Saturday, January 11, 2025

ಪಾಕಿಸ್ತಾನ ಆಟಗಾರನಿಗೆ ತನ್ನ ಜೆರ್ಸಿಯನ್ನ ಉಡುಗೊರೆಯಾಗಿ ನೀಡಿದ ವಿರಾಟ್ ಕೊಹ್ಲಿ

ದುಬೈ: ಪಾಕಿಸ್ತಾನದ ಹಾಗೂ ಭಾರತ ನಡುವಿನ ಪಂದ್ಯ ನಡೆದ ನಂತರ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್‌ಗೆ ವಿರಾಟ್ ಕೊಹ್ಲಿ ಸಹಿ ಮಾಡಿದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.

ದುಬೈನಲ್ಲಿ ನಿನ್ನೆ ನಡೆದ ಸಾಂಪ್ರದಾಯಿಕ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಭಾರತ 5 ವಿಕೆಟ್​ಗಳಿಂದ ಜಯಗಳಿಸಿತ್ತು. ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ 35 ರನ್​ ಗಳಿಸಿದ್ದರು. ಹಾರ್ದಿಕ್​ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಅವರ ನಡುವಿನ ಜತೆಯಾಟ ಭಾರತ ಗೆಲ್ಲಲು ಪ್ರಮುಖವಾಯಿತು.

ಈ ಪಂದ್ಯದಲ್ಲಿ 19.5 ಓವರ್​ಗಳಲ್ಲಿ ಪಾಕಿಸ್ತಾನ ತಂಡ ತನ್ನ ಎಲ್ಲಾ ವಿಕೆಟ್​ ಕಳೆದುಕೊಂಡು 147 ರನ್​ ಕಲೆಹಾಕಿತ್ತು. 147 ರನ್​ ಗುರಿ ಬೆನ್ನತ್ತಿದ ಭಾರತ ತಂಡ 19.4 ಓವರ್​ಗಳಲ್ಲಿ 148 ರನ್​ ಗಳಿಸುವ ಮೂಲಕ ಭಾರತ ಸುಲಭ ಜಯಗಳಿಸಿತ್ತು.

ಭಾರತದ ಪರ ರೋಹಿತ್​ ಶರ್ಮಾ 12, ವಿರಾಟ್​ ಕೊಹ್ಲಿ 35, ರವೀಂದ್ರ ಜಡೆಜಾ 35, ಸುರ್ಯಕುಮಾರ್​ ಯಾದವ್​​ 18, ಹಾರ್ದಿಕ ಪಾಂಡ್ಯ 33  ರನ್ ಕಲೆಹಾಕಿದ್ದರೆ, ಭುವನೇಶ್ವರ್ ಕುಮಾರ್ 4, ಹಾರ್ದಿಕ್ ಪಾಂಡ್ಯ 3, ಅರ್ಶದೀಪ್ ಸಿಂಗ್ 2 ವಿಕೆಟ್ ಪಡೆದು ಮಿಂಚಿದ್ದರು.

RELATED ARTICLES

Related Articles

TRENDING ARTICLES