Monday, December 23, 2024

ಗಣೇಶ ಪ್ರತಿಷ್ಠಾಪನೆಗೆ ಕಾಂಗ್ರೆಸ್ ವಿರೋಧ ಮಾಡ್ತಿರೋದು ಸರಿಯಲ್ಲ : ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ : ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಿದ ಹಿನ್ನಲೆಯಲ್ಲಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಪಾಲಿಕೆ ಜಾಗದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಬಾರದು ಸ್ವಾಗತಾರ್ಹ ಬೆಳವಣಿಗೆ. ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಇದೀಗ ಆ ಬೇಡಿಕೆ ಈಡೇರಿದೆ ಎಂದರು.

ಇನ್ನು, ಆರು ಸಂಘಟನೆಗಳ ಪೈಕಿ ಯಾರಿಗೆ ಅವಕಾಶ ಕೊಟ್ಟರು ಸ್ವಾಗತಿಸುತ್ತೇವೆ. ಎಲ್ಲರೂ ಕೂಡಿ ಮೂರು ದಿನ ಗಣೇಶೋತ್ಸವ ಮಾಡ್ತೇವೆ. ಎಲ್ಲ ಸಂಘಟನೆಗಳು ಸೇರಿ ಗಣೇಶೋತ್ಸವ ರೂಪುರೇಷೆ ಸಿದ್ಧ ಮಾಡ್ತೇವೆ. ಆದರೆ ಗಣೇಶ ಪ್ರತಿಷ್ಠಾಪನೆಗೆ ಕಾಂಗ್ರೆಸ್ ವಿರೋಧ ಮಾಡ್ತಿರೋದು ಸರಿಯಲ್ಲ. ನಮ್ಮ ಗಣೇಶನಿಗೆ ವಿರೋಧಿಸುವವರೇ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆ ಗೂ ಅವರು ವಿರೋಧ ಮಾಡಲಿ. ವಿನಾಕಾರಣ ವಿವಾದ ಮಾಡೋದನ್ನ ಕಾಂಗ್ರೆಸ್ ಬಿಡಲಿ. ಸೌಹಾರ್ದಯುತ ಹಬ್ಬ ಆಚರಣೆಗೆ ಸಹಕರಿಸಲಿ ಎಂದು ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES