Saturday, January 18, 2025

ಒಂದೇ ಕುಟುಂಬದ 9 ಜನ ಪೆಟ್ರೋಲ್ ಸುರಿದುಕೊಂಡ ಸಚಿವರ ವಿರುದ್ಧ ಪ್ರತಿಭಟನೆ

ವಿಜಯನಗರ: ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ರಿಂದ ಬೆಂಕಿ ಹಚ್ಚುವ ಬೆದರಿಕೆ ಆರೋಪ ಹಿನ್ನಲೆಯಲ್ಲಿ ಒಂದೇ ಕುಟುಂಬದ 9 ಜನರು ಪೆಟ್ರೋಲ್ ಸುರಿದುಕೊಂಡು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಮುಂಭಾಗ ನಡೆದಿದೆ.

ಸಚಿವ ಆನಂದ್ ಸಿಂಗ್ ಅವರು ಬೆಂಕಿ ಹಾಕಿ ನಿಮ್ಮ ಮನೆ ಸುಡ್ತೀನಿ ಎಂದು ನಮ್ಮ ಕುಟುಂಬಕ್ಕೆ ಬೆದರಿಸಿದ್ದಾರೆ ಎಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ 6 ನೇ ವಾರ್ಡ್ ನ ಡಿ.ಪೋಲಪ್ಪ ಕುಟುಂಬದ ಸದಸ್ಯರಿಂದ ಪೆಟ್ರೋಲ್ ಸುರಿದುಕೊಂಡು ಪ್ರತಿಭಟನೆ ನಡೆದಿದೆ. ಹೀಗಾಗಿ ಇಂದು ಪೆಟ್ರೋಲ್ ಸುರಿದುಕೊಂಡಿದ್ದೇವೆ ಎಂದು ಒಂದೇ ಕುಟುಂಬದ ಜನರು ಸಚಿವರ ಮೇಲೆ ಆರೋಪ ಮಾಡಿದ್ದಾರೆ.

ನೀವು ವಾಸಿಸುತ್ತಿರುವ ಸ್ಥಳದ ಜಾಗ ಖಾಲಿ ಮಾಡಿ ಇಲ್ಲವಾದಲ್ಲಿ ಬೆಂಕಿ ಹಚ್ಚಿ ನಿಮ್ಮನ್ನ ಸುಡುತ್ತೇನೆ ಎಂದು ಆನಂದ್​ ಸಿಂಗ್ ಬೆದರಿಕೆ ಆರೋಪ ಮಾಡಿದ್ದಾರೆ. ಸಚಿವ ಆನಂದ್ ಸಿಂಗ್ ಬಂದು ಬೆಂಕಿ ಹಚ್ಚಲಿ ಎಂದು ಪೇಟ್ರೋಲ್​ ಸುರಿದುಕೊಂಡು ಪ್ರತಿಭಟನೆ ಮಾಡಿದರು.

RELATED ARTICLES

Related Articles

TRENDING ARTICLES