Saturday, January 18, 2025

ಮುರುಘಾ ಶ್ರೀ ಆರೋಪದಲ್ಲಿ ಕಾನೂನು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ: ಮನಗೂಳಿ ಸ್ವಾಮೀಜಿ

ವಿಜಯಪುರ: ಮುರುಘಾ ಶರಣರು ರಾಜ್ಯದ ಪ್ರಭಾವಿ ಸ್ವಾಮೀಜಿಗಳು. ಸತ್ಯಾಂಶ ತಿಳಿದುಕೊಳ್ಳದೇ ಯಾರು ಏನು ಹೇಳೋಕೆ ಇಷ್ಟ ಪಡಲ್ಲ. ಮುರುಘಾ ಶರಣರು ಎಲ್ಲಾ ಪರಂಪರೆ ಪೂಜ್ಯರನ್ನು ಪ್ರೀತಿಯಿಂದ ಕಾಣುವ ಪೂಜ್ಯರಾಗಿದ್ದಾರೆ ಎಂದು ಜಿಲ್ಲೆಯ ಮನಗೂಳಿ ಮಠದ ಸಂಗನಬಸವ ಸ್ವಾಮೀಜಿ ಹೇಳಿದರು.

ಮುರುಘಾ ಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ವಿಚಾರವಾಗಿ ವಿಜಯಪುರದ ಉತ್ನಾಳ ಗ್ರಾಮದಲ್ಲಿಂದು ಮಾತನಾಡಿದ ಸಂಗನಬಸವ ಸ್ವಾಮೀಜಿ, ಮುರುಘಾ ಶರಣರ ವಿಚಾರದಲ್ಲಿ ಕಾನೂನು ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಅದಕ್ಕೆ ನಾನು ಬದ್ಧ ಎಂದು ಮುರುಘಾ ಶರಣರು ಹೇಳಿದ್ದಾರೆ. ಮುರುಘಾ ಶರಣರದ್ದು ಯಾವುದೇ ತಪ್ಪು ಇಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದರು.

ದೇಶ, ರಾಜ್ಯದಲ್ಲಿ ದೊಡ್ಡ ದೊಡ್ಡ ಸ್ವಾಮೀಜಿಗಳ ಬೆನ್ನಿಗೆ ಚೂರಿ ಹಾಕಲು ಬಹಳಷ್ಟು ಜನ ದೊಡ್ಡವರು ಬೆನ್ನು ಹತ್ತಿರ್ತಾರೆ. ರಾಜ್ಯದಲ್ಲಿ ಸ್ವಾಮೀಜಿಗಳು ನಿಸ್ವಾರ್ಥದಿಂದ ಕೆಲಸ ಮಾಡ್ತಿರ್ತಾರೆ. ಸ್ವಾಮಿಗಳು ತಮ್ಮ ಸ್ವಂತಕ್ಕಾಗಿ ಯಾರೂ ಆಸ್ತಿ ಮಾಡಲ್ಲ. ಸ್ವಾಮೀಜಿಗಳು ಆಸ್ತಿ ಯಾರು ಅಂದ್ರೆ ಜಗತ್ತಿನ ತಂದೆ ತಾಯಿ. ಮಠಕ್ಕೆ ಸ್ವಾಮೀಜಿ ಮಾಡುವಾಗ ಉಡುದಾರ ಕಟ್ ಮಾಡ್ತಾರೆ. ಉಡುದಾರ ಯಾಕೆ ಕಟ್ ಮಾಡ್ತಾರೆ ಅಂದ್ರೆ ಇಲ್ಲಿಗೆ ನಿನ್ನ ರಕ್ತ ಸಂಬಂಧ ಮುಗಿಯಿತು ಎಂದರ್ಥ.

ರಕ್ತ ಸಂಬಂಧ ಯಾರು ಅಂದ್ರೆ ಜಗತ್ತಿನಲ್ಲಿ, ಊರಲ್ಲಿರುವವವರೆ ಬಂಧು ಬಳಗ. ಸನ್ಯಾಸಿಗಳಿಗೆ ಉಡುದಾರ ಕಟ್ ಮಾಡ್ತಾರೆ ಎಂದು ಮನಗೂಳಿಯ ಸಂಗನಬಸವ ಸ್ವಾಮೀಜಿ ಹೇಳಿದರು.

RELATED ARTICLES

Related Articles

TRENDING ARTICLES