ಮೈಸೂರು : ಕುಶಾಲತೋಪಿನ ಸಿಡಿ ಮದ್ದು ಸ್ಪೋಟ ಆಯ್ತು ಅಂದ್ರೆ, ಅದು ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಬಂದೇ ಬಿಡ್ತು ಅಂತಾ. ಅಷ್ಟೇ ಅಲ್ಲ ಜಂಬೂ ಸವಾರಿ ಮೆರವಣಿಗೆಗೆ ವಿದ್ಯುಕ್ತ ಚಾಲನೆ ದೊರೆತಿದೆ.
ಕುಶಾಲ ತೋಪಿಗೆ ದಸರಾದಲ್ಲಿ ವಿಶೇಷ ಮಹತ್ವವಿದೆ. ದಸರಾ ಮುಗಿದ ನಂತರ ಒಂದು ವರ್ಷಗಳ ಕಾಲ ಅಲಂಕಾರಿಕವಾಗಿದ್ದ ಕುಶಾಲ ತೋಪುಗಳನ್ನು ಈಗ ಸಜ್ಜು ಗೊಳಿಸಲಾಗ್ತಿದೆ. ಈ ಬಾರಿಯ ದಸರಾದಲ್ಲಿ ಬಳಸಿಕೊಳ್ಳಲು ಇಂದು ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಗಿದೆ.
ಕುಶಾಲ ತೋಪು ಸಿಡಿಮದ್ದು ಸ್ಪೋಟಗೂಳ್ಳುವುದರ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ಸಾಗಲು ಸಾಂಕೇತಿಕ ಚಾಲನೆ ದೊರೆಯುತ್ತದೆ. ಕಳೆದ ವರ್ಷ ದಸರಾ ಮಹೋತ್ಸವ ಮುಗಿದ ನಂತರ ಅಲಂಕಾರಿಕವಾಗಿದ್ದ ಫಿರಂಗಿಗಾಡಿಗಳು ಈಗ ಬಾರಿಯ ದಸರೆಗಾಗಿ ಸಜ್ಜುಗೊಂಡಿವೆ. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಟಿ.ಸೋಮಶೇಖರ್ ಅರಮನೆಯಂಗಳದಲ್ಲಿ ಕುಂಬಳಕಾಯಿ ಹೊಡೆಯುವ ಮೂಲಕ ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಿದರು.