Monday, December 23, 2024

ಎಲ್ಲಾ ಪ್ರಾಜೆಕ್ಟ್​ಗೆ ಫುಲ್​ ಸ್ಟಾಪ್​ ಹಾಕಿ ‘ಲಾವ’ಗೆ ರೆಡಿಯಾದ ಕಿಚ್ಚ ಸುದೀಪ್.!

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಕಳೆದ ಕೆಲವು ವರ್ಷಗಳಿಂದ ಕಿಚ್ಚ ಸುದೀಪ್ ಅವರಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ನ್ಯಾಷನಲ್, ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ವರ್ಚಸ್ಸು ಇರುವ ಕಿಚ್ಚ ಸುದೀಪ್​ಗೆ ಕಳೆದ ಕೆಲವು ವರ್ಷಗಳಾದ್ರೂ ಹಿಟ್ ಸಿನಿಮಾ ಸಿಗದೆ ಇರುವುದು ನಿಜಕ್ಕೂ ಸ್ಟಾರ್​ ಗಿರಿಗೆ ಬಹುದೊಡ್ಡ ಹೊಡೆತ ಬೀಳಲಿದೆ. ಬಹುಶಃ 2017ರ ಹೆಬ್ಬುಲಿ ನಂತರ ಬೇರೆ ಯಾವ ಚಿತ್ರ ಕೂಡ ಬಾಕ್ಸ್ ಆಫೀಸ್ ಸದ್ದು ಮಾಡಲಿಲ್ಲ, ನೋಡುಗರಿಂದ ಶಿಳ್ಳೆ- ಚಪ್ಪಾಳೆ ಗಿಟ್ಟಿಸಲಿಲ್ಲ.

ಸುದೀಪ್​ ನಟನೆಯ ಅಂಬಿ ನಿಂಗ್ ವಯಸ್ಸಾಯ್ತೋ, ದಿ ವಿಲನ್, ಪೈಲ್ವಾನ್, ಸೈರಾ ನರಸಿಂಹ ರೆಡ್ಡಿ, ದಬಾಂಗ್-3, ಕೋಟಿಗೊಬ್ಬ-3 ಹೀಗೆ ಸಾಲು ಸಾಲು ಸಿನಿಮಾಗಳು ಸೋತಿದ್ದಲ್ಲದೆ, ಅವರ ಅಭಿಮಾನಿಗಳಿಗೆ ಅತೀವ ನಿರಾಸೆಗೊಳಿಸಿತ್ತು. ಇತ್ತೀಚೆಗೆ ತೆರೆಕಂಡ ವಿಕ್ರಾಂತ್ ರೋಣ, ಮೇಕಿಂಗ್ ಹಾಗೂ ಕಿಚ್ಚನ ಆ್ಯಕ್ಟಿಂಗ್​ ಖದರ್​ನಿಂದ ಸೌಂಡ್ ಮಾಡಿತಾದರೂ, ಕಥೆಯಲ್ಲಿ ಗಟ್ಟಿತನ ಇಲ್ಲದ ಕಾರಣ ಅಷ್ಟಾಗಿ ಸಿನಿ ಪ್ರೀಯರಿಗೆ ರುಚಿಸಲಿಲ್ಲ.

ಆದ್ರೆ, ಅದೇ ಅನೂಪ್ ಭಂಡಾರಿ ಜೊತೆ ಜನ ನಿರೀಕ್ಷಿಸುವ ಅಂತಹ ಸಿನಿಮಾ ಮಾಡಿ ತೋರಿಸ್ತೀನಿ ಅಂತ ಕಿಚ್ಚ ಬಹಿರಂಗವಾಗಿ ಹೇಳಿಕೊಂಡಿದ್ರು. ಅದಕ್ಕೆ ಪೂರಕವಾಗಿ ಬಿಲ್ಲ ರಂಗ ಬಾಷ ಹಾಗೂ ಅಶ್ವತ್ಥಾಮ ಅನ್ನೋ ಎರಡೆರಡು ಕಥೆಗಳನ್ನ ಸಿದ್ದಪಡಿಸಿಕೊಂಡು ಕಿಚ್ಚನ ಡೇಟ್ಸ್​ಗೆ ತುದಿಗಾಲಲ್ಲಿ ನಿಂತಿದ್ದ ವಿಕ್ರಾಂತ್ ರೋಣ ಕ್ಯಾಪ್ಟನ್ ಅನೂಪ್ ಭಂಡಾರಿಯ ಅವೆರಡೂ ಪ್ರಾಜೆಕ್ಟ್ಸ್​ನ ಪಕ್ಕಕ್ಕಿಟ್ಟು, ಶಿಷ್ಯ ನಂದಕಿಶೋರ್ ಜತೆ ನ್ಯೂ ವೆಂಚರ್​ಗೆ ಗ್ರೀನ್ ಸಿಗ್ನಲ್ ಕಿಚ್ಚ ಸುದೀಪ್​ ನೀಡಿದ್ದಾರೆ.

ಸಿನಿಮಾಗೆ ಈಗಾಗಲೇ ‘ಲಾವ’ ಎಂದು ಟೈಟಲ್ ಫೈನಲ್ ಆಗಿದ್ದು, ಲಾವಾರಸದಂತೆ ಕಿಚ್ಚ ಉಕ್ಕಿ ಹರಿಯೋ ಹೈ ವೋಲ್ಟೇಜ್ ಆ್ಯಕ್ಷನ್​ ಸಿನಿಮಾ ಮಾಡಲಿದ್ದಾರಂದು ಹೇಳಲಾಗಿದೆ. ಔಟ್ ಅಂಡ್ ಔಟ್ ಮಾಸ್ ಟೈಟಲ್ ಆಗಿರುವ ಲಾವ, ಕಥೆಯಿಂದಲೂ ಥ್ರಿಲ್ ಕೊಡಲಿದೆ. ಮೇಕಿಂಗ್​ನಲ್ಲಿ ನಿರ್ದೇಶಕ ನಂದಕಿಶೋರ್ ಒಂಥರಾ ಮಾಸ್ಟರ್. ಇನ್ನು ಕಿಚ್ಚನ ಅಭಿನಯ ಪ್ರೇಕ್ಷಕರನ್ನ ಈ ಸಿನಿಮಾ ಕಿಕ್ಕೇರಿಸಲಿದೆ ಎಂದು ಸಿನಿಮಾ ಪಂಡಿತರು ಹೇಳುತ್ತಿದ್ದಾರೆ.

ನಿರ್ದೇಶಕ ನಂದಕಿಶೋರ್ ನಟ ಕಿಚ್ಚ ಸುದೀಪ್ ಅವರ ಗರಡಿಯಿಂದಲೇ ಹೊರಬಂದಿರುವ ಪ್ರತಿಭೆ. ಈ ಹಿಂದೆ ರನ್ನ, ಮುಕುಂದ ಮುರಾರಿ ಅವಳಿ ಸಿನಿಮಾಗಳನ್ನ ಸುದೀಪ್ ಅವರಿಗೆ ಡೈರೆಕ್ಟ್ ಮಾಡಿ, ತನ್ನ ನಿರ್ದೇಶನಾ ಕೌಶಲ್ಯವನ್ನ ನಂದ ಕೀಶೋರ್ ಮೆರೆದಿದ್ದರು. ಹಾಗಾಗಿ ಇದು ಇವರ ಹ್ಯಾಟ್ರಿಕ್ ಕಾಂಬೋ ಆಗಲಿದ್ದು, ಬರೋಬ್ಬರಿ ಆರು ವರ್ಷದ ನಂತರ ಒಂದಾಗ್ತಿರೋ ನಂದ ಕಿಶೋರ್-ಕಿಚ್ಚ ಈ ಬಾರಿ ದೊಡ್ಡ ಮಟ್ಟಕ್ಕೆ ಮ್ಯಾಜಿಕ್ ಮಾಡಲಿದ್ದಾರೆ ಎನ್ನೋದು ಸದ್ಯದ ಮಾತುಕತೆ ಸದ್ಯದಲ್ಲೇ ಈ ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳಲಿದೆ ಎಂದು ಪವರ್​ ಟಿವಿಗೆ ಮಾಹಿತಿ ಲಭ್ಯವಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

 

RELATED ARTICLES

Related Articles

TRENDING ARTICLES