ಬೆಂಗಳೂರು : ಪೊಲೀಸ್ ಇಲಾಖೆಯನ್ನೇ ಮುಜುಗರಕ್ಕೆ ಈಡು ಮಾಡಿದ್ದ ಪಿಎಸ್ಐ ನೇಮಕಾತಿ ಅಕ್ರಮದ ಮತ್ತೊಬ್ಬ ಪ್ರಮುಖ ಆರೋಪಿಯ ಬಂಧನವಾಗಿದೆ. ಬರೋಬ್ಬರಿ ನಾಲ್ಕು ತಿಂಗಳ ಬಳಿಕ ಪಿಎಸ್ಐ ಮಹಿಳಾ ಟಾಪರ್ ರಚನಾ ಹನುಮಂತ ಸಿಐಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ. ಹೌದು. ಪಿಎಸ್ಐ ನೇಮಕಾತಿಯಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ನಡೆದಿರೋದು ಬೆಳಕಿಗೆ ಬಂದ ಬಳಿಕ ಸರ್ಕಾರ ನೇಮಕಾತಿ ಆದೇಶವನ್ನು ರದ್ದುಗೊಳಿಸಿತ್ತು. ಆ ವೇಳೆ ಪ್ರಮಾಣಿಕ ಅಭ್ಯರ್ಥಿಗಳಿಗೆ ಇದರಿಂದ ಅನ್ಯಾಯವಾಗಿದೆ ಅಂತ ರಚನಾ ಮುಂಚೂಣಿಯಲ್ಲಿ ನಿಂತು ಪ್ರತಿಭಟನೆ ನಡೆಸಿದ್ಲು. ಪ್ರತಿಯೊಬ್ಬರಿಗೂ ಸಹ ನ್ಯಾಯ ಸಿಗಬೇಕು ಅಂತ ಹೋರಾಡಿದ್ಲು.
ಆದ್ರೆ, ಸಿಐಡಿ ತನಿಖೆ ವೇಳೆ ರಚನಾ ಸಹ OMR ಶೀಟ್ ತಿದ್ದಿರುವ ಬಗ್ಗೆ ಸಾಕ್ಷ್ಯ ಲಭ್ಯವಾಗಿದ್ದು, ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಎಫ್ಐಆರ್ ದಾಖಲಾದ ಬಳಿಕ ರಚನಾ ನಾಪತ್ತೆಯಾಗಿದ್ದು, ಸರಿ ಸುಮಾರು ನಾಲ್ಕು ತಿಂಗಳಿಂದ ತಲೆಮರೆಸಿಕೊಂಡಿದ್ದ ರಚನಾ ಶನಿವಾರ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಹೀರೋಳ್ಳಿ ಬಳಿ ಸಿಐಡಿ ಇನ್ಸ್‌ಪೆಕ್ಟರ್ ಮಂಜುನಾಥ್ & ಟೀಂಗೆ ಸಿಕ್ಕಿಬಿದ್ದಿದ್ದಾಳೆ. ಭಾನುವಾರ ಬೆಂಗಳೂರಿನ ಸಿಐಡಿ ಕಚೇರಿಗೆ ಕರೆತಂದು ಸಿಐಡಿ ಅಧಿಕಾರಿಗಳು ವಿಚಾರಣೆಯನ್ನು ಮುಂದುವರಿಸಿದ್ದಾರೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ರಚನಾ ಪಿಎಸ್‌ಐ ಪೋಸ್ಟ್‌ಗಾಗಿ 50 ಲಕ್ಷ ರೂ.ನೀಡಿದ್ದಳಂತೆ. ನಂತರ ಪಿಎಸ್‌ಐ ಸ್ಕ್ಯಾಮ್ ಬೆಳಕಿಗೆ ಬರ್ತಿದ್ದಂತೆ ಪರಾರಿಯಾಗಿದ್ದಳು, ರಚನಾ ಬೀದರ್, ಕಲಬುರಗಿ, ಮಹಾರಾಷ್ಟ್ರ ಭಾಗದಲ್ಲಿ ಬಸ್‌ನಲ್ಲಿ ಓಡಾಡಿಕೊಂಡು ನಾಪತ್ತೆಯಾಗಿದ್ದಳು ಎನ್ನಲಾಗಿದೆ.
ಇನ್ನು ಮೊದಮೊದಲು ಓಡಾಡೋ ಸಮಯದಲ್ಲಿ ರಚನಾ ಮೊಬೈಲ್ ಕೂಡ ಬಳಸ್ತಿರಲಿಲ್ಲ.
ಕಳೆದ ಒಂದು ವಾರದಿಂದ ಸಿಮ್ ಹಾಗೂ ಮೊಬೈಲ್ ಬಳಸಿ ಮನೆಯವರ ಜೊತೆ ಮಾತನಾಡಿದ್ದಾಗ ಬಲೆಗೆ ಬಿದ್ದಿದ್ದಾಳೆ.. ಇದೇ ಸೋರ್ಸ್ ಹಿಡಿದು ರಚನಾಳನ್ನು ಸಿಐಡಿ ಖೆಡ್ಡಾಕ್ಕೆ ಕೆಡವಿದ್ದಾರೆ.ರಚನಾ ಐದು ಲಕ್ಷ ರೂಪಾಯಿ ಹಿಡಿದು ಪರಾರಿಯಾಗಿ ಅದರಲ್ಲಿಯೇ ಜೀವನ ಮಾಡಿದ್ದಾಳೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಆರೋಪಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ಯೋ ಹೊರತು ಕಮ್ಮಿಯಾಗುವ ಯಾವ ಲಕ್ಷಣಗಳು ಮಾತ್ರ ಕಾಣಿಸುತ್ತಿಲ್ಲ.
ಅಶ್ವಥ್ ಎಸ್.ಎನ್.ಕ್ರೈಂ ಬ್ಯೂರೋ ಪವರ್ ಟಿವಿ