Thursday, December 26, 2024

ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಆರ್ಭಟ, ಜನರಲ್ಲಿ ಆತಂಕ

ಚಾಮರಾಜನಗರ : ಸತತವಾಗಿ ಬೀಳುತ್ತಿರುವ ಮಳೆ, ಹಲವು ಗ್ರಾಮಗಳು ಇನ್ನು ಜಲಾವೃತವಾಗಿದ್ದು, ಜಿಲ್ಲೆಯ ಸುವರ್ಣವತಿ ಹಾಗೂ ಚಿಕ್ಕಹೊಳೆ ಜಲಾಶಯಗಳು ಸಂಪೂರ್ಣ ಭರ್ತಿಯಾಗಿದೆ.

ಜಿಲ್ಲೆಯಲ್ಲಿ ಮುಂದುವರಿದ ಮಳೆಯ ಆರ್ಭಟ, ಜನರಲ್ಲಿ ಆತಂಕ ಉಂಟಾಗಿದೆ. ಸತತವಾಗಿ ಬೀಳುತ್ತಿರುವ ಮಳೆ, ಹಲವು ಗ್ರಾಮಗಳು ಇನ್ನು ಜಲಾವೃತವಾಗಿದ್ದು, ಜಿಲ್ಲೆಯ ಸುವರ್ಣವತಿ ಹಾಗೂ ಚಿಕ್ಕಹೊಳೆ ಜಲಾಶಯಗಳು ಸಂಪೂರ್ಣ ಭರ್ತಿಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹದ ನೀರಿನಿಂದ ದಿಗ್ಬಂಧನವಾಗಿದೆ.

ಇನ್ನು, ಸಂಪರ್ಕ ಕಲ್ಪಿಸು ಸೇತುವೆಗಳು ಕೂಡ ಸಂಪೂರ್ಣ ಮುಳುಗಡೆಯಾಗಿದ್ದು, ಬೆಳ್ಳಂಬೆಳಗ್ಗೆ ಅಧಿಕಾರಿಗಳು ಗ್ರಾಮಗಳ ಭೇಟಿ ನೀಡಿ ಪರೀಶಿಲನೆ ನಡೆಸುತ್ತಿದ್ದಾರೆ. ಯಳಂದೂರು ತಾಲ್ಲೂಕಿನ ಅಧಿಕಾರಿಗಳು ಮನೆಮನೆಗೆ ತೆರಳಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದು, ಡಿಸಿ ಆದೇಶದಂತೆ ಸುರಕ್ಷತೆ ಕ್ರಮಕ್ಕೆ ಮುಂದಾಗಿರುವ ಅಧಿಕಾರಿಗಳು. ಮನೆಯಲ್ಲಿಟ್ಟಿದ್ದ ಧವಸ ದಾನ್ಯಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಕುಡಿವ ನೀರು ಮತ್ತು ಆಹಾರಕ್ಕಾಗಿ ಜನರು ಪರದಾಟ ನಡೆಸುತ್ತಿದ್ದಾರೆ.

ಇನ್ನು, ಜಿಲ್ಲೆಯ ಜ್ಯೋತಿಗೌಡನ ಪುರ, ಬಸಪ್ಪನ ಪಾಳ್ಯ, ಹೆಬ್ಬಸೂರ, ಅಗರ ಮಾಂಬಳ್ಳಿ, ಮದ್ದೂರು , ಕಂದಹಳ್ಳಿ , ಬೂದಿತಿಟ್ಟು, ಗುಂಬಳ್ಳಿ, ಯರಿಯೂರು ,ಗ್ರಾಮಗಳು ಜಲಾವೃತವಾಗಿದ್ದು, ಹಲವು ಗ್ರಾಮಗಳಲ್ಲಿ ಕೊಡಿಬಿದ್ದ ಕೆರೆಗಳು, ಗ್ರಾಮಕ್ಕೆ ನೀರು ನುಗ್ಗಿ ಜನರು ಆತಂಕಗೊಳಗಾಗಿದ್ದಾರೆ.

RELATED ARTICLES

Related Articles

TRENDING ARTICLES