Monday, December 23, 2024

ಚಾಮರಾಜಪೇಟೆ ಮೈದಾನದಲ್ಲಿ ಗಣೇಶ​ ಪ್ರತಿಷ್ಠಾನೆಗಾಗಿ ಕಾನೂನು ಹೋರಾಟ ಮಾಡ್ತೇವೆ

ಬೆಂಗಳೂರು: ಚಾಮರಾಜಪೇಟೆ ಮೈದಾನದ ಕುರಿತು ಸುಪ್ರೀಂ ಕೋರ್ಟ್​ ನೀಡಿದ ಆದೇಶವನ್ನು ಕಾಪಾಡುತ್ತೇವೆ. ಈ ಆದೇಶ ಸ್ವಾಗತ ಮಾಡುತ್ತೇವೆ ಎಂದು ಚಾಮರಾಜಪೇಟೆ ನಾಗರೀಕರ ಒಕ್ಕೂಟ ಅಧ್ಯಕ್ಷ ರಾಮೇಗೌಡ ಹೇಳಿದ್ದಾರೆ.

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಈ ಮೊದಲಿನಂತ ಯಥಾಸ್ಥಿತಿ ಕಾಯ್ದುಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ಇಂದು ನೀಡಿತ್ತು. ಇವತ್ತಿನ ತನಕ ಯಾವ ಮಾದರಿಯಲ್ಲಿದೆಯೋ ಯಥಾಸ್ಥಿತಿ ಕಾಯ್ದುಕೊಳ್ಳಿ, ಈದ್ಗಾ ಬಿಟ್ಟು ಬೇರೆಡೆ ಗಣೇಶೋತ್ಸವ ಆಚರಿಸಲು ಸೂಚಿಸಿತ್ತು.

ಈ ಸಂಬಂಧ ಮಾತನಾಡಿದ ರಾಮೇಗೌಡ, ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾನೆಗಾಗಿ ಸಂಬಂಧ ಮೂರು ತಿಂಗಳಿಂದ ಹೋರಾಟ ಮಾಡ್ತಾ ಇದ್ದೇವೆ. ಕಳೆದ ಒಂದೂವರೆ ಗಂಟೆಯಿಂದ ವಾದ ವಿವಾದ ನಡೆಸಿ ಯಥಾಸ್ಥಿತಿ ಕಾಪಾಡುವಂತೆ ಕೋರ್ಟ್ ಹೇಳಿದೆ. ಒಂದು ಧರ್ಮ ಜಾಗದಲ್ಲಿ ಮತ್ತೊಂದು ಧರ್ಮದ ಆಚರಣೆ ಮಾಡಬಾರದು ಅಂತ ಕೋರ್ಟ್ ಹೇಳಿದೆ. ಸುಪ್ರೀಂ ಆದೇಶ ಎಲ್ಲಾರು ಪಾಲನೆ ಮಾಡಬೇಕು, ನಾವು ಪಾಲನೆ ಮಾಡುತ್ತೇವೆ ಎಂದರು.

ಸುಪ್ರೀಂ ಕೋರ್ಟ್ಗೆ ನಾವು ತಲೆಬಾಗುತ್ತೇವೆ. ಹೀಗಾಗಿ ನಾವು ಈ ಬಾರಿಯ ಚಾಮರಾಜಪೇಟೆಯ ಮೈದಾನದಲ್ಲಿ ಗಣೇಶ ಪ್ರತಿಷ್ಠಾನ ಮಾಡಲ್ಲ. ಮೈದಾನಲ್ಲಿ ಗಣೇಶ ಕೂರಿಸೋ ಸಂಬಂಧ ಕಾನೂನು ಹೋರಾಟ ಮಾಡುತ್ತೇವೆ. ಕೋರ್ಟ್ ತೀರ್ಪು ನಮಗೆ ನಿರಾಸೆ ತಂದಿದೆ. ಮೈದಾನದಲ್ಲೇ ಗಣೇಶ ಕೂರಿಸೋಕೆ ಕಾನೂನು ಹೋರಾಟ ಮಾಡುತ್ತೇವೆ. ಮೈದಾನ ಹೊರತುಪಡಿಸಿ ಎಲ್ಲಿಯೂ ಗಣೇಶ ಕೂರಿಸಲ್ಲ, ಮೈದಾನಲ್ಲೇ ಗಣೇಶ ಕೂರಿಸೋಕೆ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES