Saturday, January 18, 2025

ಪೆಟ್ರೋಲ್ ಹಾಕಿ ಸುಡ್ತೇನೆ ಎಂದು ಬೆದರಿಕೆ ಹಾಕಿರುವ ಬಗ್ಗೆ ಸಚಿವ ಆನಂದ್ ಸಿಂಗ್ ಸ್ಪಷ್ಟನೆ

ವಿಜಯನಗರ: ನಾನು ಪೆಟ್ರೋಲ್ ಹಾಕಿ ಸುಡ್ತೀನಿ ಎಂದು ಆರೋಪ ಮಾಡಿರುವ ವಿಚಾರ ನನಗರ ತಡವಾಗಿ ಗಮನಕ್ಕೆ ಬಂದಿದೆ. ಇದು ಮಡಿವಾಳ ಸಮಾಜ ಹಾಗೂ ಅಲ್ಲಿ ವಾಸ ಮಾಡುವ ಪೋಲಪ್ಪ ಎನ್ನುವ ವ್ಯಕ್ತಿಗಳ ನಡುವಿನ ವಿಚಾರವಾಗಿದೆ. ಇದರಲ್ಲಿ ನನ್ನನ್ನು ಎಳೆ ತರಲಾಗಿದೆ ಎಂದು ಹೊಸಪೇಟೆಯಲ್ಲಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.

ಸಚಿವ ಆನಂದ್ ಸಿಂಗ್ ಅವರಿಗೆ ನಮಗೆ ಜೀವ ಬೆದರಿಕೆ ಇದೆ ಎಂದು ಹೊಸಪೇಟೆಯ ಎಸ್​ಪಿ ಕಚೇರಿ ಎದುರಿಗೆ ಕುಟುಂಬಯೊಂದು ಪೆಟ್ರೋಲ್​ ಸುರಿದುಕೊಮಡು ಆತ್ಮಹತ್ಯೆ ಯತ್ನ ಪ್ರಕರಣವಾಗಿ ಮಾತನಾಡಿದ ಸಚಿವರು, ಮಡಿವಾಳ ಸಮಾಜದ ಮಹಿಳೆಯನ್ನು ಪೋಲಪ್ಪ ಮದುವೆ ಮಾಡಿಕೊಂಡಿರೋ ವಿಚಾರ ತಡವಾಗಿ ಗೊತ್ತಾಗಿದೆ. ಪೋಲಪ್ಪ ಅವರಿಗೆ ನಾಲ್ಕು ತಿಂಗಳ ಹಿಂದೆ ಕಚೇರಿಗೆ ಕರೆದು ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದೆ. ನಾನು ಶಾಸಕನಾದ ಮೇಲೆ ಇಬ್ಬರೂ ಸರಿಪಡಿಸಿಕೊಂಡು ಹೋಗಿ ಅಂತ ಸಲಹೆ ನೀಡಿದ್ದೆ, ಆದರೆ ಯಾವುದೇ ರೀತಿ ಆ ಸಮಸ್ಯೆ ಬಗೆಹರಿದಿಲ್ಲ.

ಮತ್ತೊಮ್ಮೆ ಪೋಲಪ್ಪ ಹಾಗೂ ಮಡಿವಾಳ ಸಮಾಜದ ಮುಖಂಡರನ್ನು ಕರೆದು ರಾಜಿ ಯತ್ನ ಮಾಡಿದೆ. ಪೋಲಪ್ಪ ವಾಸ ಮಾಡೋ ಜಾಗವಲ್ಲದೆ ಒಂದು ಎಕರೆ ಮೂವತ್ತು ಗುಂಟೆ ಜಮೀನು ಸಹ ನಾಗೇನಹಳ್ಳಿ ಬಳಿ ಇದೆ ಎನ್ನೋ ವಿಚಾರವೂ ಗೊತ್ತಾಗಿದೆ. ಅದನ್ನು ನೀವು ತಗೊಳಿ ಇಲ್ಲಿರೋದು ಪೋಲಪ್ಪ ತಗೊಳ್ಳಲಿ ಅಂತ ಮಡಿವಾಳ ಸಮಾಜದವರಿಗೆ ಸಲಹೆ ನೀಡಿದೆ. ಆದರೆ ಪೋಲಪ್ಪ ವಾಸವಾಗಿರೋ ಜಾಗದಲ್ಲಿ ಅರ್ಧ ಜಾಗವೂ ಬೇಕು ಅಂತ ಮಡಿವಾಳ ಸಮಾಜದವರು ಕೇಳಿದ್ದರು. ಅಷ್ಟರಲ್ಲಿ ಚಿತ್ರದುರ್ಗದ ಮಡಿವಾಳ ಮಠದ ಹೆಸರಲ್ಲಿನಲ್ಲಿ ಈ ಜಾಗ ಇದೆ ಎನ್ನೋ ವಿಚಾರ ಗೊತ್ತಾಗಿದೆ. ಆ ಮಠದವರೂ ಬಂದು ನನ್ನನ್ನು ಭೇಟಿ ಮಾಡಿದರು, ಅವರಿಗೆ ದಾಖಲೆ ತಗೊಂಡು ಬನ್ನಿ ಅಂತ ಹೇಳಿ ಕಳಿಸಿದ್ದೆ, ನನಗೂ ಎರಡು ತಿಂಗಳಿನಿಂದ ಹುಷಾರು ಇರಲಿಲ್ಲ. ನಿನ್ನೆ ಮಡಿವಾಳ ಸಮಾಜದವರ ಮನವಿ ಮೇರೆಗೆ ನಾನೂ ಸಹ ಸ್ಥಳಕ್ಕೆ ಹೋಗಿ ಗಮನಿಸಿದ್ದೇನೆ ಎಂದರು.

ಇನ್ನು ಕಮಿಷನರ್ ಅವರನ್ನೂ ಸಮಸ್ಯೆ ಇದೆ ಬನ್ನಿ ಎಂದು ಕರೆದುಕೊಂಡು ಹೋದೆ, ಆಗ ಪೋಲಪ್ಪ ಅವರೇ ನಾನು ದೌರ್ಜನ್ಯ ಮಾಡ್ತಿದ್ದೀರಿ ಅಂತ ಹೇಳಿದ್ರು. ಇದು ನಿನ್ನ ಪಿರ್ತಾರ್ಜಿತ ಆಸ್ತಿ ಅಲ್ಲ. ನಿನ್ನ ಅತ್ತೆ ಮಾವನಿಗೆ ಸಂಬಂಧಿಸಿದ್ದು, ನೀನು ಮಾತಾಡಬೇಡ ಎಂದು ಸಲಹೆ ನೀಡಿದ್ದೇನೆ ಎಂದು ಆನಂದ್ ಸಿಂಗ್ ಹೇಳಿದರು.

ಮಡಿವಾಳ ಸಮಾಜದವರು ಅವರ ಹೆಸರು ಬರೆಯೋದಕ್ಕೆ ಹೋದ್ರು ಆಗ ಪೋಲಪ್ಪ ಅವರ ಕಡೆಯವರು ಬಂದು ಅಳಿಸಿದ್ರು, ಆಗ ಕಮಿಷನರ್ ಅವರಿಗೆ ಜಾಗದ ಬಗ್ಗೆ ದಾಖಲಾತಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಿ ಅಂತ ಸಲಹೆ ನೀಡಿದೆ. ದಾಖಲೆ ಸರಿಯಿಲ್ಲವಾದರೆ ಸರ್ಕಾರದ ವಶಕ್ಕೆ ಪಡೆಯಿರಿ ಎಂದು ಕಮಿಷನರ್ ಅವರಿಗೆ ಸೂಚಿಸಿದ್ದೇನೆ. ನನ್ನ ಮೇಲೆ ಆರೋಪವಿದೆ, ಇಲಾಖೆಗಳಿವೆ ತನಿಖೆ ಮಾಡಲಿ ತಪ್ಪಿದ್ದರೆ ಕ್ರಮ ಕೈಗೊಳ್ಳಿ ಎಂದಿದ್ದೇನೆ ಎಂದರು.

ಹುಡುಗ ಯಾವ ಜಾತಿ ಸೇರಿದವನು ಎನ್ನೋದು ಗೊತ್ತಿಲ್ಲ, ನಾನು ಜಾತಿ ನಿಂದನೆ ಮಾಡೋ ವ್ಯಕ್ತಿಯೂ ಅಲ್ಲ. ಹಾಗೇನಾದರೂ ನನ್ನದು ತಪ್ಪಿದ್ದರೆ ನನ್ನ ವಿರುದ್ಧ ಕ್ರಮ ಕೈಗೊಳ್ಳಲಿ, ನಾನು ಮಂತ್ರಿ ಅಂತ ಯಾವೊಬ್ಬ ಅಧಿಕಾರಿಗಳ ಮೇಲೂ ನಾನು ಪ್ರಭಾವ ಬೀರಲ್ಲ, ತನಿಖೆ ನಡೆದ ಮೇಲೆ ಸತ್ಯಾಸತ್ಯತೆ ಹೊರಗೆ ಬರುತ್ತದೆ. ನಾನೂ ಸಹ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತೆ. ಆದರೆ ಅವರ ಮನಸಾಕ್ಷಿಗೆ ಗೊತ್ತಿರಲಿ ನಾನು ಆ ಬಗೆಯ ಪದಬಳಕೆ ಮಾಡಿದ್ದೀನಾ ಅಂತ, ಅವರ ಆರೋಪವನ್ನು ಸಚಿವ ಆನಂದ ಸಿಂಗ್​ ಖಂಡಿಸಿದರು.

RELATED ARTICLES

Related Articles

TRENDING ARTICLES