Saturday, January 18, 2025

ಚಾಮರಾಜಪೇಟೆ ಈದ್ಗಾದಲ್ಲಿ ಗಣೇಶೋತ್ಸವಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್​

ನವದೆಹಲಿ: ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಮೂಲಕ ಈದ್ಗಾ ಮೈದಾನದಲ್ಲಿ ಈ ಬಾರಿ ಗಣೇಶೋತ್ಸವ ಆಚರಣೆ ಇಲ್ಲ.

ಈದ್ಗಾ ಮೈದಾನದಲ್ಲಿ ಈ ಮೊದಲಿನಂತೆ ಯಥಾಸ್ಥಿತಿ ಕಾಪಾಡಬೇಕು. ಈದ್ಗಾ ಸ್ಥಳ ಬಿಟ್ಟು ಬೇರೆಡೆ ಸ್ಥಳದಲ್ಲಿ ಗಣೇಶೋತ್ಸವ ಆಚರಿಸಲು ಸುಪ್ರೀಂ ಕೋರ್ಟ್​ ಸೂಚನೆ ನೀಡಿದೆ.

ಹೈಕೋರ್ಟ್​ ಈದ್ಗಾದಲ್ಲಿ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡುವುದನ್ನ ರಾಜ್ಯ ಸರ್ಕಾರಕ್ಕೆ ಬಿಟ್ಟಿತ್ತು. ಹೈಕೋರ್ಟ್​ ಆದೇಶವನ್ನ ಪ್ರಶ್ನಿಸಿ ಮುಸ್ಲಿಂ ವಕ್ಫ್​ ಮಂಡಳಿ ಸುಪ್ರೀಂ ಕೊರ್ಟ್​ ಮೊರೆ ಹೋಗಿತ್ತು.

ಸುಪ್ರೀಂ ಕೋರ್ಟ್​ ತ್ರೀ ಸದಸ್ಯ ಪೀಠ ಇಂದು ಮುಸ್ಲಿಂ ವಕ್ಫ್​ ಮಂಡಳಿ ಅರ್ಜಿ ಆಲಿಸಿ ಕಳೆದ 200 ವರ್ಷಗಳಿಂದ ಈ ಮೈದಾನದಲ್ಲಿ ಏನು ಇದೆಯೋ ಅದೆ ರೀತಿ ಹೋಗಲಿ. ಎರಡು ದಿನ ಬಿಟ್ಟು ಈ ತೀರ್ಪು ಪ್ರಶ್ನಿಸಿ ಹೈಕೋರ್ಟ್​ಗೆ ಹೋಗಬಹುದು, ಹೈಕೋರ್ಟ್​ನಲ್ಲಿಯೇ ಈ ತೀರ್ಪು ಇತ್ಯಾರ್ಥ ಮಾಡಿಕೊಳ್ಳಿ ಎಂದು ಸುಪ್ರೀಂ ತೀರ್ಪು ನೀಡಿದೆ. ಈ ಮೂಲಕ ರಾಜ್ಯ ಬಿಜೆಪಿ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ.

 

RELATED ARTICLES

Related Articles

TRENDING ARTICLES