Wednesday, January 22, 2025

ಅಬ್ಬರಿಸಿ ಬೊಬ್ಬಿರಿದು ಠುಸ್ ಪಟಾಕಿ ಆಗಿದ್ಯಾಕೆ ಲೈಗರ್..?!

ರಿಲೀಸ್​ಗೂ ಮುನ್ನವೇ ಕೋಟಿ ಕೋಟಿ ಸುರಿದು ಭರ್ಜರಿ ಪ್ರಚಾರ ಗಿಟ್ಟಿಸಿದ್ದ ಲೈಗರ್ ಬಾಕ್ಸ್​ ಆಫೀಸ್​ ಕಲೆಕ್ಷನ್​​ನಲ್ಲಿ ನೆಲಕಪ್ಪಳಿಸಿದೆ. ನಾಲ್ಕೇ ದಿನಕ್ಕೆ ಮಖಾಡೆ ಮಲಗಿರುವ ಲೈಗರ್​​ ಫ್ಯಾನ್ಸ್​ಗಳಿಗೆ ನಿರಾಸೆ ಉಂಟು ಮಾಡಿದೆ. ಕ್ರಾಸ್​ಬ್ರೀಡ್​ ಟೈಗರ್​​ ಘರ್ಜಿಸದೇ ಸಪ್ಪೆ ಮೋರೆ ಹಾಕಿ ಗುಹೆ ಸೇರಿದೆ. ಅಷ್ಟಕ್ಕೂ ಲೈಗರ್​ ಸೋಲಿಗೆ ಕಾರಣಗಳೇನು ಅನ್ನೋ ಜತೆಗೆ, ಒಂದಿಷ್ಟು ಸ್ಯಾಂಡಲ್​ವುಡ್​ ಅಪ್ಡೇಟ್ಸ್​ ನೀವೇ ಓದಿ.

IMDB ರೇಟಿಂಗ್​ ಲಾಸ್​​​.. ಮೈಕ್​ ಟೈಸನ್​ ಕಾಮಿಡಿ ಪೀಸ್​​​..!

ವರ್ಲ್ಡ್​​ ವೈಡ್​​​​ ಸಂಚಲನ ಮೂಡಿಸಿದ್ದ ಲೈಗರ್​ ಸಿನಿಮಾ ಬಾಕ್ಸ್​ ಆಫೀಸ್​ ಕಲೆಕ್ಷನ್​​​ನಲ್ಲಿ ನೆಲಕಚ್ಚಿದೆ. ಪ್ರೆಕ್ಷಕರ ನಿರೀಕ್ಷೆಗಳು ಠುಸ್​ ಪಾಟಾಕಿಯಾಗಿವೆ. ಬಾಕ್ಸಿಂಗ್​ ದಿಗ್ಗಜ ಮೈಕ್​ ಟೈಸನ್​​ ಜತೆಗಿನ ರಣ ರೋಚಕ ಕಾಳಗ ಕೂಡ ಸಪ್ಪೆಯಾಗಿದೆ. ಯೆಸ್. ವಿಜಯ್​ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಅಭಿನಯದಲ್ಲಿ ಮೂಡಿ ಬಂದ ಅದ್ಧೂರಿ ವೆಚ್ಚದ ಸಿನಿಮಾ ಲೈಗರ್​​​. ಆದ್ರೆ, ಬರೀ ನೆಗಟಿವ್​ ಕಮೆಂಟ್​​ಗಳಿಂದ ಸಿನಿಮಾ ಭಾರಿ ಹಿನ್ನೆಡೆ ಕಂಡಿದೆ.

ಸಿನಿಮಾದಲ್ಲಿ ಕೆಲವು ಸನ್ನಿವೇಶಗಳು ಲಾಜಿಕ್​ ಇಲ್ಲದೆ ಮೂಡಿ ಬಂದಿವೆ. ರಿಯಲ್​ ಹೀರೋ ಮೈಕ್​ ಟೈಸನ್​​ ರೀಲ್​ ಹೀರೋ ವಿಜಯ್​ ದೇವರಕೊಂಡ ಮುಂದೆ ಪೀಕಲಾಗಿದ್ದಾರೆ. ಕಾಮಿಡಿ ಪೀಸ್​​ ಆಗಿ ಹೋಗಿದ್ದಾರೆ. ನಿರಾಯಾಸವಾಗಿ ಟೈಸನ್​​ನ್ನು ಹೊಡೆದುರುಳಿಸೋ ನಾಯಕನ ನಡೆ ಪ್ರೇಕ್ಷಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಇತ್ತ ಆನ್​​ಲೈನ್​ IMDB ರೇಟಿಂಗ್​​​ನಲ್ಲೂ ಕುಸಿತ ಕಂಡಿದೆ.

ಮೊದಲ ದಿನದಲ್ಲಿ 33 ಕೋಟಿ ಕಲೆಕ್ಷನ್ ಮಾಡಿದ್ದ ಲೈಗರ್ ಎರಡನೇ ದಿನದ ಕಲೆಕ್ಷನ್​​ನಲ್ಲಿ 16 ಕೋಟಿ ಗಳಿಸಿದೆ. ಪ್ಯಾನ್​ ಇಂಡಿಯಾ ಸಿನಿಮಾ ಲೈಗರ್​ ಈ ಸೋಲನ್ನು ಚಿತ್ರತಂಡ ಆತ್ಮಾವಲೋಕನ ಮಾಡಬೇಕಾಗಿದೆ. ಎನಿವೇ, ಅದ್ಧೂರಿಯಾಗಿ ಮೂಡಿ ಬಂದಿದ್ದ ಲೈಗರ್​ ಸಿನಿಮಾ ಸೋಲು ಫ್ಯಾನ್ಸ್​ಗೆ ಸಖತ್​ ನಿರಾಸೆಯಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES