Friday, January 24, 2025

ಬೆಂಗಳೂರಿನಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ

ಬೆಂಗಳೂರು : ಕರೊನಾ ಕಾಟದಿಂದ ಕಳೆದ ಮೂರು ವರ್ಷದಿಂದ ಸರಿಯಾಗಿ ಗೌರಿ-ಗಣೇಶ ಹಬ್ಬವನ್ನ ಬೆಂಗಳೂರಿನ ಜನರು ಆಚರಣೆ ಮಾಡಿರಲಿಲ್ಲ. ಈ ಬಾರಿಯಾದ್ರೂ ಭರ್ಜರಿಯಾಗಿ ಹಬ್ಬವನ್ನ ಆಚರಣೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಆದ್ರೆ ಹಬ್ಬಕ್ಕೆ ಮಳೆರಾಯ ಅಡ್ಡಿಯಾಗಿದ್ದಾನೆ. ಭಾರೀ ಮಳೆ ಹಿನ್ನೆಲೆಯಲ್ಲಿ ಕೆ.ಆರ್. ಮಾರುಕಟ್ಟೆ, ಯಶವಂತಪುರ, ಬಸವನಗುಡಿ ಸೇರಿದಂತೆ ಹಲವು ಮಾರುಕಟ್ಟೆಗಳಲ್ಲಿ ಹೂವಿನ ಬೆಲೆ ಗಗನಕ್ಕೇರಿದೆ. ಬಹುತೇಕ ಜನರು ಹೂ ಬೆಲೆ ಜಾಸ್ತಿ ಆದ್ರೂ ಪರವಾಗಿಲ್ಲ ಫ್ರೆಶ್ ಹೂ ಬೇಕು ಅಂತ ಹೇಳಿ ಡಿಮ್ಯಾಂಡ್ ಇಡುತ್ತಿದ್ದಾರೆ. ಆದರೆ ಮಳೆಯಿಂದ ಮಾರುಕಟ್ಟೆಗಳಲ್ಲಿ ಹೂಗಳು ಕೊಳೆತು ಹೋಗಿದೆ. ಇದರಿಂದ ವ್ಯಾಪಾರಸ್ಥರು ಕೂಡ ಕಂಗಾಲಾಗಿದ್ದಾರೆ.

ಗೌರಿ-ಗಣೇಶ ಹಬ್ಬಕ್ಕೆ ಹೂ, ಹಣ್ಣುಗಳ ಬೆಲೆ ಏರಿಕೆಯಾಗಿದ್ದು, ಮಾರುಕಟ್ಟೆಗಳಲ್ಲಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.

ಬಾಗಿನ ಕೊಡುವ ಅರಿಶಿನ ಕುಂಕುಮ ಸೇರಿದಂತೆ ಉಳಿದ ವಸ್ತುಗಳಿಗೂ ಕೂಡ ಡಿಮ್ಯಾಂಡ್ ಜಾಸ್ತಿಯಾಗಿದೆ. ದೇವಸ್ಥಾನಗಳು ಕೂಡ ಹಬ್ಬಕ್ಕೆ ಅದ್ದೂರಿಯಾಗಿ ಸಜ್ಜಾಗಿವೆ. ನಗರದ ಜೆಪಿ ನಗರದಲ್ಲಿರುವ ಸತ್ಯಸಾಯಿ ಬಾಬಾ ದೇವಸ್ಥಾನದಲ್ಲಿ 10 ಬಗೆಯ ಹಣ್ಣುಗಳು ಹಾಗೂ ಹೂವುಗಳನ್ನು ಬಳಸಿ ವಿಶೇಷ ಅಲಂಕಾರ ಮಾಡಲಾಗಿದೆ.

ಕರೊನಾ ಕಾಟ ತಪ್ತು ಅಂತಾ ಉದ್ಯಾನನಗರಿ ಜನ ಬೆಲೆ ಏರಿಕೆ ನಡುವೆಯೂ ಗಣೇಶ ಹಬ್ಬ ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.. ಮಳೆ ಬರದಿದ್ರೆ ಸಾಕಾಪ್ಪ ಅಂತಾ ವಿನಾಯಕನ ಬಳಿ ಬೇಡಿಕೊಳ್ತಿದ್ದಾರೆ.

ಸ್ವಾತಿ ಪುಲಗಂಟಿ ಮೆಟ್ರೋ ಬ್ಯುರೋ ಬೆಂಗಳೂರು

RELATED ARTICLES

Related Articles

TRENDING ARTICLES