Monday, December 23, 2024

ಮುರುಘಾ ಶ್ರೀಗಳ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು

ಚಿತ್ರದುರ್ಗ: ಮುರುಘಾ ಮಠದ ಶ್ರೀಗಳ ವಿರುದ್ಧ ಸಂತ್ರಸ್ತ ಬಾಲಕಿಯರ ಪೈಕಿ ಓರ್ವ ಬಾಲಕಿ ಪರಿಶಿಷ್ಟ ಜಾತಿಗೆ ಸೇರಿರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ಎಸ್​.ಸಿ, ಎಸ್​.ಟಿ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ಕೇಸ್‌ ದಾಖಲಾಗಿದೆ.

ಸ್ವಾಮೀಜಿ ವಿರುದ್ಧ ಅಟ್ರಾಸಿಟಿ, ಪ್ರೋಕ್ಸೋ ಕಾಯ್ದೆ ಎರಡು ಗಂಭೀರ ಕೇಸ್​ಗಳು ದಾಖಲಾಗಿದ್ರೂ ಸಹ ಸ್ವಾಮೀಜಿ ಬಂಧನವಾಗಿಲ್ಲ ಎಂದು ದಲಿತ ಪರ ಸಂಘಟನೆಗಳು ಹಾಗೂ ಒಡನಾಡಿ ಸಂಸ್ಥೆ ಸೇರಿದಂತೆ ಜನರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ಕೋರ್ಟ್‌ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಮುರುಘಾ ಶ್ರೀಗಳನ್ನ ಕೂಡಲೇ ಬಂಧಿಸುವಂತೆ ಆಗ್ರಹಿಸಿದರು. ಈ ವೇಳೆ ರಾಜ್ಯ ಸರ್ಕಾರ ಮುರುಘಾ ಶ್ರೀಗಳ ಪರವಾಗಿ ಕೆಲಸ ಮಾಡುತ್ತಿದೆ. ನೀವೇ ಎಲ್ಲವು ಡಿಸೈಡ್ ಮಾಡುವುದಾದರೆ ನ್ಯಾಯಾಲಯ ಇರುವುದು ಏಕೆ ಎಂದು ಗೃಹ ಸಚಿವರ ವಿರುದ್ಧ ಹಿರಿಯ ವಕೀಲ ಗುಮ್ಮನೂರು ಮಲ್ಲಿಕಾರ್ಜುನ್ ಗುಡುಗಿದ್ದಾರೆ.

RELATED ARTICLES

Related Articles

TRENDING ARTICLES