Sunday, December 22, 2024

ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಕೇಸರಿ ಪಡೆ ಮಾಸ್ಟರ್‌ ಪ್ಲ್ಯಾನ್!

ಬೆಂಗಳೂರು : ರಾಜ್ಯ ವಿಧಾನಸಭೆಗೆ ಇನ್ನು ಕೆಲವೇ ತಿಂಗಳುಗಳಲ್ಲಿ ಚುನಾವಣಾ ಅಖಾಡ ಸಿದ್ದವಾಗಲ್ಲಿದೆ. ಹೀಗಾಗಿ ಕಾಂಗ್ರೆಸ್‌ ನಾಯಕರು ಸಿದ್ದರಾಮೋತ್ಸವ ಮೂಲಕ ಚುನಾವಣೆಗೆ ರಣಕಹಳೆ‌ ಮೊಳಗಿಸಿದ್ದಾರೆ. ಇನ್ನು ಕಾಂಗ್ರೆಸ್‌ ನಾಯಕರ ಓಟಕ್ಕೆ ಬ್ರೇಕ್ ಹಾಕಲು ಬಿಜೆಪಿ ಸಹ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. 2023ರ ಚುನಾವಣೆಗೆ ಟಾರ್ಗೆಟ್‌ 50 ಫಾರ್ಮೂಲಾಗೆ ಸ್ಕೇಚ್ ರೆಡಿ ಮಾಡಿದ್ದು, ಈ ಟಾರ್ಗೆಟ್‌ನಲ್ಲಿ ಕಾಂಗ್ರೆಸ್‌ನಲ್ಲಿ ಅಲ್ಪ ಮತಗಳಿಂದ ಜಯಗಳಿಸಿರುವ ಹಾಗು ಬಿಜೆಪಿ ವಿರುದ್ಧ ತೊಡೆ ತಟ್ಟಿ ನಿಲ್ಲುವ ನಾಯಕರನ್ನೇ ಅವರ ಕ್ಷೇತ್ರಗಳಲ್ಲಿ ಹಣಿಯಲು ಟಾರ್ಗೆಟ್‌ 50 ಫಾರ್ಮೂಲಾಗೆ ಬಿಜೆಪಿ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ‌.

ಇನ್ನು ಆ ಕ್ಷೇತ್ರಗಳಲ್ಲಿ ಬಿಜೆಪಿ ಬಾವುಟ ಹಾರಿಸಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗು ಹಾಲಿ ಸಿಎಂ ಬಸವರಾಜ ಬೊಮ್ಮಾಯಿಗೆ ಹೈಕಮಾಂಡ್ ಟಾಸ್ಕ್ ನೀಡಿದೆಯಂತೆ. ಹೀಗಾಗಿ ಈ ಮಿಷನ್ 50 ಫಾರ್ಮೂಲಾ ಮೂಲಕ ಕೇಸರಿ ಪಡೆ ಕರುನಾಡಿನಲ್ಲಿ ಮತ್ತೆ ಅಧಿಕಾರದ ತಂತ್ರ ರೂಪಿಸಿರುವುದ್ದಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಈ ಟಾರ್ಟೆಟ್‌ 50 ಮಿಷನ್‌ನಲ್ಲಿ ಕಾಂಗ್ರೆಸ್‌ ನಾಯಕರುಗಳಾದ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ನಾಯಕರ ಪಟ್ಟಿಯನ್ನೇ ಬಿಜೆಪಿ ಸಿದ್ದಮಾಡಿಕೊಂಡಿದೆ. ಅದರ‌ ಮೊದಲ ಭಾಗವಾಗಿ ಶಾಸಕ ಪ್ರಿಯಾಂಕ್ ಖರ್ಗೆಯ ಚಿತ್ತಾಪುರ ಕ್ಷೇತ್ರದಲ್ಲೂ ಬಿಜೆಪಿ ನಾಯಕರು ಕಳೆದ ಕೆಲ ದಿನಗಳಿಂದ ಸರಣಿ ಸಮಾವೇಶ ನಡೆಸುತ್ತಿದ್ದಾರೆ.

ಪ್ರಿಯಾಂಕ್‌ ಖರ್ಗೆಗೆ ಸೋಲುಣಿಸಲು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್‌, ಎಮ್‌ಎಲ್‌ಸಿ ಬಾಬುರಾವ್ ಚಿಂಚನಸೂರ್‌‌ಗೆ ಹೈಕಮಾಂಡ್ ಟಾಸ್ಕ್ ನೀಡಿದೆ. ಇನ್ನು ಚಿತ್ತಾಪುರ ಕ್ಷೇತ್ರದಲ್ಲಿ ಕೋಳಿ ಸಮಾಜದ ಮತ ಹೆಚ್ಚಿರುವ ಕಾರಣಕ್ಕೆ ಬಾಬುರಾವ್ ಚಿಂಚನಸೂರಗೆ ಎಂಎಲ್ ಸಿ ಮಾಡಿ ಚಿತ್ತಾಪುರದಲ್ಲಿ ಠಿಕಾಣಿ ಹೂಡಲು ಹೈಕಮಾಂಡ್‌ ಸೂಚಿಸಿದೆ.

ಸದ್ಯ ಬಿಜೆಪಿ ನಡೆಸಿರುವ ಆತಂರಿಕ ಸಮೀಕ್ಷೆಯಲ್ಲಿ 25 ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಸೋಲು ಖಚಿತವಾಗಿದೆ. ಹೀಗಾಗಿ ಟಾರ್ಗೆಟ್‌ 50 ಫಾರ್ಮೂಲಾ ಮೂಲಕ ಕೇಸರಿ ಪಡೆ ಕಾಂಗ್ರೆಸ್‌ ನಾಯಕರ ಕ್ಷೇತ್ರಗಳಲ್ಲಿ ಕಮಲ ಅರಳಿಸಿ ಅಧಿಕಾರಕ್ಕೆ ಬರಲು ಸಜ್ಜಾಗಿದೆ.

ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ

RELATED ARTICLES

Related Articles

TRENDING ARTICLES