Monday, December 23, 2024

ಮುರಘಾ ಶ್ರೀ ಬೇರೆಡೆ ತೆರಳುವುದಕ್ಕೆ ಸಹಾಯ ಮಾಡಿದ್ರಾ ಬಿಗ್ ಬಾಸ್ ಖ್ಯಾತಿಯ ಸ್ವಾಮೀಜಿ.?

ಹಾವೇರಿ: ಲೈಂಗಿಕ ಆರೋಪ ಒತ್ತಿರುವ ಮುರಘಾ ಮಠದ ಶ್ರೀಗಳನ್ನು ಇಂದು ವಶಕ್ಕೆ ಪೊಲೀಸರು ಪಡೆದಿದ್ದರು. ಇಂದು ಮುರುಘಾ ಶ್ರೀ ಬೇರೆಡೆ ತೆರಳುವುದಕ್ಕೆ ಬಿಗ್ ಬಾಸ್ ಖ್ಯಾತಿಯ ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮಿಗಳ ಸಹಾಯ ಮಾಡಿದ್ರಾ ಎಂಬ ಅನುಮಾನ ವ್ಯಕ್ತವಾಗಿದೆ.

ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿರುವ ಅಕ್ಕಿಮಠದ ಮಠಾಧೀಶರಾದ ಗುರುಲಿಂಗ ಸ್ವಾಮಿಗಳು, ಇಂದು ಬೆಳಿಗ್ಗೆ ಹಾವೇರಿ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುಲಿಂಗ ಸ್ವಾಮೀಜಿ ಕಾಣಿಸಿಕೊಂಡಿದ್ದರು. ಮುರಘಾ ಶ್ರೀಗಳು ಜತೆಗೆ ಅವರ ಕಾರಿನಲ್ಲಿ ಗುರುಲಿಂಗ ಸ್ವಾಮಿಗಳು ಇದ್ದರು ಎಂದು ಹೇಳಲಾಗುತ್ತಿದೆ.

ಏನಾದ್ರೂ ಪೋಲಿಸರಿಂದ ತಪ್ಪಿಸೋಕೆ ಮುರುಘಾ ಶ್ರೀಗಳನ್ನ ಪರೋಕ್ಷವಾಗಿ ಗುರುಲಿಂಗ ಸ್ವಾಮಿ ಸಹಾಯ ಮಾಡಿದ್ರಾ, ಈ ಹಿಂದೆ ಮಠದ ಆಸ್ತಿ ವಿಚಾರವಾಗಿ ಮುರಘಾ ಶ್ರೀಗಳೊಂದಿಗೆ ಬಿರುಕು ಹೊಂದಿದ್ದ ಗುರುಲಿಂಗಸ್ವಾಮಿಗಳು. ನಂತರ ಸಮಸ್ಯೆ ಇತ್ಯರ್ಥ ಮಾಡಿಕೊಂಡು ಇಬ್ಬರು ಶ್ರೀಗಳು ಒಂದಾಗಿದ್ದರು. ಈ ಹಿನ್ನಲೆ ಸಹಾಯ ಮಾಡಿದ್ರಾ? ಅಥವಾ ಸೇಡು ತೀರಿಸಿಕೊಂಡ್ರಾ? ಎಂದು ದಟ್ಡವಾದ ಅನುಮಾನಗಳು ಕಾಡುತ್ತಿವೆ.

RELATED ARTICLES

Related Articles

TRENDING ARTICLES