Wednesday, January 22, 2025

ಕೋಟ್ಯಂತರ ರೂಪಾಯಿ ಮೊತ್ತಕ್ಕೆ ‘ಗೌಳಿ’ ಹಿಂದಿ ರೈಟ್ಸ್..!

ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿಯ ಬಹುನಿರೀಕ್ಷಿತ ಗೌಳಿ ಚಿತ್ರ ಟೀಸರ್ ಹಾಗೂ ಸಾಂಗ್​ನಿಂದ ಸದ್ದು ಮಾಡಿತ್ತು. ಇದೀಗ ಹಿಂದಿ ಡಬ್ಬಿಂಗ್ ರೈಟ್ಸ್ ದಾಖಲೆ ಮೊತ್ತಕ್ಕೆ ಸೋಲ್ಡ್ ಔಟ್ ಆಗಿದ್ದು, ಪ್ಯಾನ್ ಇಂಡಿಯಾ ಟಾಕ್ ಕ್ರಿಯೇಟ್ ಮಾಡಿದೆ. ಬೀಸ್ಟ್ ಆಡಿಯೋ ಖರೀದಿಸಿದ್ದ ಕಂಪೆನಿಯಿಂದ ಇದ್ರ ಆಡಿಯೋಗೆ ಡಿಮ್ಯಾಂಡ್ ಹೆಚ್ಚಿದೆ. ಇಷ್ಟಕ್ಕೂ ಚಿತ್ರದ ಲೇಟೆಸ್ಟ್ ಅಪ್ಡೇಟ್ಸ್ ಏನು ಅಂತೀರಾ..? ಈ ಸ್ಪೆಷಲ್ ಸ್ಟೋರಿ ಓದಿ.

  • ಕಿಚ್ಚನಿಂದ ಲಾಂಚ್ ಆಗಲಿದೆ ತಂದೆ- ಮಗಳ ಭಾವುಕ ಗೀತೆ
  • ಬೀಸ್ಟ್ ಆಡಿಯೋ ಖರೀದಿಸಿದ್ದ ಕಂಪೆನಿಯಿಂದ ಡಿಮ್ಯಾಂಡ್
  • ದಸರಾಗೆ ಭೀಮ ನಿರ್ಮಾಪಕ ಜಗ್ಗಿ ಡಿಸ್ಟ್ರಿಬ್ಯೂಷನ್​ನಲ್ಲಿ ಗೌಳಿ

ಯೆಸ್.. ಗೌಳಿ ಸಿನಿಮಾ ಹತ್ತು ಹಲವು ವಿಶೇಷತೆಗಳಿಂದ ದಿನದಿಂದ ದಿನಕ್ಕೆ ಸದ್ದು ಮಾಡೋದ್ರ ಜೊತೆಗೆ ನೋಡುಗರ ನಾಡಿಮಿಡಿತ ಹೆಚ್ಚಿಸುತ್ತಿದೆ. ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ನಟನೆಯ ಈ ಸಿನಿಮಾಗೆ ದುನಿಯಾ ಸೂರಿ ಶಿಷ್ಯ ಸೂರ ಅವ್ರ ನಿರ್ದೇಶನವಿದ್ದು, ರಘು ಸಿಂಗಂ ನಿರ್ಮಾಣವಿದೆ. ಈಗಾಗ್ಲೇ ಟೀಸರ್ ಹಾಗೂ ಮಾಸ್ ಸಾಂಗ್​ನಿಂದ ಧೂಳೆಬ್ಬಿಸ್ತಿರೋ ಈ ಚಿತ್ರ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ಬ್ಯುಸಿ ಆಗಿದೆ.

ದಸರಾಗೆ ತೆರೆಗೆ ಬರೋ ಯೋಜನೆಯಲ್ಲಿರೋ ಈ ಚಿತ್ರ, ಪರಭಾಷೆಗಳಲ್ಲೂ ಕಮಾಲ್ ಮಾಡುತ್ತಿದೆ. ಬಾಲಿವುಡ್​ನ ಪ್ರತಿಷ್ಠಿತ ಬ್ಯಾನರ್​​ವೊಂದು ಬರೋಬ್ಬರಿ ಒಂದು ಕೋಟಿ 24 ಲಕ್ಷ ಬೃಹತ್ ಮೊತ್ತಕ್ಕೆ ಹಿಂದಿ ಡಬ್ಬಿಂಗ್ ರೈಟ್ಸ್​ನ ಖರೀದಿ ಮಾಡಿದೆ. ಇದು ಲೇಟೆಸ್ಟ್ ನ್ಯೂಸ್ ಹಾಗೂ ಕನ್ನಡದ ಮಟ್ಟಿಗೆ ಗ್ರೇಟ್ ಖಬರ್ ಕೂಡ ಹೌದು.

ಸದ್ಯದಲ್ಲೇ ಕಿಚ್ಚ ಸುದೀಪ್​ರಿಂದ ತಂದೆ- ಮಗಳ ಬಾಂಧವ್ಯದ ಕುರಿತ ಎಮೋಷನಲ್ ಸಾಂಗ್ ಲಾಂಚ್ ಆಗಲಿದ್ದು, ನಾಗೇಂದ್ರ ಪ್ರಸಾದ್ ಸಾಹಿತ್ಯ, ವಿಜಯ್ ಪ್ರಕಾಶ್ ಗಾಯನದಲ್ಲಿ ತುಂಬಾ ಸೊಗಸಾಗಿ ಮೂಡಿಬಂದಿದೆಯಂತೆ. ಇನ್ನು ರಾಜನ್ ಅವ್ರ ಕೈಚಳಕದಲ್ಲಿ ಎಫೆಕ್ಟ್ಸ್ ವರ್ಕ್​ ನಡೆಯುತ್ತಿದ್ದು, ಚೆನ್ನೈನಲ್ಲಿ ಆರ್​ಆರ್ ಕಾರ್ಯಗಳು ಗರಿಗೆದರಿವೆ.

ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲಿ ವಿಜಯ್​ರ ಬೀಸ್ಟ್ ಆಡಿಯೋನ ಖರೀದಿಸಿದ್ದಂತಹ ಕಂಪೆನಿ ಗೌಳಿ ಚಿತ್ರದ ಆಡಿಯೋ ಕೊಳ್ಳಲು ಮುಂದಾಗಿರೋದು ಖುಷಿಯ ವಿಚಾರ. ಈಗಾಗ್ಲೇ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಮೆಲ್ಬಾರ್ನ್​, ಪರ್ಥ್​ನಲ್ಲಿ ಮೂವತ್ತಕ್ಕೂ ಅಧಿಕ ಸೆಂಟರ್​ಗಳಲ್ಲಿ ಗೌಳಿ ಓವರ್​ಸೀಸ್ ಪ್ರದರ್ಶನಕ್ಕೆ ಮಾಸ್ಟರ್​ಪ್ಲಾನ್ ಸಿದ್ಧವಾಗಿದೆ.

ಭೀಮ ಚಿತ್ರದ ನಿರ್ಮಾಪಕ ಜಗದೀಶ್ ಅವ್ರು ಗೌಳಿ ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಪಡೆದಿದ್ದು, ಗೌಳಿಯನ್ನ ನಾಡಹಬ್ಬ ದಸರಾಗೆ ದೊಡ್ಡ ಮಟ್ಟದಲ್ಲಿ ತೆರೆಗೆ ತರುತ್ತಿದ್ದಾರೆ. ಇದು ಮಹಾರಾಷ್ಟ್ರದಿಂದ ಶಿರಸಿ ಬಳಿ ಬಂದು ನೆಲೆಸಿದ ಗೌಳಿ ಜನಾಂಗದ ವ್ಯಕ್ತಿಯೊಬ್ಬನ ಕುರಿತ ನೈಜ ಕಥಾನಕ ಆಗಿದ್ದು, ವ್ಯವಸ್ಥೆಯಿಂದ ಶೋಷಿತನಾಗಿ ಆತ ಆ ವ್ಯವಸ್ಥೆಯ ವಿರುದ್ಧವೇ ತಿರುಗಿ ಬೀಳೋ ಅಂತಹ ಕ್ರಾಂತಿಕಾರಿಯ ಕಿಡಿ ಆಗಲಿದೆ. ಕಿಟ್ಟಪ್ಪ ಜೊತೆ ನಟಿ ಪಾವನಾ, ರಂಗಾಯಣ ರಘು, ಶರತ್ ಲೋಹಿತಾಶ್ವ, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ ಮುಖ್ಯಭೂಮಿಕೆಯಲ್ಲಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES