Wednesday, January 22, 2025

ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಹತ್ತು ಕೆಜಿ ಅಕ್ಕಿ ಕೊಟ್ಟಿಲ್ಲ : ಉಮೇಶ್ ಕತ್ತಿ

ವಿಜಯಪುರ : ಸಿದ್ದರಾಮಯ್ಯ ರಾಜಕೀಯವಾಗಿ ತನಗೆ ಏನು ಬೇಕೋ ಅದನ್ನ ಹೇಳುತ್ತಿದ್ದಾನೆ. ಜನ ಅದನ್ನು ನಂಬುಬಾರದು ಎಂದು ವಿಜಯಪುರದಲ್ಲಿ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಆ ರೀತಿ ಎಲ್ಲಿಯೂ ಹೇಳಿಲ್ಲ. ಅನ್ನಭಾಗ್ಯ ಯೋಜನೆ ಯಾಕೆ ಬಂದ್ ಮಾಡ್ತಾರೆ. ಅದು ನನ್ನ ಹೇಳಿಕೆಯಲ್ಲ ಸಿದ್ದರಾಮಯ್ಯಗೆ ಹೇಳೋಕೆ ಇಷ್ಟ ಪಡ್ತೀನಿ. ಆಹಾರ ಭದ್ರತಾ ಯೋಜನೆಯಡಿ ಐದು ಕೆಜಿ ಅಕ್ಕಿ ಕೊಡಬೇಕು ಅಂತ ನಾವು ಮಾಡಿದ್ದು. ಕಾನೂನು ನಮ್ಮ ಹಿಂದಿನ ಸರಕಾರ ಮಾಡಿದ್ದು, ಈ ಕಾನೂನು ಇದೆಯೋ ಇಲ್ವೋ. ನಾನು ಮುಖ್ಯಮಂತ್ರಿಯಾದ್ರೆ ಹತ್ತು ಕೆಜಿ ಅಕ್ಕಿ ಕೊಡ್ತೀನಿ ಎಂದು ಹಿಂಗ್ ಹಿಂಗ್ ಹೊರಳಾಡ್ತಾನೆ ಎಂದರು.

ಇನ್ನು, ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಹತ್ತು ಕೆಜಿ ಅಕ್ಕಿ ಕೊಟ್ಟಿಲ್ಲ. ನಾಲ್ಕು, ಐದು, ಏಳು ಕೆಜಿ ಅಕ್ಕಿ ಕೊಟ್ಟಾರೆ. ನಾವು ಮಾತ್ರ ಹತ್ತು ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಜೊತೆಗೆ ಜೋಳ, ರಾಗಿ ಕೊಡ್ತಿದ್ದೇವೆ. ಸಿದ್ದರಾಮಯ್ಯ ರಾಜಕೀಯವಾಗಿ ತನಗೆ ಏನು ಬೇಕೋ ಅದನ್ನ ಹೇಳುತ್ತಿದ್ದಾನೆ. ಜನ ಅದನ್ನು ನಂಬುಬಾರದು. ಸಿದ್ದರಾಮಯ್ಯ ವಿರುದ್ಧ ಸಚಿವ ಕತ್ತಿ ಏಕವಚನದಲ್ಲಿ ವಾಗ್ದಾಳಿ ಮಾಡಿದರು.

ಅದಲ್ಲದೇ, ಅನ್ನಭಾಗ್ಯ ಯೋಜನೆ ಬಂದ್ ಮಾಡಿ ಎಂದು ಸುಪ್ರೀಂ ಕೋರ್ಟ್ ಯಾಕೆ ಬಯಸುತ್ತೆ ಹೇಳಿ. ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ಬಯಸಿದ್ರೆ ಅನ್ನಭಾಗ್ಯ ಯೋಜನೆ ಬಂದ್ ಮಾಡ್ತಿವಿ ಅಂತ ನಾನು ಹೇಳಿಲ್ಲ ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಐದು ಕೆಜಿ ಅಕ್ಕಿ ಕೊಡ್ಬೇಕಂತಿದೆ. ನಮ್ಮ ರಾಜ್ಯದಲ್ಲಿ ಅಕ್ಕಿ ಜೊತೆಗೆ ಜೋಳ, ರಾಗಿ ಕೊಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದ ಸಚಿವ ಕತ್ತಿ ಹೇಳಿದರು.

RELATED ARTICLES

Related Articles

TRENDING ARTICLES