Sunday, December 22, 2024

ಜಗ್ಗೇಶ್ ಅವ್ರ ‘ಎದ್ದೇಳು ಮಂಜುನಾಥಾ’ ಟ್ವೀಟ್​ಗೆ ಸಿಎಂ ಎದ್ದೇಳುತ್ತಾರಾ.?

ಬೆಂಗಳೂರು: ಮಾಯಸಂದ್ರದ ನನ್ನ ಮನೆ ಸಂಪೂರ್ಣ ಜಲಾವೃತವಾಗಿದೆ. ನೀರು ಹರಿಯುವ ಜಾಗವನ್ನ ಕೆಲವರು ಅಕ್ರಮವಾಗಿ ನಿರ್ಮಾಣ ಮಾಡಿ ನನ್ನ ಮನೆಗೆ ನೀರು ನುಗ್ಗುತ್ತಿದೆ ಎಂದು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್​ ಟ್ವೀಟ್ ಮಾಡಿ ಕಿಡಿಕಾರಿದ್ದರು.

ಇದಕ್ಕೆ ಟ್ವೀಟ್​ ಮಾಡಿದ ರಾಜ್ಯ ಕಾಂಗ್ರೆಸ್​, ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ‘ಎದ್ದೇಳು ಮಂಜುನಾಥಾ’ ಕೂಗಿಗೆ ಸಿಎಂ ಬಸವರಾಜ ಬೊಮ್ಮಾಯಿ ಎದ್ದೇಳುತ್ತಾರಾ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

ರಾಜ್ಯ ಬಿಜೆಪಿ ಸರ್ಕಾರ ರಾಜ್ಯಸಭಾ ಸಂಸದರು ಪ್ರವಾಹದಿಂದ ತಮಗೆ ಆಗುತ್ತಿರುವ ತೊಂದರೆ ಬಗೆಹರಿಸಿ ಎಂದು ಮನವಿ ಸಲ್ಲಿಸುತ್ತಾರೆ. ಈ 40% ಸರ್ಕಾರದ ಪ್ರವಾಹದ ನಿರ್ವಹಣೆ ಹೇಗಿದೆ ಎಂಬುದು ಅರಿವಾಗುತ್ತದೆ. ಸಂಸದರಿಗೆ ಹೀಗಾದರೆ ಇನ್ನು ಜನಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದೆ. 

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಗ್ರಾಮದಲ್ಲಿರುವ ಜಗ್ಗೇಶ್ ಮನೆಗೆ ನೀರು ನುಗ್ಗಿದೆ. ಮಾಯಸಂದ್ರ ಗ್ರಾಮದ ಜಗ್ಗೇಶ್ ತೋಟದ ಮನೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಜಲಾವೃತಗೊಂಡಿದೆ.

RELATED ARTICLES

Related Articles

TRENDING ARTICLES