Wednesday, January 22, 2025

ಚಿರತೆ ಸಿಗುತ್ತದೆ ಎಂದರೆ‌‌ ನಾಳೆಯೇ ರಾಜಿನಾಮೆ ನೀಡುತ್ತೇನೆ : ಉಮೇಶ ಕತ್ತಿ

ವಿಜಯಪುರ : ಸಂತ್ರಸ್ಥರೆನ್ನಲಾದ ಬಾಲಕಿಯರು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಅದಕ್ಕಿಂತ ಹೆಚ್ಚಿನ ಮಾಹಿತಿ ನನ್ನಲ್ಲಿ ಇಲ್ಲ ಎಂದು ವಿಜಯಪುರ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತ್ರಸ್ಥರೆನ್ನಲಾದ ಬಾಲಕಿಯರು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಅದಕ್ಕಿಂತ ಹೆಚ್ಚಿನ ಮಾಹಿತಿ ನನ್ನಲ್ಲಿ ಇಲ್ಲ. ಮರುಘಾ ಶ್ರೀಗಳ ವಿರುದ್ದ ಎಫ್ಐಆರ್ ಆಗಲ್ಲ. ಎಫ್ಐಆರ್ ಆದರೆ ನೋಡೋಣ. ಇದು ಮಠದ ಒಳ ಜಗಳ ಎಂದು ಹೇಳಿದರು.

ಇನ್ನು, ಮಾಜಿ ಶಾಸಕ ಬಸವರಾಜ ಹಾಗೂ ಸ್ವಾಮೀಜಿಗಳ‌ ಜಗಳ. ಇದೀಗ ಅದು ಎಲ್ಲೆಲ್ಲೋ ಹೋಗಿದೆ. ನ್ಯಾಯಾಲಯ ಏನು‌ ತೀರ್ಮಾನ ತೆಗೆದುಕೊಳ್ಳುತ್ತದೆ ನೋಡೋಣ, ಸ್ವಾಮೀಜಿಗಳ ಮೇಲೆ ಆರೋಪ ಮಾಡಿದ್ದು ತಪ್ಪು. ರಾಜ್ಯದಲ್ಲಿ ಒಂದಿಬ್ಬರು ಸ್ವಾಮೀಜಿಗಳು ಉಳಿದುಕೊಂಡಿದ್ದಾರೆ. ಸಮಾಜ ತಿದ್ದಬೇಕೆಂಬ ಅವರ ಪ್ರಯತ್ನಗಳಿವೆ. ಅಂಥ ಪ್ರಯತ್ನಗಳಿಗೆ‌ ಇಂಥ ಸಲ್ಲದ ಆರೋಪ ಮಾಡಿ ತೊಂದರೆಗೆ ಸಿಲುಕಿದಬಾರದು. ಸಮಾಜವನ್ನು ಬೇರೆ ದಿಕ್ಕಿನಲ್ಲಿ ಒಯ್ಯಬಾರದು ಎಂದರು.

ಅದಲ್ಲದೇ, ಬೆಳಗಾವಿಯಲ್ಲಿ ಚಿರತೆ ಕಾಟ ಇನ್ನು ಸಿಗದ ಚಿರತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗುತ್ತದೆ ಎಂದರೆ‌‌ ನಾಳೆಯೇ ರಾಜಿನಾಮೆ ನೀಡುತ್ತೇನೆ. ನಾಳೆ ಬೆಳಿಗ್ಗೆ ನಾನು‌ ರಾಜೀನಾಮೆ ಕೊಡಲು ಸಿದ್ದ. ಚಿರತೆ ಸಿಕ್ಕರೆ ನಂದೇನು ತಕರಾರಿಲ್ಲಾ. ಚಿರತೆ ಹಿಡಿಯಲು‌ ಉತ್ತರ ಕರ್ನಾಟಕ ‌ಭಾಗದ ಸ್ಟಾಫ್ ಹಾಕಿದ್ದೇವೆ. ಆನೆಗಳನ್ನು‌ ತಂದಿದ್ದೇವೆ. ಇಲ್ಲಿಯವರೆಗೆ ಚಿರತೆ ಯಾರಿಗೂ ಏನೂ ಮಾಡಿಲ್ಲಾ, ಚಿರತೆ ಇನ್ನೂ ಸಿಕ್ಕಿಲ್ಲಾ. ಎರಡು ದಿನಗಳಿಂದ ಚಿರತೆ ಕಂಡು ಬಂದಿಲ್ಲಾ. ಅದು ಬೆಟ್ಟಕ್ಕೆ ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಗೋಲ್ಫ್ ಕೋರ್ಟ್ ಸುತ್ತಮುತ್ತ ತಿರುಗಾಡುತ್ತಿದೆ ಎನ್ನಲಾಗಿದೆ. ಆದರೆ ಮೂರು ದಿನಗಳಿಂದ ಚಿರತೆ ಕಂಡು ಬಂದಿಲ್ಲ ಎಂದು ವಿಜಯಪುರ ನಗರದಲ್ಲಿ ಸಚಿವ ಉಮೇಶ ಕತ್ತಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES