ಆನೇಕಲ್ : ಮೂರು ತಿಂಗಳಲ್ಲಿ ಹುಲಿ ಸಿಂಹ ಆನೆಗಳ ಸಾವಿನ ಸರಣಿ ಜಾಸ್ತಿಯಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿ ಸಾವು ಸಂಭವಿಸುತ್ತಿದೆ.
18 ಹುಲಿ, 17 ಸಿಂಹ, 26 ಆನೆಗಳಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನ. ಈಗಿರುವ ಅರ್ಧದಷ್ಟು ಹುಲಿ ಹಾಗೂ ಸಿಂಹಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳ ಸರಣಿ ಸಾವು ಸಂಭವಿಸುತ್ತಿದ್ದರು ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ.
ಇನ್ನು ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಾಣಿಗಳ ಸರಣಿ ಸಾವು ಸಂಭವಿಸಿದ್ದು, ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳು ಸಾವನ್ನಪ್ಪುತ್ತಿದ್ದರು ಸುಮ್ಮನಿರುವ ವೈದ್ಯಾದಿಕಾರಿಗಳು. ಆಡಳಿತ ಮಂಡಳಿಯ ಪ್ರತಿಯೊಂದು ವಿಚಾರದಲ್ಲೂ ಕೈಯಾಡಿಸುತ್ತಿರುವ ಕೆಲವು ಸಿಬ್ಬಂದಿ. ಮೂರು ತಿಂಗಳ ಹಿಂದೆ ಹೊಸದಾಗಿ ಬಂದಿರುವ ಕಾರ್ಯನಿರ್ವಹಣಾಧಿಕಾರಿ. ನೂತನ ಇ.ಡಿ ಸುನಿಲ್ ಪನ್ವಾರ್. ಒಂದೇ ಹುದ್ದೆ ಇದ್ದರೂ ಕೂಡ ಸರಿಯಾದ ರೀತಿಯಲ್ಲಿ ನಿರ್ವಹಿಸಲು ಕಷ್ಟ ಸಾಧ್ಯವಾಗಿದೆ.
ಅದಲ್ಲದೇ, ಮೂರು ಕಡೆ ಕಾರ್ಯ ನಿರ್ವಹಿಸುತ್ತಿರುವ ನೂತನ ಇಡಿ. ಬನ್ನೇರುಘಟ್ಟ ಜೈವಿಕ ಉದ್ಯಾನವನ, ಈ ಗವರ್ನೆನ್ಸ್ ಬೆಂಗಳೂರು, ಸ್ಮಾರ್ಟ್ ಗವರ್ನೆನ್ಸಿ ಯಶವಂತಪುರ. ಮೂರು ಕಡೆಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಒಂದೇ ಕಡೆ ಗಮನ ಹರಿಸಲಾಗುತ್ತಿಲ್ಲ. ಇದರಿಂದಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಕೆಳಹಂತದ ಅಧಿಕಾರಿಗಳು ಆಡಿದ್ದೆ ಆಟ. ಪ್ರಾಣಿಗಳ ಆಹಾರ ಪದ್ಧತಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ.