿದೆ.

ಟ್ವಿನ್ ಟವರ್ ಡೆಮಾಲೀಷನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಬಿಎಂಪಿ ಪುಲ್ ಅಲಾರ್ಟ್​​ ಆಗಿದೆ. ಶಿಥಿಲಾ ವ್ಯವಸ್ಥೆಯಲ್ಲಿರುವ 629 ಕಟ್ಟಡಗಳಲ್ಲಿ 423 ಕಟ್ಟಡ ಮಾಲೀಕರಿಗೆ ಈಗಾಗಲೇ ಬಿಬಿಎಂಪಿ ನೋಟೀಸ್ ಜಾರಿ ಮಾಡಿದೆ. ಕೂಡಲೇ ಕಟ್ಟಡವನ್ನ ಡೆಮಾಲೀಷನ್ ಮಾಡಿ. ಇಲ್ಲವಾದ್ರೆ ಕಟ್ಟಡ ಡೆಮಾಲೀಷನ್ ವೆಚ್ಚ ಬರಿಸಿ ಅಂತ ನೋಟೀಸ್ ನೀಡಿದೆ.

ಸದ್ಯ ಕಟ್ಟಡ ತೆರವಿಗೆ ಈಗಾಗಲೇ ಖಾಸಗಿ ಏಜೆನ್ಸಿ ಜೊತೆ ಒಪ್ಪಂದ ಮಾಡಿರುವ ಬಿಬಿಎಂಪಿ, ವಲಯವಾರು ಹಳೇ ಕಟ್ಟಡಗಳನ್ನ ಗುರುತಿಸಿದೆ.

ಡೇಂಜರ್​​ ಕಟ್ಟಡಗಳು 

ಪೂರ್ವ ವಲಯದಲ್ಲಿ- 101 ಕಟ್ಟಡಗಳು
ಪಶ್ಚಿಮ ವಲಯದಲ್ಲಿ- 160 ಕಟ್ಟಡಗಳು
ದಕ್ಷಿಣ ವಲಯದಲ್ಲಿ- 216 ಕಟ್ಟಡಗಳು
ಬೊಮ್ಮನಹಳ್ಳಿ ವಲಯದಲ್ಲಿ- 11 ಕಟ್ಟಡಗಳು
ದಾಸರಹಳ್ಳಿ ವಲಯದಲ್ಲಿ – 11 ಕಟ್ಟಡಗಳು
ಮಹದೇವಪುರ ವಲಯದಲ್ಲಿ- 37 ಕಟ್ಟಡಗಳು
ರಾಜರಾಜೇಶ್ವರಿ ವಲಯದಲ್ಲಿ- 9 ಕಟ್ಟಡಗಳು
ಯಲಹಂಕ ವಲಯದಲ್ಲಿ – 84 ಕಟ್ಟಡಗಳು

ಸದ್ಯ ಬೆಂಗಳೂರಿನಲ್ಲಿ ಮಳೆ ಬಂದಾಗಲೆಲ್ಲಾ ಒಂದೊಲ್ಲ ಒಂದು ಕಟ್ಟಡ ಕುಸಿಯುತ್ತಲೇ ಇರುತ್ತೆ. ಇದಕ್ಕೆ ಸಾಕ್ಷಿ ಎನ್ನುವಂತೆ ಕಳೆದ ತಿಂಗಳು ಅವೆನ್ಯೂ ರಸ್ತೆಯಲ್ಲಿ ಕುಸಿದ ಬೃಹತ್ ಕಟ್ಟಡ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಬಿಬಿಎಂಪಿ ನೋಟೀಸ್ ಕೊಟ್ಟು 10 ವರ್ಷಗಳು ಕಳೆದ್ರೂ ಕೂಡಾ ಕಟ್ಟಡ ಮಾತ್ರ ಡೆಮಾಲೀಷನ್ ಮಾಡಿಲ್ಲ. ಇನ್ಮುಂದೆ ಆದ್ರೂ ಕಟ್ಟಡ ಮಾಲೀಕರೇ ಕಟ್ಟಡಗಳನ್ನ ನೆಲಸಮ ಮಾಡಿ ಮುಂದೆ ಆಗುವ ಅನಾಹುತಗಳನ್ನ ತಡೆಯಬೇಕಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES