Thursday, January 23, 2025

ಈಗಾಗಿರುವ ಪರಿಸ್ಥಿತಿಯನ್ನು ಬಂದು ಪ್ರತಾಪ್ ಸಿಂಹ ನೋಡಲಿ : ಹೆಚ್​​ಡಿಕೆ

ರಾಮನಗರ : ಬೆಂಗಳೂರು – ಮೈಸೂರು ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಾಕಷ್ಟು ಸಮಸ್ಯೆಯಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಿಂದ ಹಾನಿಯಾಗಿರುವ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದೇನೆ. ಮಳೆ ಹಾನಿಯಿಂದ ಹಾನಿಯಾಗಿರುವ ಪ್ರದೇಶಗಳಲ್ಲಿ ರಕ್ಷಣಾ ಕೆಲಸ ಕೂಡ ಸಾಗಿದೆ.NDRF ಮನೆ ಕಳೆದುಕೊಂಡ ನಿವಾಸಿಗಳ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ ಎಂದರು.

ಇನ್ನು, ಬೆಂಗಳೂರು – ಮೈಸೂರು ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಾಕಷ್ಟು ಸಮಸ್ಯೆಯಾಗಿದೆ. ಸರಿಯಾದ ನಿರ್ವಹಣೆ ಇಲ್ಲದೇ ರಸ್ತೆಗಳಿಗೆ ನೀರು ನುಗ್ಗಿದೆ. ಮೈಸೂರು ಸಂಸದ ಪ್ರತಾಪ್ ಸಂಹ ಅವರು ಹೆದ್ದಾರಿ ಕಾಮಗಾರಿ ಬಗ್ಗೆ ಮಾಹಿತಿ ವಿಚಾರ, ಈಗಾಗಿರುವ ಪರಿಸ್ಥಿತಿಯನ್ನು ಬಂದು ಪ್ರತಾಪ್ ಸಿಂಹ ನೋಡಲಿ. ರಸ್ತೆ ಮೇಲೆ ಬಂದು ಪೋಸ್ ಕೋಡೊದಲ್ಲ. ಏನೆಲ್ಲಾ ಸಮಸ್ಯೆಯಾಗಿದೆಯಲ್ಲ ಅದನ್ನು ಬಂದು ನೋಡಲಿ ಎಂದು ರಾಮನಗರದಲ್ಲಿ ಮಾಜಿ ಸಿಎಂ ಹೆಚ್ ಡಿಕೆ ಹೇಳಿದರು.

RELATED ARTICLES

Related Articles

TRENDING ARTICLES